ಬ್ರೇಕಿಂಗ್ ನ್ಯೂಸ್
25-05-21 02:38 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 25 : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಿಡಿಯಲ್ಲಿರೋದು ನಾನೇ.. ಯುವತಿಯ ಜೊತೆ ಸಹಮತದಿಂದಲೇ ಲೈಂಗಿಕ ಸಂಪರ್ಕ ನಡೆಸಿದ್ದೆ ಎಂದು ಹೇಳುವ ಮೂಲಕ ಜಾರಕಿಹೊಳಿ ಇಡೀ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದ್ದಾರೆ.
ಕೆಲಸದ ಆಮಿಷವೊಡ್ಡಿ ಸಚಿವರು ನನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಸಂತ್ರಸ್ತೆಯ ದೂರಿನಂತೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖಾಧಿಕಾರಿ ಆಗಿರುವ ಎಂ.ಸಿ.ಕವಿತಾ ಎದುರು ವಿಚಾರಣೆಗೆ ಹಾಜರಾಗಿದ್ದ ರಮೇಶ ಜಾರಕಿಹೊಳಿ, ನಾಲ್ಕು ಪುಟಗಳ ಹೇಳಿಕೆ ನೀಡಿದ್ದಾರೆ. ವೈದ್ಯಕೀಯ ಪರೀಕ್ಷೆಗೂ ಒಳಪಟ್ಟಿದ್ದಾರೆ.
ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ಜಲಾಶಯಗಳ ವಿಡಿಯೊ ಚಿತ್ರೀಕರಣ ಮಾಡಲೆಂದು ಯುವತಿಯೇ ನನ್ನನ್ನು ಸಂಪರ್ಕಿಸಿದ್ದಳು. ನನ್ನ ಮೊಬೈಲ್ ನಂಬರ್ ಪಡೆದು ಮಾತನಾಡಲಾರಂಭಿಸಿದ್ದಳು. ಉತ್ತರ ಕರ್ನಾಟಕದವಳು ಎಂದು ಹೇಳಿದ್ದಕ್ಕೆ ನಾನೂ ಮಾತನಾಡುತ್ತಿದ್ದೆ ಎಂದು ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಪ್ರತಿ ಬಾರಿ ಕರೆ ಮಾಡಿದಾಗಲೂ ಯುವತಿ ಲೈಂಗಿಕ ವಿಚಾರದಲ್ಲಿ ಪ್ರಚೋದಿಸುತ್ತಿದ್ದಳು. ಆಕೆಯ ಮಾತಿನಿಂದ ಪ್ರಭಾವಿತನಾಗಿ ಸಲುಗೆಯಿಂದ ಮಾತನಾಡುತ್ತಿದ್ದೆ. ಕೆಲವೊಮ್ಮೆ ಯುವತಿಯೇ ನಗ್ನವಾಗಿ ವಿಡಿಯೋ ಕರೆ ಮಾಡಿ ಅಂಗಾಂಗ ತೋರಿಸುತ್ತಿದ್ದಳು. ಅದರಿಂದಲೂ ನಾನು ಪ್ರಚೋದನೆಗೊಂಡಿದ್ದೆ. ಬಳಿಕ ನನ್ನನ್ನು ಭೇಟಿಯಾಗಬೇಕೆಂದು ಮಲ್ಲೇಶ್ವರದಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ಗೆ ಬಂದಿದ್ದಳು. ಅದೇ ಸಂದರ್ಭದಲ್ಲಿ ಆಕೆಯೇ ನನ್ನ ಜೊತೆಗೆ ಲೈಂಗಿಕ ಸಂಪರ್ಕ ನಡೆಸಲು ಒಪ್ಪಿದ್ದಳು. ಅದೇ ಕಾರಣಕ್ಕೆ ಲೈಂಗಿಕ ಸಂಪರ್ಕ ನಡೆಸಿದೆ.
ನಮ್ಮಿಬ್ಬರ ಲೈಂಗಿಕ ಸಂಪರ್ಕದ ವಿಡಿಯೋವನ್ನು ಯಾರು ಚಿತ್ರೀಕರಣ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಕಾಣದ ಕೈಗಳು ಷಡ್ಯಂತ್ರ ರೂಪಿಸಿ, ಹನಿಟ್ರ್ಯಾಪ್‌ಗೆ ಬೀಳಿಸಿದ್ದಾರೆ. ಕೋಟ್ಯಂತರ ರೂಪಾಯಿ ಹಣಕ್ಕೂ ಕೆಲವರು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ನನ್ನ ಹೆಸರಿಗೆ ಕಳಂಕ ತಂದು ರಾಜಕೀಯವಾಗಿ ಮುಗಿಸುವ ಉದ್ದೇಶ ಇದರ ಹಿಂದಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿರುವ ಮಾಹಿತಿಯೂ ಇದೆ. ಸಹಮತದ ಲೈಂಗಿಕ ಸಂಪರ್ಕವನ್ನೇ ಅತ್ಯಾಚಾರವೆಂದು ಬಿಂಬಿಸಿ ನನ್ನನ್ನು ಆರೋಪಿಯನ್ನಾಗಿ ಮಾಡಲು ಹೊರಟಿರುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕ ಎಂದು ರಮೇಶ ಜಾರಕಿಹೊಳಿ ಹೇಳಿರುವುದಾಗಿ ಎಸ್‌ಐಟಿ ಮೂಲಗಳು ತಿಳಿಸಿವೆ.
Former Karnataka Water Resources Minister Ramesh Jarkiholi alleged that the Sex video is a part of a “political conspiracy” against him has now confessed that he was the one who was seen in the video and it was a Mutual sex agreed by both.
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm