ಬ್ರೇಕಿಂಗ್ ನ್ಯೂಸ್
22-04-21 11:31 am Headline Karnataka News Network ಕರ್ನಾಟಕ
ಬೆಂಗಳೂರು, ಏ.22: : ಕೊವಿಡ್ RT-PCR ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಿದ ಬಳಿಕ ಪರೀಕ್ಷಾ ಫಲಿತಾಂಶವನ್ನು ಅತಿ ಶೀಘ್ರದಲ್ಲಿ ಪ್ರಕಟಿಸಬೇಕು. ಪರೀಕ್ಷೆಯ ವರದಿಯನ್ನು 24 ಗಂಟೆಯೊಳಗೆ ನೀಡುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅಲ್ಲದೇ, ಪರೀಕ್ಷಾ ಮಾಹಿತಿಯನ್ನು 24 ಗಂಟೆಗಳ ಅವಧಿಯೊಳಗಾಗಿ ICMR ಪೋರ್ಟಲ್ನಲ್ಲಿ ನಮೂದಿಸಬೇಕು ಎಂದು ಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.


ಕರ್ನಾಟಕದಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದೆ. ನಿನ್ನೆ (ಏಪ್ರಿಲ್ 21) 23,558 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟು 116 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 13,640 ಜನರಲ್ಲಿ ಸೋಂಕು ದೃಢಪಟ್ಟಿದ್ದು, 70 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 12,22,202ಕ್ಕೆ (12.22 ಲಕ್ಷ) ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 13,762 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರ ಪೈಕಿ 10,32,233 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ 17,6,188 ಸೋಂಕಿತರು ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿಂದು ಒಂದೇ ದಿನ 13,640 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಲ್ಲಿ ಕೊರೊನಾ ಪೀಡಿತರ ಒಟ್ಟು ಸಂಖ್ಯೆ 5,83,675ಕ್ಕೆ ಏರಿಕೆಯಾಗಿದೆ. ಈ ಪೈಕಿ 4,53,398 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 70 ಜನರ ಬಲಿ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 5,382 ಜನರು ಸಾವನ್ನಪ್ಪಿದ್ದಾರೆ. 1,24,894 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾ ಸೋಂಕು ಇಷ್ಟೊಂದು ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವಾಗ ಕೊವಿಡ್ ಪರೀಕ್ಷೆ ವರದಿ ಬರಲು ಹೆಚ್ಚಿನ ಕಾಲಾವಧಿ ನೀಡಿದರೆ ಸೋಂಕು ಹೆಚ್ಚಳಕ್ಕೆ ಇನ್ನಷ್ಟು ಇಂಬು ನೀಡಿದಂತಾಗುತ್ತಿತ್ತು. ಹೀಗಾಗಿ ಕೋರ್ಟ್ ನಿರ್ದೇಶನ ಮಹತ್ವ ಪಡೆದಿದೆ.
The Karnataka High Court directed the State Government to issue appropriate orders to all recognised laboratories to provide test results to patients who have undergone RT-PCR test at the earliest and not later than 24-hours.
25-05-26 09:38 pm
HK News Staffer
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
26-05-26 12:54 pm
HK News Staffer
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
25-05-26 09:57 pm
HK News Staffer
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
26-05-26 02:43 pm
HK News Staffer
ಪಿಯುಸಿ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ ;...
26-05-26 11:56 am
Tablet Arif Murder: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರ...
25-05-26 11:00 pm
ಭಟ್ಕಳದಲ್ಲಿ ಮುರಿದ ಕೋಮು ಸಾಮರಸ್ಯದ ಕಟ್ಟೆ; ರಸ್ತೆ ನ...
25-05-26 09:40 pm
ಮುಸ್ಲಿಂ ಲೀಗ್ ಶಾಸಕನ ಬಗ್ಗೆ ವಾಟ್ಸಾಪ್ ಗ್ರೂಪಿನಲ್ಲಿ...
25-05-26 04:26 pm