ಬ್ರೇಕಿಂಗ್ ನ್ಯೂಸ್
24-03-21 11:08 am Headline Karnataka News Network ಕರ್ನಾಟಕ
ಚಿಕ್ಕಮಗಳೂರು, ಮಾ.24: ಕಾಡಿನಿಂದ ನಾಡಿಗೆ ಬಂದಿದ್ದ ಪ್ರಾಣಿಯೊಂದಿಗೆ ಜನ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಸಂತಸಪಟ್ಟ ಅಪರೂಪದ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರದಲ್ಲಿ ನಡೆದಿದೆ.
ತಡರಾತ್ರಿ ಕಾಡುಪಾಪವೊಂದು ಕಾಡಿನಿಂದ ಕೊಟ್ಟಿಗೆಹಾರದ ಪೆಟ್ರೋಲ್ ಬಂಕ್ಗೆ ದಾರಿತಪ್ಪಿ ಬಂದಿದ್ದು ನಾಯಿಗಳಿಂದ ಅಪರೂಪದ ಅತಿಥಿಯನ್ನು ರಕ್ಷಿಸಿದ್ದಾರೆ. ಅಡವಿ ಪಾಪನ ಕಂಡು ಜನ ಸಂತಸಗೊಂಡಿದ್ದಾರೆ. ಮೊದಲಿಗೆ ಭಯವಾದರೂ ಅದು ಕಾಡುಪಾಪ ಎಂದು ತಿಳಿದ ಮೇಲೆ ಪೆಟ್ರೋಲ್ ಬಂಕ್ಗೆ ಬಂದಿದ್ದ ಸವಾರರು ಕಾಡುಪಾಪದೊಂದಿಗೆ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಇನ್ನು ಕಾಡಿನಿಂದ ದಾರಿ ತಪ್ಪಿ ಬಂದಿದ್ದ ಕಾಡುಪಾಪವನ್ನು ಬೀದಿ ನಾಯಿಗಳು ದಾಳಿ ನಡೆಸಿದ್ದವು. ಸದ್ಯ ನಾಯಿ ದಾಳಿಯಿಂದ ಸ್ಥಳೀಯರು ಕಾಡುಪಾಪವನ್ನು ರಕ್ಷಿಸಿದ್ದಾರೆ. ಅಪರೂಪದ ಪ್ರಾಣಿಕಂಡು ಚಕಿತರಾದ ಜನರು ಅದರ ಜೊತೆ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಸಂತಸಗೊಂಡಿದ್ದಾರೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿ ಅವರ ಸಮ್ಮುಖದಲ್ಲೇ ಚಾರ್ಮಾಡಿ ಅರಣ್ಯದಲ್ಲಿ ಕಾಡುಪಾಪ ಬಿಟ್ಟು ಬಂದಿದ್ದಾರೆ.
ಇನ್ನು ಕಾಡುಪಾಪಗಳಿಗೆ ದೊಡ್ಡ ಕಣ್ಣು(ಪಾಪೆ) ಇರುವುದರಿಂದ ಅದನ್ನು ಅಡವಿ ಪಾಪ ಎಂದೂ ಸಹ ಕರೆಯುತ್ತಾರೆ. ಕಾಡು ಪ್ರಾಣಿಗಳಲ್ಲೇ ಇದು ಅತ್ಯಂತ ಮುಗ್ಧ ಜೀವಿ. ಕಾಡುಪಾಪಗಳಿಗೆ ಹೆಚ್ಚು ನಾಚಿಕೆ ಸ್ವಭಾವವಿರುತ್ತೆ. ಇವು ನಿಶಾಚರಿ ಜೀವಿಗಳಾದ್ದರಿಂದ ಜನರ ಕಣ್ಣಿಗೆ ಬೀಳುವುದು ಅಪರೂಪ. ತಂಪು ಹವೆಯ ಎಲೆ ತೋಟಗಳು, ಮಾವಿನಮರ, ನೀಲಗಿರಿ, ಆಲ, ಅರಳಿ, ಹುಣಸೆ ಮರಗಳಲ್ಲಿ ಇವು ಬೀಡು ಬಿಡುತ್ತವೆ. ಹಣ್ಣು, ಕಾಯಿ, ಕೀಟ, ಜೀರುಂಡೆ, ಮಿಡತೆ, ಹಲ್ಲಿ, ಹಾವುರಾಣಿ, ಹಕ್ಕಿಗಳ ಮೊಟ್ಟೆ, ಮರಗಪ್ಪೆ ತಿನ್ನುತ್ತವೆ ಎಂದು ಪ್ರಾಣಿ ಪ್ರಿಯರು ಹೇಳುತ್ತಾರೆ.
Slender loris also called as kadu papa was found in Chikmagalur we're people thronged to click selfies with the animal.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
25-02-25 12:24 pm
Mangalore Correspondent
Puttur News, Dr Anil Baipadithaya, hospital:...
24-02-25 02:50 pm
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
25-02-25 01:37 pm
HK News Desk
Delhi crime, Wife Murder: ತ್ರಿವೇಣಿ ಸಂಗಮದಲ್ಲಿ...
24-02-25 10:51 pm
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm