ಬ್ರೇಕಿಂಗ್ ನ್ಯೂಸ್
30-03-21 06:42 pm Headline Karnataka News Network ಕರ್ನಾಟಕ
ಬೆಂಗಳೂರು, ಮಾ.30: ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿರುವ ಸಿಡಿ ಪ್ರಕರಣ ನಡೆದು 28 ದಿನಗಳ ಬಳಿಕ ಸಿಡಿ ಪ್ರಕರಣದ ಯುವತಿ ಇಂದು ದಿಢೀರ್ ಬೆಂಗಳೂರಿನ ಕೋರ್ಟಿಗೆ ಹಾಜರಾಗಿದ್ದಾಳೆ.
ವಸಂತನಗರದ ಗುರುನಾನಕ್ ಭವನದ ಕೋರ್ಟ್ ಹಾಲ್ ನಲ್ಲಿ ನ್ಯಾಯಾಧೀಶರ ಮುಂದೆ ಹಾಜರಾಗಿದ್ದು, ಗುಪ್ತವಾಗಿ ಹೇಳಿಕೆ ದಾಖಲು ಮಾಡಿದ್ದಾಳೆ. ನ್ಯಾಯಾಧೀಶರು ಮತ್ತು ಟೈಪಿಸ್ಟ್ ಇಬ್ಬರ ಎದುರಲ್ಲಿ ಯುವತಿ ತನ್ನ ಹೇಳಿಕೆಯನ್ನು ನೀಡಿದ್ದಾಳೆ. ಮಧ್ಯಾಹ್ನ 3.30ಕ್ಕೆ ಮಾಧ್ಯಮಗಳ ಕಣ್ತಪ್ಪಿಸಿ ಕೋರ್ಟಿಗೆ ಹಾಜರಾದ ಯುವತಿ, ಅಲ್ಲಿ ನ್ಯಾಯಾಧೀಶರ ಮುಂದೆ ಒಟ್ಟು ಘಟನೆಯ ಬಗ್ಗೆ ವಿವರಿಸಿದ್ದಾಳೆ ಎನ್ನಲಾಗುತ್ತಿದೆ.
ಇದಕ್ಕೂ ಮುನ್ನ ನ್ಯಾಯಾಧೀಶರಿಗೆ ಇಮೇಲ್ ಸಂದೇಶ ಕಳುಹಿಸಿದ್ದ ಯುವತಿ, ನಿಮ್ಮ ಮೇಲುಸ್ತುವಾರಿಯಲ್ಲಿ ಎಸ್ಐಟಿ ತನಿಖೆ ನಡೆಯಬೇಕು. ಈಗಾಗ್ಲೇ ರಮೇಶ್ ಜಾರಕಿಹೊಳಿ ಸರಕಾರ ಮತ್ತು ಎಸ್ಐಟಿ ತಂಡದ ಮೇಲೆ ಪ್ರಭಾವ ಬೀರಿದ್ದಾರೆ. ನಮ್ಮ ಹೆತ್ತವರಿಗೆ ಎಸ್ಐಟಿ ತಂಡದ ಡಿವೈಎಸ್ಪಿ ಒಬ್ಬರು ಒತ್ತಡ ಹಾಕಿದ್ದು, ರಮೇಶ್ ಜಾರಕಿಹೊಳಿ ಪರ ಹೇಳಿಕೆ ನೀಡಲು ಒತ್ತಡ ಹೇರಿದ್ದಾರೆ. ಜಾರಕಿಹೊಳಿ ಸಾಕ್ಷಿ ನಾಶ ಮಾಡುತ್ತಿದ್ದಾರೆ. ಕೋರ್ಟ್ ನನಗೆ ರಕ್ಷಣೆ ನೀಡಬೇಕೆಂದು ಕೇಳಿಕೊಂಡಿದ್ದಳು.
ಈ ಹಿನ್ನೆಲೆಯಲ್ಲಿ ಯುವತಿ ನೀಡುವ ಹೇಳಿಕೆಯನ್ನು ಆಧರಿಸಿ, ನ್ಯಾಯಾಧೀಶರು ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದೇ ವೇಳೆ, ಎಸ್ಐಟಿ ಅಧಿಕಾರಿಗಳು ಕೂಡ ನ್ಯಾಯಾಲಯದ ಆವರಣಕ್ಕೆ ಆಗಮಿಸಿದ್ದಾರೆ. ಆದರೆ, ಕೋರ್ಟ್ ಒಳಗೆ ಹೋಗಲು ಯಾರಿಗೂ ಅನುಮತಿ ನೀಡಲಾಗಿಲ್ಲ. ಇದೇ ವೇಳೆ, ಎಸ್ಐಟಿ ತಂಡ ಯುವತಿಯನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರ್ಟಿಗೆ ಅಹವಾಲು ಮಂಡಿಸಿದ್ದಾರೆ.
ಈಗಾಗ್ಲೇ ಕಬ್ಬನ್ ಪಾರ್ಕ್ ಠಾಣೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಮತ್ತು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಯುವತಿ ಪ್ರಕರಣ ದಾಖಲಿಸಿದ್ದಾಳೆ. ಇವೆಲ್ಲ ಕಾರಣದಿಂದ ಯುವತಿಯ ಹೇಳಿಕೆ ಮಹತ್ವ ಪಡೆಯಲಿದ್ದು, ಹೇಳಿಕೆ ಆಧರಿಸಿ ನ್ಯಾಯಾಧೀಶರು ಆರೋಪಿತ ರಮೇಶ್ ಜಾರಕಿಹೊಳಿಯನ್ನು ಬಂಧಿಸಲು ಸೂಚನೆ ನೀಡುವ ಸಾಧ್ಯತೆಯೂ ಇದೆ. ಇದೇ ವೇಳೆ, ಯುವತಿಯನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಒಟ್ಟು ಪ್ರಕರಣದ ಬಗ್ಗೆ ಭಾರೀ ಕುತೂಹಲ ಎದ್ದಿದೆ.
ಎಸ್ಐಟಿ ತಂಡದ ಅಧಿಕಾರಿಗಳು ರಾಜ್ಯದಾದ್ಯಂತ ಹುಡುಕಾಟ ನಡೆಸಿದ್ದರೂ, ಅವರಿಗೆ ಸಿಗದೆ ನಿಗೂಢ ಜಾಗದಲ್ಲಿ ತಲೆಮರೆಸಿಕೊಂಡಿದ್ದ ಯುವತಿ ಸರಣಿಯಂತೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಳು. ಜೊತೆಗೆ ಬೆಂಗಳೂರಿನಲ್ಲಿ ಪ್ರಭಾವಿ ವಕೀಲರ ಮೂಲಕ ಹೋರಾಟವನ್ನೂ ಆರಂಭಿಸಿದ್ದಾಳೆ. ಹೀಗಾಗಿ ಯುವತಿ ಹಿಂದೆ ಪ್ರಭಾವಿಗಳೇ ಇದ್ದಾರೆ ಎನ್ನುವ ಅನುಮಾನವೂ ವ್ಯಕ್ತವಾಗಿದೆ. ಪೊಲೀಸ್ ವ್ಯವಸ್ಥೆ ಮತ್ತು ರಾಜ್ಯ ಸರಕಾರಕ್ಕೇ ಸವಾಲಾಗಿದ್ದ ಯುವತಿ ದಿಢೀರ್ ಆಗಿ ಬೆಂಗಳೂರಿನ ಕೋರ್ಟಿಗೆ ಆಗಮಿಸಿದ್ದು ಹೇಗೆ ಎನ್ನುವ ವಿಚಾರವೂ ಈಗ ಕುತೂಹಲಕ್ಕೆ ಕಾರಣವಾಗಿದೆ.
Sex CD Scandal Ramesh Jarkiholi case CD girl appears before the ACMM court Judge and a typist at Special court in GuruNanak bhavan near Vasanath Nagar in Bengaluru.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
25-02-25 02:34 pm
Mangalore Correspondent
Puttur doctor, C Section, Mangalore: ಸಿಸೇರಿಯನ...
25-02-25 12:24 pm
Puttur News, Dr Anil Baipadithaya, hospital:...
24-02-25 02:50 pm
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
25-02-25 01:37 pm
HK News Desk
Delhi crime, Wife Murder: ತ್ರಿವೇಣಿ ಸಂಗಮದಲ್ಲಿ...
24-02-25 10:51 pm
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm