ಬ್ರೇಕಿಂಗ್ ನ್ಯೂಸ್
29-03-21 05:15 pm Headline Karnataka News Network ಕರ್ನಾಟಕ
ಬೆಂಗಳೂರು, ಮಾ.29: ಶಿವಮೊಗ್ಗದ ಸ್ಫೋಟ ಪ್ರಕರಣದ ಬಳಿಕ ನಿಂತು ಹೋಗಿರುವ ಗಣಿಗಳನ್ನು ಮತ್ತೆ ಪುನರಾರಂಭಿಸಲು ಷರತ್ತುಬದ್ಧ ಅನುಮತಿ ನೀಡಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಗಣಿಗಳನ್ನು ಪುನರ್ ಆರಂಭಿಸುವವರು 90 ದಿನಗಳ ಒಳಗೆ ಗಣಿ ಮತ್ತು ಸುರಕ್ಷತಾ ವಿಭಾಗದ ಮಹಾನಿರ್ದೇಶಕರಿಂದ (ಡಿಜಿಎಂಎಸ್) ಅನುಮತಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಡಿಜಿಎಂಎಸ್ ಪರವಾನಗಿ ಪಡೆದು ನಡೆಯುವ ಗಣಿಗಳು ಕೇವಲ ಹತ್ತು ಶೇಕಡಾ ಅಷ್ಟೇ. ಉಳಿದ 90 ಶೇಕಡಾ ಗಣಿಗಳು ಈ ಅನುಮತಿಯನ್ನು ಹೊಂದಿಲ್ಲ. ಈ ರೀತಿ ಅನುಮತಿ ಪಡೆಯದ ಕಲ್ಲಿನ ಕೋರೆಗಳೇ ರಾಜ್ಯದಲ್ಲಿ 2500ಕ್ಕೂ ಹೆಚ್ಚು ಇದೆ. ಡಿಜಿಎಂಎಸ್ ಅನುಮತಿ ಪಡೆಯದ ಹೊರತು ಕಲ್ಲಿನ ಕೋರೆ ಪುನರಾರಂಭ ಸಾಧ್ಯವಿಲ್ಲ ಎಂದು ನಿರಾಣಿ ತಿಳಿಸಿದ್ದಾರೆ.
ಗಣಿಗಳ ಚಟುವಟಿಕೆ ನಿಂತು ಹೋದ ಕಾರಣ 300 ಕೋಟಿಯಷ್ಟು ನಷ್ಟವಾಗಿದೆ. ಹಲವಾರು ಗಣಿಗಳಲ್ಲಿ ಕಾರ್ಮಿಕರನ್ನು ತೆಗೆದು ಹಾಕಿದ್ದು, ಉದ್ಯೋಗ ನಷ್ಟವಾಗಿದೆ. ಗಣಿ ಸ್ಥಗಿತಗೊಂಡ ಕಾರಣ ಕಟ್ಟಡಗಳ ನಿರ್ಮಾಣ ಕಾರ್ಯ ನಿಂತು ಹೋಗಿದ್ದು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಒಂದೆಡೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ನಷ್ಟವಾಗಿದೆ. ಇದರಿಂದಾಗಿ ಗಣಿ ಚಟುವಟಿಕೆಯಲ್ಲಿ ತೊಡಗಿರುವ ಮಂದಿ ಗಣಿಗಾರಿಕೆ ಪುನರಾರಂಭಿಸಲು ಕೋರಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಸಭೆ ನಡೆಸಿದ್ದು, ಯಾವುದೇ ಕಾರಣಕ್ಕೂ ಡಿಜಿಎಂಎಸ್ ಅನುಮತಿ ಇಲ್ಲದೆ ಗಣಿಗಾರಿಕೆ ನಡೆಸಲು ಅವಕಾಶ ನೀಡಿಲ್ಲ.
ಡಿಜಿಎಂಎಸ್ ಅನುಮತಿಯಿಲ್ಲದೆ ಸ್ಫೋಟಕಗಳನ್ನು ಖರೀದಿಸಲು ಮತ್ತು ಇರಿಸಿಕೊಳ್ಳಲು ಗಣಿಗಳಿಗೆ ಅವಕಾಶ ಇಲ್ಲ. ಎರಡು ಕೆಜಿಯಷ್ಟು ಸ್ಫೋಟಕ ಗಣಿಗಳಲ್ಲಿ ಬಳಸಲು ಡಿಜಿಎಂಎಸ್ ಅನುಮತಿ ಬೇಕಿಲ್ಲ ಎಂದರು.
quarries that were inactive after quarry blast will now go active in Karnataka minister Murugesh Nirani
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
25-02-25 02:34 pm
Mangalore Correspondent
Puttur doctor, C Section, Mangalore: ಸಿಸೇರಿಯನ...
25-02-25 12:24 pm
Puttur News, Dr Anil Baipadithaya, hospital:...
24-02-25 02:50 pm
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
25-02-25 01:37 pm
HK News Desk
Delhi crime, Wife Murder: ತ್ರಿವೇಣಿ ಸಂಗಮದಲ್ಲಿ...
24-02-25 10:51 pm
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm