ಸಿಡಿ ಖೆಡ್ಡಾಕ್ಕೆ ಬಿದ್ದ ರಮೇಶ್ ಜಾರಕಿಹೊಳಿ ಮೇಲೆ ಬಿತ್ತು ಕಡೆಗೂ ಎಫ್ಐಆರ್ !!

26-03-21 06:28 pm       Headline Karnataka News Network   ಕರ್ನಾಟಕ

ಸಿಡಿ ಖೆಡ್ಡಾಕ್ಕೆ ಬಿದ್ದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಡೆಗೂ ಎಫ್ಐಆರ್ ದಾಖಲಾಗಿದೆ.

ಬೆಂಗಳೂರು, ಮಾ.26: ಸಿಡಿ ಖೆಡ್ಡಾಕ್ಕೆ ಬಿದ್ದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಡೆಗೂ ಎಫ್ಐಆರ್ ದಾಖಲಾಗಿದೆ. ಯುವತಿ ನೀಡಿರುವ ದೂರಿನ ಆಧಾರದಲ್ಲಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಕೆಲಸ ಕೊಡಿಸುವುದಾಗಿ ಹೇಳಿ ದೌರ್ಜನ್ಯ ನಡೆಸಿದ್ದಾರೆಂದು ಯುವತಿ ವಕೀಲ ಜಗದೀಶ ಕುಮಾರ್ ಮೂಲಕ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ದೂರು ನೀಡಿದ್ದಳು. ದೂರನ್ನು ಪರಿಗಣಿಸಿ, ಪೊಲೀಸ್ ಆಯುಕ್ತರು ಕಬ್ಬನ್ ಪಾರ್ಕ್ ಠಾಣೆಯಲ್ಲಿ ಕೇಸು ದಾಖಲಿಸಿಕೊಳ್ಳಲು ಸೂಚನೆ ನೀಡಿದ್ದಾರೆ.

ಉದ್ದೇಶ ಪೂರ್ವಕ ಲೈಂಗಿಕ ದೌರ್ಜನ್ಯ, ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ಬೈದಿರುವುದು, ಅಧಿಕಾರ ದುರುಪಯೋಗ, ನೌಕರಿ ಕೊಡಿಸುವುದಾಗಿ ವಂಚಿಸಿರುವುದು ಹೀಗೆ ಐಪಿಸಿ 354 ಎ, 506, 504, 376 ಸಿ ಮತ್ತು 417 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

The Cubbon Park police in Bengaluru have registered FIR against former minister Ramesh Jarkiholi based on a handwritten complaint sent by the woman, allegedly in the sex scandal CD, through her advocate Jagadesh Kumar.