ಬ್ರೇಕಿಂಗ್ ನ್ಯೂಸ್
28-03-21 07:21 pm Headline Karnataka News Network ಕರ್ನಾಟಕ
ಬಳ್ಳಾರಿ, ಮಾ.28: ಪಕ್ಷದಲ್ಲಿ ಕೆಲವು ವಿಚಾರಗಳಿಂದಾಗಿ ವಿಚಲಿತವಾಗಿದೆ. ಆದರೆ ಅದರಲ್ಲಿ ನಮ್ಮ ತಪ್ಪಿಲ್ಲ. ಅದು ಮಾಡಿರೋರು ಹಾಗೂ ಮಾಡಿಸಿದೋರು ಅನುಭವಿಸುತ್ತಾರೆ, ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಹಾಗೂ ಚಿತ್ರ ನಟ ಜಗ್ಗೇಶ್ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಗೆ ಸೇರಬೇಕೆಂದು ಹೋದವನಲ್ಲ. ಆದರೆ ಡಿಕೆಶಿ ಅವರು ನನ್ನ ಒಳ್ಳೆಯ ಸ್ನೇಹಿತರು, ಅವರ ಕಾರಣದಿಂದ ನಾನು ರಾಜಕೀಯಕ್ಕೆ ಬಂದಿದ್ದೇನೆ. ನನ್ನನ್ನು ತುರುವೇಕೆರೆ ಕ್ಷೇತ್ರದಲ್ಲಿ ನಿಲ್ಲಿಸಿದ್ದರು. ಅಲ್ಲಿ ನಾನು ಸೋಲು ಅನುಭವಿಸಿದೆ. ನನ್ನ ಮನೆ, ಮಠಗಳನ್ನು ಮಾರಿಕೊಂಡು ರಾಜಕಾರಣ ಮಾಡಿದೆ. ಇದರ ಮಧ್ಯೆ ಎಂಡಿ ಲಕ್ಷ್ಮಿ ನಾರಾಯಣ ಎನ್ನುವ ವ್ಯಕ್ತಿ , ನನ್ನ ಜೀವನಕ್ಕೆ ಬೆಂಕಿ ಇಟ್ಟರು. ಕಾಂಗ್ರೆಸ್ ನಲ್ಲಿದ್ದಾಗ ಕಾಂಗ್ರೆಸ್ ನ ಕೋಟ್ಯಾಂತರ ಹಣ ಕೊಳ್ಳೆ ಹೊಡೆದುಕೊಂಡು ಹೋಗಿದ್ದಾನೆ ಎಂದು ನನ್ನ ಮಾನ ಮರ್ಯಾದೆ ಹರಾಜು ಹಾಕಿದ ವ್ಯಕ್ತಿ ಎಂದು ಜಗ್ಗೇಶ್ ಹಳೆಯ ನೆನಪನ್ನು ಮೆಲುಕು ಹಾಕಿದರು.
ಆದರೆ ಅಲ್ಲಿಂದ ರಾಜಕಾರಣ ಬೇಡ ಎಂದು ಬರುತ್ತಿದ್ದವನಿಗೆ ನನ್ನ ಅಭಿಮಾನಿಗಳು ತಡೆದು ಮತ್ತೆ ಚುನಾವಣೆಗೆ ನಿಲ್ಲಬೇಕು ಎಂದು ಒತ್ತಾಯಿಸಿದರು. ನಂತರ ನಾನು ಕೂಡ ನಿಂತು ಗೆದ್ದೆ, ಶಾಸಕನಾದೆ, ವಿಧಾನ ಪರಿಷತ್ ಸದಸ್ಯನಾದೆ. ಆದರೆ ನಾನು ಯಾವಾಗಲೂ ಅಧಿಕಾರಕ್ಕಾಗಿ ಅಂಟಿ ಕುಳಿತುಕೊಳ್ಳಲಿಲ್ಲ. ನನಗೆ 2014 ರಿಂದ ಯಾವುದೇ ಅಧಿಕಾರವಿಲ್ಲ. ನಾನು ಒಬ್ಬ ಸಂಘಟಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.
ಆದರೆ ಇಂತಹ ಪಕ್ಷಕ್ಕೆ ತೊಂದರೆ ಕೊಡಲು ಯಾರೇ ಎಷ್ಟು ಪ್ರಯತ್ನ ಪಟ್ಟರೂ ಅದು ನಡೆಯುವುದಿಲ್ಲ. ಬಿಜೆಪಿಯ ರಥ ನಿರಂತರವಾಗಿ ಸಾಗುತ್ತದೆ ಎಂದರು.
Kannada actor jaggesh remembers his past bad experiences in congress party talking to the media persons in Bellary.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm