ಬ್ರೇಕಿಂಗ್ ನ್ಯೂಸ್
26-03-21 05:07 pm Headline Karnataka News Network ಕರ್ನಾಟಕ
ಬೆಂಗಳೂರು, ಮಾ.26: ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಯಾದ 24 ದಿನಗಳ ಬಳಿಕ ಯುವತಿ ತನ್ನ ವಕೀಲರ ಮೂಲಕ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾಳೆ. ರಮೇಶ್ ಜಾರಕಿಹೊಳಿ ಪರಿಚಯ ಹೇಗಾಯ್ತು. ಆಬಳಿಕ ಅವರು ಹೇಗೆಲ್ಲಾ ಲೈಂಗಿಕವಾಗಿ ಬಳಸಿಕೊಂಡರು ಎನ್ನುವ ಬಗ್ಗೆ ಸವಿವರವಾಗಿ ಪತ್ರದಲ್ಲಿ ಬರೆದಿದ್ದು, ನನಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಲೈಂಗಿಕವಾಗಿ ಬಳಸಿಕೊಂಡ ರಮೇಶ್ ಜಾರಕಿಹೊಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಯುವತಿ ನೀಡಿರುವ ಪತ್ರವನ್ನು ಆಕೆಯ ವಕೀಲರಾಗಿರುವ ಜಗದೀಶ್ ಮತ್ತು ಇತರ ಆರು ಮಂದಿಯ ತಂಡ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮುಟ್ಟಿಸಿದೆ. ಯುವತಿ ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ. ಆದರೆ, ಯುವತಿಯ ಹೇಳಿಕೆಯನ್ನು ಪಡೆದ ಬಳಿಕವೇ ಈ ಬಗ್ಗೆ ಮುಂದುವರಿಯುವ ಸಾಧ್ಯತೆ ಇದೆ.
ಆಕೆಯ ಸುದೀರ್ಘ ಪತ್ರದಲ್ಲಿ ತನಗಾದ ನೋವನ್ನು ಆಕೆ ವಿವರಿಸಿದ್ದಾಳೆ. ಕಿರುಚಿತ್ರ ನಿರ್ಮಿಸುವ ಸಲುವಾಗಿ ನಾನು ಅವರನ್ನು ಭೇಟಿಯಾಗಿದ್ದೆ. ಆದರೆ, ಅವರು ನನ್ನ ಮೊಬೈಲ್ ನಂಬರ್ ಪಡೆದು ಸಲುಗೆಯಿಂದ ಮಾತನಾಡಲು ಆರಂಭಿಸಿದ್ದರು. ಸಚಿವರು ಮತ್ತು ದೊಡ್ಡ ವ್ಯಕ್ತಿಯಾಗಿರುವ ಕಾರಣದಿಂದ ನಾನು ಕೂಡ ಅವರೊಂದಿಗೆ ಗೌರವದಿಂದ ನಡೆದುಕೊಂಡೆ. ಆಪ್ತವಾಗಿ ಮಾತನಾಡುತ್ತಿದ್ದುದರಿಂದ ನಂಬಿದ್ದೆ. ಈ ನಡುವೆ, ಸರಕಾರಿ ಉದ್ಯೋಗ ಕೊಡಿಸುವೆ. ಆದರೆ, ನೀನು ನನ್ನೊಂದಿಗೆ ಎಲ್ಲದಕ್ಕೂ ಸಹಕರಿಸಬೇಕು ಎಂದು ಹೇಳಿದ್ದರು. ಸರಕಾರಿ ಕೆಲಸ ಕೊಡಿಸುವುದಾಗಿ ಹೇಳಿದ್ದರಿಂದ ಒಪ್ಪಿದ್ದೆ.
ಒಂದು ದಿನ ದೆಹಲಿಯ ಕರ್ನಾಟಕ ಭವನದಲ್ಲಿದ್ದೇನೆಂದು ಹೇಳಿ ವಿಡಿಯೋ ಕಾಲ್ ಮಾಡಿದ ಜಾರಕಿಹೊಳಿಯವರು ನನ್ನನ್ನು ನಗ್ನವಾಗಿ ತೋರಿಸುವಂತೆ ಹೇಳಿದರು. ಅಲ್ಲದೆ, ಖಾಸಗಿ ಅಂಗಗಳನ್ನು ವಿಡಿಯೋದಲ್ಲಿ ತೋರಿಸಲು ಹೇಳಿದ್ದರು. ಅವರು ಹೇಳಿದಂತೆ, ತೋರಿಸಿದ್ದೆ. ಈ ನಡುವೆ, ಬೆಂಗಳೂರಿನಲ್ಲಿ ಮನೆಯಲ್ಲಿದ್ದೇನೆ. ನೀನು ಬಾ.. ಕೆಲಸದ ಬಗ್ಗೆ ಮಾತನಾಡಲಿಕ್ಕಿದೆ ಎಂದು ಬರಲು ಹೇಳಿದ್ದರು. ನಾನು ಅಲ್ಲಿ ಹೋಗಿದ್ದಾಗ ಅಶ್ಲೀಲವಾಗಿ ಮಾತನಾಡಿ, ಲೈಂಗಿಕವಾಗಿ ಬಳಸಿಕೊಂಡರು. ಆಬಳಿಕವೂ ನನ್ನನ್ನು ಅಲ್ಲಿಗೆ ಬರಹೇಳಿ ಎರಡು ಮೂರು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಇದರ ನಂತರ, ನಾನು ಕೆಲಸದ ಬಗ್ಗೆ ಕೇಳಿದಾಗ, ಈಗ ಬೇಕಿದ್ದರೆ ಒಂದಷ್ಟು ದುಡ್ಡು ಕೇಳು. ಕೆಲಸದ ಬಗ್ಗೆ ಆಮೇಲೆ ಮಾತನಾಡೋಣ ಎಂದು ಹೇಳಿಹೋಗಿದ್ದರು.
ಆನಂತರ ನೀವು ನನ್ನನ್ನು ಹೇಗೆ ಬೇಕೋ ಹಾಗೆ ಬಳಸಿಕೊಂಡು ಈಗ ಕೆಲಸ ಕೊಡುವುದಿಲ್ಲವಾ ಎಂದು ಕೇಳಿದ್ದೆ. ಅದಕ್ಕೆ ನೀನು ಹೋಗೇ ಸೂಳೆ.. ಸೊಂಟದಲ್ಲಿ ಕುಂದು ಇಟ್ಟುಕೊಂಡು ಸರಕಾರಿ ಕೆಲಸ ಕೊಡಿಸೋಕೆ ಆಗುತ್ತಾ ಎಂದು ಬೈದು ಕಳಿಸಿದ್ದರು. ಅದಾದ ಕೆಲವು ದಿನಗಳಲ್ಲಿ ಈ ವಿಡಿಯೋ ಹೊರಬಂದಿದ್ದು, ಇದನ್ನು ರಮೇಶ್ ಜಾರಕಿಹೊಳಿಯವರೇ ಮಾಡಿದ್ದಾರೆ. ನಾನು ಇವರ ವಿರುದ್ಧ ದೂರು ನೀಡದಂತೆ ಈ ರೀತಿಯ ಕೆಲಸ ಮಾಡಿದ್ದಾರೆ. ಹಣವಂತರು, ಪ್ರಭಾವಿಗಳಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಭಯ ಇದೆ.
ನಾನು ನೇರವಾಗಿ ದೂರು ನೀಡದಂತೆ, ಪೊಲೀಸ್ ಇಲಾಖೆಯನ್ನು ಇವರು ಬಳಸಿಕೊಳ್ಳುತ್ತಿದ್ದಾರೆ. ನಾನು ಅವರ ಎದುರಿಗೆ ಸಿಕ್ಕಿರೆ ಕೊಂದು ಬಿಡಲು ಎಲ್ಲ ಪ್ರಯತ್ನ ಮಾಡಿದ್ದಾರೆ. ನನ್ನ ವಿರುದ್ಧ ತೇಜೋವಧೆ ಮಾಡುತ್ತಿದ್ದು, ನನ್ನ ಪರವಾಗಿ ಯಾರು ಕೂಡ ಬಾರದಂತೆ ಮಾಡುತ್ತಿದ್ದಾರೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಭದ್ರತೆ ನೀಡಬೇಕು. ರಮೇಶ್ ಜಾರಕಿಹೊಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನಾನು ನೇರವಾಗಿ ಬರಲು ಸಾಧ್ಯವಾಗದ ಕಾರಣ ವಕೀಲ ಜಗದೀಶ್ ಅವರ ಮೂಲಕ ದೂರು ನೀಡುತ್ತಿದ್ದೇನೆ ಎಂದು ತನ್ನ ಬಿಜಾಪುರದ ವಿಳಾಸ, ಹೆಸರು ಸಹಿತ ಯುವತಿ ದೂರು ನೀಡಿದ್ದಾಳೆ.
As the scandal around the sex CD involving former Minister Ramesh Jarkiholi gets murkier, the woman has now submitted a letter to the police commissioner stating how the minister used her for his lust sexualy.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
25-02-25 02:34 pm
Mangalore Correspondent
Puttur doctor, C Section, Mangalore: ಸಿಸೇರಿಯನ...
25-02-25 12:24 pm
Puttur News, Dr Anil Baipadithaya, hospital:...
24-02-25 02:50 pm
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
25-02-25 01:37 pm
HK News Desk
Delhi crime, Wife Murder: ತ್ರಿವೇಣಿ ಸಂಗಮದಲ್ಲಿ...
24-02-25 10:51 pm
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm