ಬ್ರೇಕಿಂಗ್ ನ್ಯೂಸ್
02-04-21 08:09 pm Headline Karnataka News Network ಕರ್ನಾಟಕ
ಮೈಸೂರು, ಎ.2 : ಸರಕಾರದ ಇಲಾಖೆಯಲ್ಲಿ ರೂಲ್ಸ್ ಪ್ರೊಸೀಜರ್ ಮೀರಬಾರದೆಂಬುದು ನನ್ನ ಉದ್ದೇಶ. ಇದು ನನ್ನ ಮತ್ತು ಯಡಿಯೂರಪ್ಪ ನಡುವಿನ ವೈಯುಕ್ತಿಕ ವಿಚಾರವಲ್ಲ. ನನ್ನ ಇಲಾಖೆಗೆ ಹಣಕಾಸು ಇಲಾಖೆ ಹಣ ನೀಡುತ್ತೆ. ಆ ಹಣವನ್ನು ನಾನು, ನನ್ನ ಇಲಾಖೆ ಖರ್ಚು ಮಾಡಬೇಕು. ಇದು ನಮ್ಮ ಇಲಾಖೆಯ ಹಕ್ಕು. ಆದ್ರೆ ನನ್ನ ಗಮನಕ್ಕೆ ಬಾರದೇ ನೇರವಾಗಿ ಶಾಸಕರಿಗೆ ಹಂಚಿಕೆ ಮಾಡಿರುವುದು ನನ್ನ ಗಮನಕ್ಕೆ ಬಂತು. ಬೆಂಗಳೂರು ನಗರ ಜಿಪಂ ಒಂದಕ್ಕೆ 65 ಕೋಟಿ ಬಿಡುಗಡೆಯಾಗಿದೆ. ಒಟ್ಟು ರಾಜ್ಯದಲ್ಲಿ 1299 ಕೋಟಿ ರೂ. ಅನುದಾನವನ್ನು ಕಾನೂನು ಉಲ್ಲಂಘಿಸಿ ನೇರ ಹಂಚಿಕೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿ, ಹಿರಿಯರಿಗೆ ಪತ್ರ ಬರೆದಿದ್ದೇನೆ..
ಹೀಗೆಂದು ಸಿಎಂ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದು ಅಸಮಾಧಾನ ಹೊರಹಾಕಿರುವ ಹಿರಿಯ ಸಚಿವ ಕೆ.ಎಸ್ ಈಶ್ವರಪ್ಪ ಸಮರ್ಥನೆ ಕೊಟ್ಟಿದ್ದಾರೆ.
ಈ ಬಗ್ಗೆ ನಾನು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ನಳಿನ್ ಕಟೀಲ್ ಕುಮಾರ್ ಕಟೀಲ್ ಅವರ ಗಮನಕ್ಕೆ ತಂದಿದ್ದೇನೆ. ಪ್ರಧಾನಿ ಮೋದಿ, ಅಮಿತ್ ಶಾ ಎಲ್ಲರಿಗೂ ಪತ್ರ ಬರೆದಿದ್ದೇನೆ ಎಂದು ಹೇಳಿದ ಈಶ್ವರಪ್ಪ , ಆದೇಶ ಹೊರಡಿಸಿದ ಬಳಿಕ ಸಂಬಂಧಪಟ್ಟ ಸಚಿವರ ಗಮನಕ್ಕೆ ತನ್ನಿ ಎಂದು ಸಿಎಂ ಹೇಳಿರುವುದು ಎಷ್ಟು ಸರಿ. ನಾನು ಆರ್‌ಡಿಪಿಆರ್ ಪ್ರಿನ್ಸಿಪಲ್ ಕಾರ್ಯದರ್ಶಿ ಕೇಳಿದಾಗ, ಇಲ್ಲ ಸರ್, ಅನುದಾನ ತಡೆ ಹಿಡಿಯಲಾಗಿದೆ ಎಂದು ಹೇಳಿದ್ದಾರೆ. ಅರುಣ್ ಸಿಂಗ್, ಕಟೀಲ್, ಸಿ.ಟಿ.ರವಿ ಎಲ್ಲರೂ ತಡೆ ಹಿಡಿಯಿರಿ ಎಂದು ಹೇಳಿದ್ರು. ಸಿಎಂ ನೇರವಾಗಿ ನನ್ನ ಇಲಾಖೆಗೆ ಅನುದಾನ ನೀಡಿ ಹಂಚಿಕೆ ಮಾಡಬೇಕು. ಈ ರೂಲ್ಸ್ ಪ್ರೊಸೀಜರ್ ಪಾಲನೆ ಆಗಬೇಕೆಂಬುದು ನನ್ನ ಉದ್ದೇಶ ಎಂದು ಹೇಳಿದರು.
ಹಾಗೆಂದು ಮಾಧ್ಯಮಗಳು ನನ್ನ ಬಗ್ಗೆ ರೆಬಲ್ ಅಂತ ತೋರಿಸುವುದಲ್ಲ. ನನ್ನ ಜಾಯಮಾನದಲ್ಲಿ ರೆಬಲ್ ಆಗಲ್ಲ. ನಾನು ರೆಬಲ್ ಅಲ್ಲ, ನಾನು ಲಾಯಲ್. ನನ್ನ ಜೀವನದಲ್ಲಿ ಪಕ್ಷದ ವಿರುದ್ಧ ರೆಬಲ್ ಆಗಿಲ್ಲ ಎಂದು ಹೇಳಿದರು.
The controversy triggered in Karnataka by state minister K.S. Eshwarappa’s letter to the governor against B.S. Yediyurappa comes as the latest challenge for the besieged chief minister.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
25-02-25 02:34 pm
Mangalore Correspondent
Puttur doctor, C Section, Mangalore: ಸಿಸೇರಿಯನ...
25-02-25 12:24 pm
Puttur News, Dr Anil Baipadithaya, hospital:...
24-02-25 02:50 pm
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
25-02-25 05:18 pm
Mangalore Correspondent
Kerala Murder, Crime, Affan: ತಿರುವನಂತಪುರ ; ಒಂ...
25-02-25 01:37 pm
Delhi crime, Wife Murder: ತ್ರಿವೇಣಿ ಸಂಗಮದಲ್ಲಿ...
24-02-25 10:51 pm
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm