ಲಾಕ್ಡೌನ್ ಸಂಕಷ್ಟ ; ಶ್ರಮಿಕ ವರ್ಗಕ್ಕೆ 1250 ಕೋಟಿ ಪ್ಯಾಕೇಜ್, ಸಾಲ ಪಾವತಿಗೆ ವಿನಾಯ್ತಿ , ವಿವಿಧ ವರ್ಗಕ್ಕೆ ಜುಜುಬಿ ಪರಿಹಾರ !!

19-05-21 12:20 pm       Headline Karnataka News Network   ಕರ್ನಾಟಕ

ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾಗಿರುವ ರಾಜ್ಯದ ಜನತೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ 1250 ಕೋಟಿ ರೂ. ಮೊತ್ತದ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

Photo credits : Twitter

ಬೆಂಗಳೂರು, ಮೇ 19 : ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾಗಿರುವ ರಾಜ್ಯದ ಜನತೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ 1250 ಕೋಟಿ ರೂ. ಮೊತ್ತದ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಸಿಎಂ ಯಡಿಯೂರಪ್ಪ ಸುದ್ದಿಗೋಷ್ಟಿಯಲ್ಲಿ ವಿವಿಧ ವಲಯದ ಕಾರ್ಮಿಕರು, ಸಂಕಷ್ಟಕ್ಕೀಡಾದ ಮಧ್ಯಮ ವರ್ಗದ ಜನತೆಗೆ ಹಣದ ನೆರವು ಘೋಷಣೆ ಮಾಡಿದ್ದಾರೆ. 

  • ಬಿಪಿಎಲ್ ಕಾರ್ಡುದಾರರಿಗೆ ತಲಾ ಹತ್ತು ಕೆಜಿ ಅಕ್ಕಿ ವಿತರಣೆ 
  • 20 ಸಾವಿರ ಹೆಕ್ಟೇರ್ ರೈತರಿಗೆ ನೆರವು ಘೋಷಣೆ 
  • ಹೂವು, ಹಣ್ಣು , ತರಕಾರಿ ಬೆಳೆಗಾರರಿಗೆ ತಲಾ ಹತ್ತು ಸಾವಿರ ರೂ. 
  • 3.5 ಲಕ್ಷ ಅಸಂಘಟಿತ ಕಾರ್ಮಿಕರಿಗೆ ತಲಾ ಎರಡು ಸಾವಿರ ರೂ. 
  • ನೋಂದಣಿ ಮಾಡಿಸಿದ ಆಟೋ, ಟ್ಯಾಕ್ಸಿ ಚಾಲಕರಿಗೆ ಮೂರು ಸಾವಿರ ರೂ. 
  • ಕಟ್ಟಡ ಕಾರ್ಮಿಕರಿಗೆ ಮೂರು ಸಾವಿರ ರೂ. 
  • 2.20 ಲಕ್ಷ ಬೀದಿಬದಿ ವ್ಯಾಪಾರಸ್ಥರಿಗೆ ತಲಾ ಎರಡು ಸಾವಿರ ರೂ. 
  • 16 ಲಕ್ಷ ಕಲಾವಿದರು ಮತ್ತು ಕಲಾತಂಡಗಳಿಗೆ ತಲಾ ಮೂರು ಸಾವಿರ 
  • ಸರಕಾರದ ದುಡ್ಡು ನೇರವಾಗಿ ತಮ್ಮ ಖಾತೆಗೆ ವರ್ಗಾವಣೆ 
  • ಬ್ಯಾಂಕ್ ಸಾಲ ಮರುಪಾವತಿಗೆ ಮೂರು ತಿಂಗಳ ವಿನಾಯ್ತಿ ಘೋಷಣೆ 
  • ಮೇ, ಜೂನ್, ಜುಲೈ ಮೂರು ತಿಂಗಳಲ್ಲಿ ಸಾಲ ಪಾವತಿ ಮಾಡಬೇಕಿಲ್ಲ 
  • ಸಾಲ ಮರುಪಾವತಿ ವಿನಾಯ್ತಿಯಿಂದ 4.25 ಕೋಟಿ ಜನರಿಗೆ ಲಾಭ 
  • ಶಿಕ್ಷಕರು ಫ್ರಂಟ್ ಲೈನ್ ವಾರಿಯರ್ಸ್‌ ಎಂದು ಘೋಷಣೆ 
  • ಲೈನ್ ಮ್ಯಾನ್, ಗ್ಯಾಸ್ ವಿತರಕರನ್ನೂ ವಾರಿಯರ್ಸ್‌ ಎಂದು ಘೋಷಣೆ 
  • ಲಾಕ್ಡೌನ್ ವಿಸ್ತರಣೆ ಬಗ್ಗೆ ಮೇ 23ರಂದು ಘೋಷಣೆ 
  • ಎಸ್ ಡಿಆರ್ ಎಫ್ ನಿಂದ ಪ್ರತಿ ಗ್ರಾಪಂಗೆ 50 ಸಾವಿರ ನೆರವು 
  • ಕೊರೊನಾ ನಿರ್ವಹಣೆಗೆ ಗ್ರಾಪಂನಲ್ಲಿ ಹಣ ಬಳಕೆಗೆ ಸೂಚನೆ

The Karnataka government announced Rs 1,250 crore Covid-19 relief package on Wednesday. The state is currently under complete lockdown till May 24.