ಲಸಿಕೆ ಪಡೆದರೂ, 15 ದಿನಗಳಲ್ಲಿ ಮೈಸೂರು ಮೇಯರ್ ಗೆ ಸೋಂಕು !

02-04-21 12:49 pm       Headline Karnataka News Network   ಕರ್ನಾಟಕ

ಮೇಯರ್ ರುಕ್ಮಿಣಿ ಮಾದೇಗೌಡ ಕಳೆದ ಮಾರ್ಚ್ 13ರಂದು ಕರೊನಾ ಲಸಿಕೆ ಪಡೆದರೂ ಕರೊನಾ ಪಾಸಿಟಿವ್ ದೃಢಪಟ್ಟಿದೆ.

ಮೈಸೂರು, ಎ.2: ಕೊರೊನಾ ಲಸಿಕೆ ಪಡೆದರೂ, 15 ದಿನಗಳ ಬಳಿಕ ಮೈಸೂರು ಮೇಯರ್‌ಗೆ ಕರೊನಾ ಪಾಸಿಟಿವ್ ಆಗಿರುವುದು ಕಂಡುಬಂದಿದ್ದು ಅಚ್ಚರಿ ಮೂಡಿಸಿದೆ. 

ಮೇಯರ್ ರುಕ್ಮಿಣಿ ಎಸ್. ಮಾದೇಗೌಡ ಮತ್ತು ಅವರ ಪತಿ ಜಿಲ್ಲಾ ಪಂಚಾಯಿತಿ ಸದಸ್ಯ ಮಾದೇಗೌಡರಿಗೆ ಕರೊನಾ ಸೋಂಕು ದೃಢವಾಗಿದೆ. ಅವರಬ್ಬರನ್ನೂ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ಮೇಯರ್ ರುಕ್ಮಿಣಿ ಮಾದೇಗೌಡ ಕಳೆದ ಮಾರ್ಚ್ 13ರಂದು ಕರೊನಾ ಲಸಿಕೆ ಪಡೆದಿದ್ದು ಇತ್ತೀಚಿಗೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಲಸಿಕೆ ಪಡೆದರೂ ಸೋಂಕು ತಗುಲಿರುವ ಬಗ್ಗೆ ಮೇಯರ್ ಸ್ವತಃ ಅಚ್ಚರಿ ವ್ಯಕ್ತಪಡಿಸಿದ್ದಾರೆ.