ಲಾಕ್ಡೌನ್ ಭಯ ; ವಿಮಾನದಲ್ಲಿ ಹಾರಾಡುತ್ತಲೇ ಯುವ ಜೋಡಿಯ ಕಲ್ಯಾಣೋತ್ಸವ !

24-05-21 12:31 pm       Bangalore Correspondent   ಕರ್ನಾಟಕ

ಮಧುರೈ ಮೂಲದ ರಾಕೇಶ್ ಮತ್ತು ದಕ್ಷಿಣಾ ಜೋಡಿಯ ವಿಭಿನ್ನ ರೀತಿಯ ವಿವಾಹದ ವಿಡಿಯೋ ಈಗ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದೆ.

Photo credits : india.com

ಬೆಂಗಳೂರು, ಮೇ 24: ಲಾಕ್ಡೌನ್ ಆಗಿರೋದ್ರಿಂದ ಮದುವೆ ಸಮಾರಂಭಗಳಿಗೆ ಭಾರೀ ನಿರ್ಬಂಧ ವಿಧಿಸಲಾಗಿದೆ. 20-25 ಜನ ಮಾತ್ರ ಇಟ್ಟುಕೊಂಡು ಮದುವೆ ಮಾಡುವಂತೆ ಸರಕಾರ ಆದೇಶ ಮಾಡಿದೆ. ಆದರೆ, ಕೆಲವು ಶ್ರೀಮಂತರು 20 ಜನದಲ್ಲಿ ಮದುವೆ ಹೇಗೆ ಮಾಡಿಸೋದು ಎಂದು ಚಿಂತೆಗೆ ಬಿದ್ದಿದ್ದಾರೆ. ಈ ನಡುವೆ, ತಮಿಳುನಾಡಿನ ಮಧುರೈ ಮೂಲದ ಜೋಡಿಯೊಂದು ವಿಭಿನ್ನ ರೀತಿಯಲ್ಲಿ ಮದುವೆಯಾಗಿ ಸುದ್ದಿಯಾಗಿದೆ.

ಈ ಜೋಡಿ ಮದುವೆಗೆ ಆಯ್ಕೆ ಮಾಡಿಕೊಂಡಿದ್ದು ಬೆಂಗಳೂರು- ಮಧುರೈ ಹಾರುವ ವಿಮಾನವನ್ನು. ಮಧುರೈನಿಂದ ಬೆಂಗಳೂರಿಗೆ ತೆರಳುವ ವಿಮಾನವನ್ನೇ ಎರಡು ಗಂಟೆ ಕಾಲ ಬುಕ್ ಮಾಡಿಕೊಂಡಿದ್ದು, ಅದರಲ್ಲೇ ಕಲ್ಯಾಣೋತ್ಸವ ನಡೆದಿದೆ. ಲಾಕ್ಡೌನ್ ಭಯ ಇಲ್ಲದೆ, ಕುಟುಂಬ ಸದಸ್ಯರು, ಆಪ್ತರನ್ನು ಸೇರಿಸಿಕೊಂಡು ವಿಮಾನದಲ್ಲೇ ಮಾಂಗಲ್ಯ ಧಾರಣೆ ಮಾಡಿದ್ದಾರೆ. ಮಧುರೈ ಮೂಲದ ರಾಕೇಶ್ ಮತ್ತು ದಕ್ಷಿಣಾ ಜೋಡಿಯ ವಿಭಿನ್ನ ರೀತಿಯ ವಿವಾಹದ ವಿಡಿಯೋ ಈಗ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದೆ.

ಎರಡು ಗಂಟೆಗಳ ಕಾಲ ವಿಮಾನವನ್ನು ಬಾಡಿಗೆ ಪಡೆದು, ಪ್ರಸಿದ್ಧ ಮಧುರೈ ಮೀನಾಕ್ಷಿ ದೇವಾಲಯದ ಮೇಲ್ಭಾಗದಿಂದ ವಿಮಾನ ಹಾರುತ್ತಲೇ ಜೋಡಿ ಮಾಂಗಲ್ಯ ಧಾರಣೆ ಮಾಡಿದ್ದಾರೆ. ಮಧುರೈನಿಂದ ಬೆಂಗಳೂರಿಗೆ ಬಂದಿದ್ದ ವಿಮಾನ ಆನಂತರ ಮರಳಿ ಮಧುರೈಗೆ ತೆರಳಿದೆ ಎನ್ನಲಾಗುತ್ತಿದೆ. ಅಲ್ಲದೆ, ಮದುವೆ ಕಾರ್ಯಕ್ರಮಕ್ಕೆ ಕುಟುಂಬಸ್ಥರು ಸೇರಿ ವಿಮಾನದಲ್ಲಿ 161 ಮಂದಿ ಸಾಕ್ಷಿಯಾಗಿದ್ದಾರೆಂದು ಹೇಳಲಾಗುತ್ತಿದೆ. ವಿಭಿನ್ನ ರೀತಿಯ ಮದುವೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪರ- ವಿರೋಧ ಅಭಿಪ್ರಾಯ ಕೇಳಿಬಂದಿದ್ದು ಕೆಲವರು ಲಾಕ್ಡೌನ್ ನೀತಿ ಉಲ್ಲಂಘಿಸಿದ ಈ ಜೋಡಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 

This couple from Madurai is the perfect example of what would people do for the sake of love! Marriage is one of the most precious moments in a couple's life that they want to spend with their friends and family.