ಬ್ರೇಕಿಂಗ್ ನ್ಯೂಸ್
25-03-21 07:45 pm Headline Karnataka News Network ಕರ್ನಾಟಕ
ಕೊಲ್ಕತ್ತಾ, ಮಾ.25: ದೇಶದಲ್ಲಿ 30 ಶೇಕಡಾ ಇರುವ ಮುಸ್ಲಿಮರು ಒಂದಾದರೆ, ನಾಲ್ಕು ಪಾಕಿಸ್ಥಾನವನ್ನು ಮಾಡಿಯೇವು. ನಾವು ಒಟ್ಟಾಗಿ ನಾಲ್ಕು ಪಾಕಿಸ್ಥಾನಗಳನ್ನು ಸೃಷ್ಟಿಸಿದರೆ, ಇಲ್ಲಿರುವ 70 ಶೇಕಡಾ ಇತರರು ಎಲ್ಲಿ ಹೋಗಬೇಕು ಎಂದು ಪಶ್ಚಿಮ ಬಂಗಾಳದ ಟಿಎಂಸಿ ನಾಯಕನೊಬ್ಬ ನೀಡಿರುವ ಹೇಳಿಕೆ ಚುನಾವಣೆ ಹೊತ್ತಲ್ಲಿ ವಿವಾದದ ಕಿಡಿ ಎಬ್ಬಿಸಿದೆ.
ಪಶ್ಚಿಮ ಬಂಗಾಳದ ಬೀರ್ ಭೂಮ್ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ನಾಯಕ ಶೇಖ್ ಆಲಂ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಈ ಹೇಳಿಕೆಯನ್ನು ನೀಡಿದ್ದು, ಹೇಳಿಕೆಯ ವಿಡಿಯೋವನ್ನು ಪಶ್ಚಿಮ ಬಂಗಾಳ ಬಿಜೆಪಿ ಸಹ ಪ್ರಭಾರಿ ಅಮಿತ್ ಮಾಳವೀಯ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಅಲ್ಲದೆ, ಈ ಮಾತನ್ನು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರವಾಗಿ ಪಕ್ಷದ ನಾಯಕ ಕೊಟ್ಟಿದ್ದಾರೆ. ಮಮತಾ ಈ ಮಾತನ್ನು ಒಪ್ಪಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಮಮತಾ ಬ್ಯಾನರ್ಜಿ ಕಳೆದ ಹತ್ತು ವರ್ಷಗಳಿಂದ ನಡೆಸಿರುವ ಮುಸ್ಲಿಂ ತುಷ್ಟೀಕರಣದ ನೀತಿಯಿಂದಾಗಿ ಶೇಖ್ ಆಲಂ ದೇಶದಲ್ಲಿ ನಾಲ್ಕು ಪಾಕಿಸ್ಥಾನಗಳನ್ನು ಸೃಷ್ಟಿ ಮಾಡುವ ಹೇಳಿಕೆ ನೀಡಲು ಧೈರ್ಯ ತೋರಿದ್ದಾನೆ. ಇವರು ತಮ್ಮ ಆಡಳಿತದಲ್ಲಿ ಪಶ್ಚಿಮ ಬಂಗಾಳದ ಬಹುಸಂಖ್ಯಾತ ನಾಗರಿಕರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿ ಮಾಡಿದ್ದಾರೆ. ದುರ್ಗಾ ವಿಸರ್ಜನೆ ಮಾಡುವುದಕ್ಕೂ ಬಹುಸಂಖ್ಯಾತರು ಕೋರ್ಟ್ ಪರ್ಮಿಷನ್ ಪಡೆಯಬೇಕಾದ ಸ್ಥಿತಿಯಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಲಂ ನೀಡಿರುವ ಹೇಳಿಕೆಯ ವಿಡಿಯೋದಲ್ಲಿ ಆತನ ಎಚ್ಚರಿಕೆಯ ಮಾತುಗಳು ಹೀಗಿವೆ. ‘’ದೇಶದಲ್ಲಿ 30 ಶೇಕಡಾ ಇದ್ದೇವೆ. ಉಳಿದವರು 70 ಶೇಕಡಾ ಇದ್ದಾರೆ. ಅವರು (ಬಿಜೆಪಿ) ಈ 70 ಶೇಕಡಾ ಮಂದಿಯನ್ನು ಮುಂದಿಟ್ಟುಕೊಂಡು ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೇರುತ್ತೇವೆಂದು ಕೊಂಡರೆ ಅದು ಭ್ರಮೆಯಷ್ಟೇ. ನಾವೊಂದು ವೇಳೆ ಎಲ್ಲ ಸೇರ್ಕೊಂಡು ಒಟ್ಟುಗೂಡಿದರೆ, ದೇಶದ ಮುಸ್ಲಿಮರೆಲ್ಲಾ ಒಗ್ಗಟ್ಟಾದರೆ, ನಾಲ್ಕು ಪಾಕಿಸ್ಥಾನಗಳನ್ನು ಸೃಷ್ಟಿಸಬಹುದು. ಹಾಗಾದರೆ, ದೇಶದ ಇತರೇ 70 ಶೇಕಡಾ ಜನ ಎಲ್ಲಿ ಹೋಗುತ್ತಾರೆ, ಹೇಳಿ...’’ ಎಂದು ಪ್ರಶ್ನೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 27 ಶೇ. ಮುಸ್ಲಿಮ್ ಮತದಾರರಿದ್ದಾರೆ. ಅವರ ಮತಗಳೇ ಅಲ್ಲೀಗ ನಿರ್ಣಾಯಕ. ಇದೇ ಕಾರಣಕ್ಕೆ ಟಿಎಂಸಿ ನಾಯಕರು ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ ಎನ್ನುವ ಟೀಕೆ ಕೇಳಿಬರುತ್ತಿದೆ. ತನ್ನ ಹೇಳಿಕೆ ಬಗ್ಗೆ ನ್ಯೂಸ್ 18 ವಾಹಿನಿಗೆ ಪ್ರತಿಕ್ರಿಯೆ ನೀಡಿರುವ ಶೇಖ್ ಆಲಂ, ನಾಲ್ಕು ಪಾಕಿಸ್ಥಾನಗಳನ್ನು ಸೃಷ್ಟಿಸಬೇಕು ಎನ್ನುವುದು ನನ್ನ ಹೇಳಿಕೆಯ ಅರ್ಥವಲ್ಲ. ಎಲ್ಲರಿಗೂ ನಾನು ಹೇಳೋದು ಏನಂದ್ರೆ, ಮುಸ್ಲಿಮರನ್ನು ಬೆದರಿಸಲು ಬಂದ್ರೆ ನಾವು ಕೂಡ ಬಲವಾಗಿದ್ದೇವೆ ಎನ್ನುವುದನ್ನು ಹೇಳಿದ್ದೇನೆ ಅಷ್ಟೇ ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನಕ್ಕೆ (ಮಾ.27) ಎರಡು ದಿನ ಇರುವಾಗ ಈ ರೀತಿಯ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದೇ ವೇಳೆ, ಈ ಹೇಳಿಕೆ ಬಿಜೆಪಿ ನಾಯಕರ ಪಾಲಿಗೆ ಆಹಾರವಾಗಿ ಪರಿಣಮಿಸಿದೆ.
Trinamool Congress (TMC) leader Sheikh Alam’s purported remarks that “four Pakistan” can be created if India’s “30% Muslims come together” drew flak from the Bharatiya Janata Party (BJP) on Thursday.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm