ಬ್ರೇಕಿಂಗ್ ನ್ಯೂಸ್
07-05-21 08:02 pm Satish, Bengaluru Correspondent ಕರ್ನಾಟಕ
ಬೆಂಗಳೂರು, ಮೇ 7: ರಾಜ್ಯದಲ್ಲಿ ಲಾಕ್ಡೌನ್ ಆದೇಶವನ್ನು ಮತ್ತೆ 14 ದಿನಗಳಿಗೆ ವಿಸ್ತರಣೆ ಮಾಡಲಾಗಿದ್ದು, ಮೇ 10ರಿಂದ 24ರ ವರೆಗೆ ಕಠಿಣ ನಿಯಮಗಳನ್ನು ಹೇರುವ ಮೂಲಕ ಹೊಸ ಮಾರ್ಗಸೂಚಿ ಆದೇಶ ಮಾಡಲಾಗಿದೆ.
ಈ ಬಗ್ಗೆ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ್ದಾರೆ. ಕೊರೊನಾ ಎರಡನೇ ಅಲೆ ಹರಡುವುದನ್ನು ತಪ್ಪಿಸಲು ಮತ್ತೆ ಲಾಕ್ಡೌನ್ ಹೇರುವುದು ಅನಿವಾರ್ಯ. ಹೊಟೇಲ್, ಪಬ್, ಬಾರ್, ಕೈಗಾರಿಕಾ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ದಿನಸಿ, ತರಕಾರಿ, ಹಾಲು ಖರೀದಿಗೆ ಬೆಳಗ್ಗೆ 6ರಿಂದ ಹತ್ತು ಗಂಟೆ ವರೆಗೆ ಅವಕಾಶ ನೀಡಲಾಗುವುದು. ಆದರೆ, ವಾಹನ ಬಳಕೆಗೆ ಅವಕಾಶ ಇಲ್ಲ. ನಡೆದುಕೊಂಡೇ ಬಂದು ದಿನಸಿ ಸಾಮಗ್ರಿ ಪಡೆಯಬಹುದು.

ಬೆಳಗ್ಗೆ ಹತ್ತರಿಂದ ಯಾರು ಕೂಡ ಓಡಾಡುವಂತಿಲ್ಲ. ಪೊಲೀಸರು ಕಟ್ಟುನಿಟ್ಟಾಗಿ ಈ ಕಾನೂನನ್ನು ಪಾಲನೆ ಮಾಡಲಿದ್ದಾರೆ. ಇದರ ಜೊತೆಗೆ ಅಂತರ್ ಜಿಲ್ಲಾ ವಾಹನ ಸಂಚಾರವನ್ನು ನಿಷೇಧ ಮಾಡಲಾಗಿದೆ. ಸರಕು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಮೊದಲೇ ನಿಗದಿಯಾಗಿರುವ ಮದುವೆ ಕಾರ್ಯಕ್ರಮಗಳಿಗೆ 50 ಜನರಿಗೆ ಮೀರದಂತೆ ನಡೆಸಲು ಅನುಮತಿ ನೀಡಲಾಗಿದೆ. ಇದೇ ವೇಳೆ, ರೈಲು ಮತ್ತು ವಿಮಾನ ಯಾನ ಎಂದಿನಂತೆ ಇರಲಿದೆ, ಅದನ್ನು ನಿರ್ಬಂಧಿಸುವ ಅಧಿಕಾರ ನಮ್ಮ ಕೈಲಿಲ್ಲ. ಬೆಂಗಳೂರಿನಲ್ಲಿ ಸಂಚರಿಸುವ ಮೆಟ್ರೋ ರೈಲನ್ನು ನಿಷೇಧಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ರೈಲು, ವಿಮಾನ ಸಂಚಾರ ಮಾಡುವವರು ಟಿಕೆಟ್ ಪಡೆದು ಸಂಚರಿಸಬೇಕು. ಟ್ಯಾಕ್ಸಿ ವಾಹನಗಳಿಗೆ ಅವಕಾಶ ಇರುವುದಿಲ್ಲ. ಆದರೆ, ಎಮರ್ಜೆನ್ಸಿ ಅಗತ್ಯಗಳಿಗೆ ಮಾತ್ರ ಟ್ಯಾಕ್ಸಿ ಬಳಸಲು ಅವಕಾಶ ನೀಡಲಾಗಿದೆ. ಫುಡ್ ಡೆಲಿವರಿ ಮಾಡುವ ಏಜನ್ಸಿಗಳಿಗೆ ಅವಕಾಶ ನೀಡಲಾಗಿದೆ. ಇನ್ನು ಎಲ್ಲ ರೀತಿಯ ಧಾರ್ಮಿಕ, ರಾಜಕೀಯ ಸಭೆ, ಆಚರಣೆಗಳಿಗೆ ಅವಕಾಶ ಇರಲ್ಲ. ಸಾರಿಗೆ ಸಂಚಾರಕ್ಕೆ ಸಂಪೂರ್ಣ ನಿಷೇಧಿಸಲಾಗಿದೆ. ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿ ಎಲ್ಲ ರೀತಿ ಸಾರಿಗೆ ಸಂಚಾರಕ್ಕೆ ನಿಯಂತ್ರಣ ಹೇರಲಾಗಿದೆ. ತಳ್ಳುಗಾಡಿಗಳಿಗೆ ಅವಕಾಶ ನೀಡಲಾಗಿದೆ. ಮದ್ಯ ಪಾರ್ಸೆಲ್ ಪಡೆಯುವುದಕ್ಕೂ ಬೆಳಗ್ಗಿನ ಹೊತ್ತಲ್ಲಿ ಅವಕಾಶ ನೀಡಿದೆ.
ಈ ಹಿಂದೆ ಮೇ 12ರ ವರೆಗೆ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಅದರಲ್ಲಿ ಕೈಗಾರಿಕೆ ಮತ್ತು ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗಿತ್ತು. ಬಾರ್, ಹೊಟೇಲ್ ಗಳಲ್ಲಿ ಪಾರ್ಸೆಲ್ ಗಳಿಗೆ ಅವಕಾಶ ನೀಡಲಾಗಿತ್ತು. ಈಗಿನ ಹೊಸ ಆದೇಶದಲ್ಲಿಯೂ ಬಹುತೇಕ ಅದೇ ನೀತಿ ಇರುವಂತಿದೆ. ಹೊಸ ಮಾರ್ಗಸೂಚಿ ಎಂದು ಹೇಳಿಕೊಂಡರೂ, ಹೊಸತನ್ನು ಕೊಟ್ಟಿಲ್ಲ. ಅಂತರ್ ಜಿಲ್ಲಾ ಓಡಾಟ ಮತ್ತು ಕೈಗಾರಿಕೆಗೆ ಹೆಚ್ಚುವರಿಯಾಗಿ ನಿಯಂತ್ರಣ ಹೇರಲಾಗಿದೆ.
Karnataka Covid lockdown news live: State to go under complete lockdown from May 10 to May 24, says CM. Karnataka has decided to impose a complete lockdown. Essential services will be allowed to remain functional from 6 am to 10 am every day. All commercial activities are prohibited.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
12-10-26 11:30 am
HK News Staffer
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
12-10-26 04:12 pm
HK News Staffer
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm