ಬ್ರೇಕಿಂಗ್ ನ್ಯೂಸ್
21-05-21 01:00 pm Headline Karnataka News Network ಕರ್ನಾಟಕ
Photo credits : Representative Image
ಬೆಂಗಳೂರು, ಮೇ 21: ಲಸಿಕೆ ಸಂಗ್ರಹದ ಕೊರತೆಯಿಂದಾಗಿ 18ರಿಂದ 44 ವಯಸ್ಸಿನ ಒಳಗಿನವರಿಗೆ ಲಸಿಕೆ ನೀಡುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ, ಇದೀಗ 44 ವರ್ಷದ ಒಳಗಿನ ಫ್ರಂಟ್ ಲೈನ್ ಕಾರ್ಯಕರ್ತರನ್ನು ಗುರುತಿಸಿ ಲಸಿಕೆ ನೀಡುವಂತೆ ಆರೋಗ್ಯ ಇಲಾಖೆ ಹೊಸ ಆದೇಶ ಹೊರಡಿಸಿದೆ.
ಇದಕ್ಕಾಗಿ ಪ್ರತಿ ಜಿಲ್ಲೆಗೂ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿದ್ದು, ಯಾರಿಗೆ ಮೊದಲು ಲಸಿಕೆ ನೀಡಬೇಕೆಂದು ಅವರೇ ನಿರ್ಧರಿಸಲಿದ್ದಾರೆ. ಅಲ್ಲದೆ, ಎಲ್ಲಿ ಲಸಿಕೆ ನೀಡಬೇಕು, ಯಾವ ವಿಭಾಗದವರಿಗೆ ಎಲ್ಲಿ ಲಸಿಕಾ ಕೇಂದ್ರ, ಯಾವಾಗ ನೀಡಲಾಗುತ್ತದೆ ಎನ್ನುವ ಬಗ್ಗೆಯೂ ಆಯಾ ಜಿಲ್ಲೆಯ ನೋಡಲ್ ಅಧಿಕಾರಿ ನಿರ್ಧರಿಸಲಿದ್ದಾರೆ.


ಆದ್ಯತಾ ವಲಯವೆಂದು ಕೆಲವು ವಿಭಾಗದ ಮಂದಿಯನ್ನು ಗುರುತಿಸಲಾಗಿದ್ದು ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಪ್ರತೀ ಜಿಲ್ಲಾಡಳಿತಕ್ಕೂ ಪ್ರತ್ಯೇಕ ನಿರ್ದೇಶನ ನೀಡಲಾಗಿದೆ. ಆದ್ಯತಾ ವಲಯದಲ್ಲಿ ಅಂಗವಿಕಲರು, ಅವರನ್ನು ನೋಡಿಕೊಳ್ಳುವ ಶುಶ್ರೂಷಕಿಯರು, ಜೈಲು ಸಿಬಂದಿ, ಸ್ಮಶಾನಗಳಲ್ಲಿ ಕೆಲಸ ಮಾಡುವ ಸಿಬಂದಿ, ಆರೋಗ್ಯ ಕಾರ್ಯಕರ್ತರ ಕುಟುಂಸ್ಥರು, ಕೊರೊನಾ ಕೆಲಸಕ್ಕೆ ನಿಯುಕ್ತರಾಗಿರುವ ಶಿಕ್ಷಕರು, ಸರಕಾರಿ ಸಾರಿಗೆ ನೌಕರರು, ಆಟೋ ಮತ್ತು ಕ್ಯಾಬ್ ಚಾಲಕರು, ವಿದ್ಯುತ್ ಮತ್ತು ನೀರು ಸರಬರಾಜು ಇಲಾಖೆಯ ಸಿಬಂದಿ, ಬೀದಿ ವ್ಯಾಪಾರಸ್ಥರು, ಅಂಚೆ ನೌಕರರು, ಸೆಕ್ಯುರಿಟಿ ಗಾರ್ಡ್, ಕಚೇರಿಗಳಲ್ಲಿ ಕ್ಲೀನಿಂಗ್ ಕೆಲಸ ಮಾಡುವ ಸಿಬಂದಿ, ನ್ಯಾಯಾಲಯ ಸಿಬಂದಿ, ಹಿರಿಯರು ಅಥವಾ ರೋಗ ಪೀಡಿತರನ್ನು ನೋಡಿಕೊಳ್ಳುವ ಮಂದಿ, ಮಕ್ಕಳು ಮತ್ತು ಮಹಿಳಾ ಕಲ್ಯಾಣ ಇಲಾಖೆ ಸಿಬಂದಿ, ಪೆಟ್ರೋಲ್ ಪಂಪ್ ಮತ್ತು ಗ್ಯಾಸ್ ವಿತರಕ ಸಿಬಂದಿ, ಮೆಡಿಕಲ್ ಶಾಪ್ ಗಳಲ್ಲಿ ಕೆಲಸ ಮಾಡುವ ಸಿಬಂದಿ, ಎಪಿಎಂಸಿ ಇನ್ನಿತರ ತರಕಾರಿ, ದಿನಸಿ ಮಾರುಕಟ್ಟೆಗಳಲ್ಲಿ ಕೆಲಸ ಮಾಡುವ ಸಿಬಂದಿಯನ್ನು ಗುರುತಿಸಿ ಆದ್ಯತೆಯ ನೆಲೆಯಲ್ಲಿ ಲಸಿಕೆ ನೀಡುವಂತೆ ನಿರ್ದೇಶನ ನೀಡಲಾಗಿದೆ.

ಇದರ ಜೊತೆಗೆ ಕಟ್ಟಡ ನಿರ್ಮಾಣ ಕಾರ್ಮಿಕರು, ಟೆಲಿಕಾಂ ಸಿಬಂದಿ, ಬ್ಯಾಂಕ್ ನೌಕರರು, ವಕೀಲರು, ಚಿತ್ರೋದ್ಯಮದಲ್ಲಿ ತೊಡಗಿರುವ ಸಿಬಂದಿ, ಹೊಟೇಲ್ ನೌಕರರು, ಕೆಎಂಎಫ್ ಸಿಬಂದಿ, ಗಾರ್ಮೆಂಟ್ ನೌಕರರು, ರೈಲ್ವೇ ಸಿಬಂದಿ, ಕ್ರೀಡಾಪಟುಗಳು ಮತ್ತು ರಾಜ್ಯ ಹಾಗೂ ದೇಶವನ್ನು ಪ್ರತಿನಿಧಿಸಿರುವ ಕ್ರೀಡಾಪಟುಗಳು, ಗೈಲ್ ಮತ್ತು ಎಚ್ಎಎಲ್ ಸಿಬಂದಿ ಹೀಗೆ ಹಲವು ಸ್ತರದಲ್ಲಿ ಕೆಲಸ ಮಾಡುವ ಮಂದಿಯನ್ನು ಗುರುತಿಸಿ ಮೊದಲಿಗೆ ಲಸಿಕೆ ನೀಡಲು ಆದೇಶ ಮಾಡಲಾಗಿದೆ. ಮೇ 22ರಿಂದಲೇ ಈ ಆದ್ಯತಾ ವಲಯವನ್ನು ಗುರುತಿಸಿ ಲಸಿಕೆ ನೀಡಲು ತೊಡಗಿಸಿಕೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ.
Karnataka will resume vaccination for the 18-44 age group from May 22, but initially, only for priority groups within this bracket, the Health Department has said. In an announcement made on May 22, the Karnataka Health Department said in a tweet, “Vaccination for 18-44 years age group is being resumed from 22.5.2021 and state procured vaccines will be utilized to vaccinate the eligible beneficiaries.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
12-10-26 11:30 am
HK News Staffer
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
12-10-26 04:12 pm
HK News Staffer
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm