ಬ್ರೇಕಿಂಗ್ ನ್ಯೂಸ್
23-05-21 03:35 pm Headline Karnataka News Network ಕರ್ನಾಟಕ
ಚಿಕ್ಕಮಗಳೂರು, ಮೇ 23: ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪಕ್ಕೀಡಾದ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ಐ ಅರ್ಜುನ್ ವಿರುದ್ಧ ಅದೇ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೂತ್ರ ಕುಡಿಸಿದ ವಿಚಾರ ಹೊರಗೆ ಬರುತ್ತಿದ್ದಂತೆ ಸಾರ್ವಜನಿಕ ವಲಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಇದರಂತೆ ಡಿವೈಎಸ್ಪಿ ಟಿ.ಡಿ. ಪ್ರಭು ಘಟನೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠರಿಗೆ ವರದಿ ಸಲ್ಲಿಸಿದ್ದಾರೆ.
ಕಿರಗುಂದದ ಮಹಿಳೆಯೊಬ್ಬಳು ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿ ಬೆಟ್ಟಗೆರೆ ಗ್ರಾಪಂನಲ್ಲಿ ದಿನಕೂಲಿ ನೌಕರನಾಗಿದ್ದ ಪುನೀತ್ ಕೆ.ಎಲ್. ಎಂಬಾತನನ್ನು ಮೇ 10ರಂದು ವಿಚಾರಣೆಗೆಂದು ಗೋಣಿಬೀಡು ಪೊಲೀಸರು ಠಾಣೆಗೆ ಒಯ್ದಿದ್ದರು. ಬೆಳಗ್ಗೆ ಠಾಣೆಗೆ ಒಯ್ದಿದ್ದ ಎಸ್ಐ ಅರ್ಜುನ್ ಹೊನಕೇರಿ, ಠಾಣಾ ಕಟ್ಟಡದ ಮೇಲ್ಭಾಗದ ಕೋಣೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದರು. ಕಂಬ ಒಂದಕ್ಕೆ ಕೈ ಮತ್ತು ಕಾಲನ್ನು ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿದ್ದು, ನಿನಗೂ ಮಹಿಳೆಗೂ ಸಂಬಂಧ ಇತ್ತೆಂದು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದಾರೆ. ನೀನು ಮತ್ತು ಮಹಿಳೆ ಫೋನ್ ಸಂಭಾಷಣೆ ನಡೆಸುತ್ತಿದ್ದ ಆಡಿಯೋ ನಮ್ಮಲ್ಲಿದೆ, ನೀನು ಆಕೆಯ ಜೊತೆಗೆ ಸೆಕ್ಸ್ ನಡೆಸಿದ್ದೀಯಲ್ಲಾ ಎಂದು ಹೇಳಿ ಚಿತ್ರಹಿಂಸೆ ನೀಡಿದ್ದಾರೆ.
ಬಲವಂತ ಮೂತ್ರ ಕುಡಿಸಿದ್ದ ಪೊಲೀಸ್
ಆದರೆ, ಅದಕ್ಕೆ ನನಗೂ ಮಹಿಳೆಗೂ ಯಾವುದೇ ಸಂಬಂಧ ಇರಲಿಲ್ಲ. ಆರು ತಿಂಗಳ ಹಿಂದೆ ಆಕೆಯ ಜೊತೆ ಮಾತನಾಡಿದ್ದು ಹೌದು. ಆನಂತರ ಮಹಿಳೆಯ ಮನೆಯವರು ಹೇಳಿದ್ದರಿಂದ ಆಕೆಯ ಸಂಪರ್ಕ ಕಡಿದುಕೊಂಡಿದ್ದೇನೆ ಎಂದು ಪುನೀತ್ ಹೇಳಿದ್ದಾನೆ. ಆದರೆ, ಇದನ್ನೊಪ್ಪದ ಎಸ್ಐ ಅರ್ಜುನ್, ಕಳ್ಳತನದ ಆರೋಪದಲ್ಲಿ ಬಂಧಿಸಿ ಕರೆತಂದಿದ್ದ ಚೇತನ್ ಎಂಬ ಯುವಕನಲ್ಲಿ ಪುನೀತ್ ಬಾಯಿಗೆ ಬಲವಂತವಾಗಿ ಮೂತ್ರ ಮಾಡಿಸಿದ್ದಾರೆ. ಪರಿ ಪರಿಯಾಗಿ ಬೇಡಿಕೊಂಡರೂ ಕೇಳಲಿಲ್ಲ. ಆನಂತರ ನೀರು ಕೊಡಿ, ಇಲ್ಲದಿದ್ದರೆ ನಾನು ಸಾಯುತ್ತೇನೆ ಎಂದು ಹೇಳಿದ್ದಕ್ಕೆ ಎರಡು ಹನಿ ನೀರು ಕೊಟ್ಟು ಕೆಳಗೆ ಬಿದ್ದಿರುವ ಮೂತ್ರವನ್ನು ನೆಕ್ಕು ಅಂತ ಒತ್ತಾಯಿಸಿದ್ದಾನೆ.
ಮೂತ್ರ ನೆಕ್ಕಿದರೆ ಬಿಡುತ್ತೇನೆಂದು ಧಮ್ಕಿ
ಮೂತ್ರವನ್ನು ನೆಕ್ಕಿ ಖಾಲಿ ಮಾಡಿದರೆ ಬಿಟ್ಟು ಬಿಡುತ್ತೇನೆ ಎಂದು ಪಿಎಸ್ಐ ಚಿತ್ರಹಿಂಸೆ ನೀಡಿದ್ದು, ಕೊನೆಗೆ ಹಗ್ಗ ಬಿಚ್ಚಿ ನೆಲಕ್ಕೆ ಒಗೆದಿದ್ದಾರೆ. ಪೊಲೀಸನ ಚಿತ್ರಹಿಂಸೆ ತಡೆಯಲಾರದೆ ನಾನು ಆತ ಹೇಳಿದಂತೆ ಮಾಡಿದ್ದೇನೆ. ಅಲ್ಲದೆ, ಯಾವ ಜಾತಿಯೆಂದು ಕೇಳಿ ಎಸ್ಸಿಯೆಂದು ತಿಳಿದ ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿದ್ದಾನೆ. ರಾತ್ರಿ ವೇಳೆಗೆ ಹಗ್ಗ ಬಿಚ್ಚಿ ಹೊರಗೆ ಹೋಗಲು ತಿಳಿಸಿದ್ದಾರೆ. ಕೈಕಾಲನ್ನು ಕಟ್ಟಿದ್ದರಿಂದ ನಡೆಯಲು ಸಾಧ್ಯವಾಗದೆ ಅಲ್ಲಿಯೇ ಮಲಗಿದ್ದೆ. ಮನೆಯವರು ಬಂದು ಠಾಣೆಯಲ್ಲಿ ಕುಳಿತಿದ್ದರೂ, ಅವರಿಗೆ ವಿಷಯ ತಿಳಿಸದೆ ಕೊನೆಗೆ ರಾತ್ರಿ ಹತ್ತು ಗಂಟೆಗೆ ಹೊರಗೆ ಕಳಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಹೊರಗೆ ಎಲ್ಲಾದರೂ ಹೇಳಿದರೆ, ಜೀವ ಸಹಿತ ಬಿಡಲ್ಲ ಎಂದು ದಮ್ಕಿ ಹಾಕಿದ್ದ.
ಮನೆಗೆ ತೆರಳಿ, ಕೆಲವು ದಿನಗಳ ಬಳಿಕ ವಿಷಯವನ್ನು ನಮ್ಮ ಕುಟುಂಬಸ್ಥರಿಗೆ ತಿಳಿಸಿದ್ದು ಅವರ ಸೂಚನೆಯಂತೆ ದೂರು ನೀಡಿದ್ದೇನೆ ಎಂದು ಮೇ 22ರಂದು ನೀಡಿರುವ ದೂರಿನಲ್ಲಿ ಹೇಳಿಕೊಂಡಿದ್ದಾನೆ. ಹಲ್ಲೆಗೊಳಗಾದ ಯುವಕ ಈ ಬಗ್ಗೆ ಪೊಲೀಸ್ ಉನ್ನತಾಧಿಕಾರಿಗಳಿಗೆ ಮತ್ತು ಮಾನವ ಹಕ್ಕು ಆಯೋಗಕ್ಕೂ ದೂರು ಸಲ್ಲಿಸಿದ್ದಾನೆ. ಮೂತ್ರ ಕುಡಿಸಿ, ಚಿತ್ರಹಿಂಸೆ ನೀಡಿರುವ ವಿಚಾರ ಸುದ್ದಿ ಮಾಧ್ಯಮಗಳಲ್ಲಿ ಮತ್ತು ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ ಪಿಎಸ್ಐ ಅರ್ಜುನ್ ಹೊನಕೇರಿಯನ್ನು ಗೋಣಿಬೀಡು ಠಾಣೆಯಿಂದ ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ಆದರೆ, ದಲಿತ ಸಂಘಟನೆಗಳು ಹಾಗೂ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಕೂಡಲೇ ಪಿಎಸ್ ಐಯನ್ನು ಕರ್ತವ್ಯದಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಘಟನೆಯ ಬಗ್ಗೆ ಡಿವೈಎಸ್ಪಿ ಜಿಲ್ಲಾ ಪೊಲೀಸ್ ವರಿಷ್ಠರಿಗೆ ವರದಿ ಸಲ್ಲಿಸುತ್ತಿದ್ದಂತೆ ಗೋಣಿಬೀಡು ಠಾಣೆಯಲ್ಲಿ ಪಿಎಸ್ಐ ವಿರುದ್ಧ ಎಫ್ಐಆರ್ ದಾಖಲಾಗಿದೆ. ಎಸ್ಐ ಅರ್ಜುನ್ ಹೊನಕೇರಿ ವಿರುದ್ಧ ಐಪಿಸಿ ಸೆಕ್ಷನ್ 342, 323, 506, 504, 330, 348 ಹಾಗೂ ದಲಿತ ದೌರ್ಜನ್ಯ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ. ತಾನು ಹೇಳಿದ್ದೇ ಕಾನೂನು ಎನ್ನುತ್ತಾ ಬೀಗುತ್ತಿದ್ದ ಎಸ್ಐ ಅರ್ಜುನ್ ಹೊನಕೇರಿ ವಿರುದ್ಧ ಅದೇ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲಾಗಿದ್ದು ಬಂಧನ ಭೀತಿ ಎದುರಿಸುವಂತಾಗಿದೆ.
A police sub-inspector in Karnataka’s Chikkamagaluru was accused of forcing a Dalit man who was in custody to drink urine. He was arrested on May 10 after villagers lodged a complaint against him for causing trouble between a couple. The matter came to light after the 22-year-old man named Punith KL wrote a letter to senior officials, seeking action against the accused sub-inspector.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm