ಬ್ರೇಕಿಂಗ್ ನ್ಯೂಸ್
08-05-21 09:45 pm Mangaluru Correspondent ಕರ್ನಾಟಕ
ಬೆಂಗಳೂರು, ಮೇ 8: ಬಿಗ್ ಬಾಸ್ ಕನ್ನಡಕ್ಕೂ ಲಾಕ್ಡೌನ್ ಬಿಸಿ ತಟ್ಟಿದೆ. ಮೇ 10 ರಿಂದ ರಾಜ್ಯ ಸರಕಾರ ಫುಲ್ ಲಾಕ್ಡೌನ್ ಘೋಷಣೆ ಮಾಡಿರುವುದರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದ ಬಿಗ್ ಬಾಸ್ ಶೋವನ್ನು ಅರ್ಧಕ್ಕೆ ನಿಲ್ಲಿಸಲು ನಿರ್ಧರಿಸಲಾಗಿದೆ. ಇದರಂತೆ, ಭಾನುವಾರದಿಂದ ಬಿಗ್ ಬಾಸ್ ಶೋ ಬಹುತೇಕ ಪ್ರಸಾರ ಆಗುವುದಿಲ್ಲ.
ಕೊರೊನಾ ಎರಡನೇ ಅಲೆ ತೀವ್ರವಾಗಿ ಹರಡುತ್ತಿರುವುದರಿಂದ ರಾಜ್ಯ ಸರಕಾರ ಮೇ 10ರಿಂದ 14 ದಿನಗಳ ಕಾಲ ಪೂರ್ತಿ ಲಾಕ್ಡೌನ್ ಘೋಷಣೆ ಮಾಡಿದೆ. ಈ ವೇಳೆ, ಟಿವಿ ಕಾರ್ಯಕ್ರಮ, ಸಿನಿಮಾ ಚಿತ್ರೀಕರಣ ಸೇರಿದಂತೆ ಎಲ್ಲ ರೀತಿಯ ಚಟುವಟಿಕೆ ನಿಷೇಧಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ - ಸೀಸನ್ 8 ರ ಕಾರ್ಯಕ್ರಮವನ್ನು ಅನಿವಾರ್ಯ ಕಾರಣದಿಂದ ಸ್ಥಗಿತಗೊಳಿಸುತ್ತಿದ್ದೇವೆ ಎಂದು ಕಲರ್ಸ್ ಕನ್ನಡ ವಾಹಿನಿಯ ಕ್ಲಸ್ಟರ್ ಹೆಡ್ ಪರಮೇಶ್ವರ್ ಗುಂಡ್ಕಲ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಮ್ಮ ಫೇಸ್ಬುಕ್ ಪೇಜಿನಲ್ಲಿ ಬರೆದುಕೊಂಡಿರುವ ಗುಂಡ್ಕಲ್, ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಕಾರ್ಯಕ್ರಮ ಆರಂಭಗೊಂಡು ಇಂದಿಗೆ 71ನೇ ದಿನ. 11 ಸ್ಪರ್ಧಿಗಳು ಉಳಿದುಕೊಂಡಿದ್ದು ಹೊರಗಿನ ಜಗತ್ತಿನಲ್ಲಿ ಏನಾಗುತ್ತಿದೆ ಎಂದು ತಿಳಿಯದೆ ತಮ್ಮ ಪಾಡಿಗಿದ್ದರು. ಅವರು ಒಳಗೇ ಇರುವುದರಿಂದ ಸೇಫ್ ಆಗಿಯೇ ಇದ್ದರು. ಆದರೆ, ಈಗ ಆಗಿರುವ ಪರಿಸ್ಥಿತಿಯನ್ನು ಒಳಗಿದ್ದವರಿಗೆ ಮನವರಿಕೆ ಮಾಡಿದ್ದು ಎಲ್ಲರನ್ನೂ ಹೊರಗೆ ಕರೆತಂದು ಅವರ ಮನೆಗಳಿಗೆ ಸುರಕ್ಷಿತವಾಗಿ ಬಿಡುವ ಕೆಲಸ ಆಗುತ್ತಿದೆ. ನೂರಾರು ಮಂದಿಯ ಕನಸು ಮತ್ತು ಶ್ರಮವನ್ನು ಅರ್ಧಕ್ಕೆ ನಿಲ್ಲಿಸುತ್ತಿದ್ದೇವೆ ಎಂಬ ನೋವಿದೆ. ಇಂಥ ನಿರ್ಧಾರಕ್ಕೆ ಬರುವುದು ತುಂಬದ ಕಷ್ಟದ ಸನ್ನಿವೇಶ ಆದರೂ, ಭಾರ ಹೃದಯದಿಂದ ವಾಸ್ತವ ಒಪ್ಪಿಕೊಳ್ಳುತ್ತಿದ್ದೇವೆ. ಆದರೆ ಬೇಸರ ಆಗ್ತಿರೋದು ಶೋವನ್ನು ನಿಲ್ಲಿಸುವುದಕ್ಕಲ್ಲ. ಕಣ್ಣಿಗೆ ಕಾಣದ ವೈರಸ್ ಇಷ್ಟೆಲ್ಲಾ ದುರಂತ ಮಾಡಿಬಿಡ್ತಲ್ಲಾ ಎಂದು ಹೃದಯ ಕಲಕುತ್ತಿದೆ ಎಂದು ನಿಷ್ಕಲ್ಮಶವಾಗಿ ವಾಸ್ತವ ಸ್ಥಿತಿಯನ್ನು ಹೇಳಿಕೊಂಡಿದ್ದಾರೆ.
ಈಗಾಗ್ಲೇ ಕಳೆದ ಮೂರು ವಾರಗಳಿಂದ ನಟ ಸುದೀಪ್ ಬಿಗ್ ಬಾಸ್ ನಿಂದ ದೂರವಿದ್ದಾರೆ. ಕೊರೊನಾ ಕಾರಣದಿಂದ ಸುದೀಪ್ ದೂರ ಉಳಿದಿದ್ದಾರೆಂದು ಹೇಳಲಾಗುತ್ತಿದೆಯಾದ್ರೂ ಅದನ್ನು ಯಾರೂ ದೃಢಪಡಿಸಿಲ್ಲ. ಅನಾರೋಗ್ಯ ಕಾರಣದಿಂದ ಸುದೀಪ್ ದೂರ ಇದ್ದಾರೆ ಅಂತಷ್ಟೇ ಮಾಹಿತಿ ನೀಡಲಾಗಿದೆ.
ಇದೇ ವೇಳೆ, ಸುದೀಪ್ ಟ್ವೀಟ್ ಮೂಲಕ ಬಿಗ್ ಬಾಸ್ ಶೋವನ್ನು ನಿಲ್ಲಿಸುವ ವಿಚಾರದಲ್ಲಿ ಬರೆದುಕೊಂಡಿದ್ದಾರೆ. ಈಗಿನ ಸನ್ನಿವೇಶದಲ್ಲಿ ಒಂದಷ್ಟು ಮಂದಿ ಸೇರುವುದು, ಶೂಟ್ ಮಾಡುವುದನ್ನು ಮಾಡಲಾಗದು. ವೀಕ್ಷಕರಿಗೆ ಇದರಿಂದ ನಿರಾಸೆ ಆಗುತ್ತೆ ಅನ್ನೋದನ್ನು ಅರ್ಥ ಮಾಡ್ಕೋತೀನಿ. ಹಾಗೆಂದು ಕಾನೂನು ಪಾಲನೆ ಮಾಡುವುದು ನಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಶುರುವಾಗಿ ಇವತ್ತಿಗೆ ಎಪ್ಪತ್ತೊಂದನೇ ದಿನ. ಪಿಸಿಆರ್ ನಲ್ಲಿ ನಿಂತು ಈ ಮನೇಲಿರೋ ಹನ್ನೊಂದು ಜನ ಓಡಾಡುತ್ತಿರುವುದನ್ನು ನೋಡಿದಾಗ...
Posted by Parameshwar Gundkal on Saturday, May 8, 2021
The makers of Bigg Boss Kannada have decided to cancel the ongoing season as Karnataka is set to go into a full lockdown for 14 days starting Monday. The Karnataka government on Friday announced that a total lockdown will be imposed in the state amid the raging second wave of coronavirus.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
12-02-25 10:58 pm
Mangalore Correspondent
MP Brijesh Chowta, ESI Hospital: ಮಂಗಳೂರು ಇಎಸ್...
12-02-25 09:18 pm
Puttur Police Women PSI News, Traffic: ಪುತ್ತೂ...
12-02-25 06:05 pm
Ullal News, Dr Kalladka Prabhakar Bhat: ಸಾಕು...
11-02-25 07:44 pm
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
12-02-25 10:28 pm
Mangalore Correspondent
Honor killing Bangalore, Daughter killed, Cri...
12-02-25 06:23 pm
Bhagappa Harijan deadly Murder, Crime report:...
12-02-25 12:27 pm
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm