ಬ್ರೇಕಿಂಗ್ ನ್ಯೂಸ್
26-05-21 01:30 pm Headline Karnataka News Network ಕರ್ನಾಟಕ
ಚಿತ್ರದುರ್ಗ, ಮೇ 26 : ಇತ್ತೀಚೆಗೆ ಕಾಡು ಪ್ರಾಣಿಗಳು ನಾಡಿನತ್ತ ಧಾವಿಸುತ್ತಿದ್ದು, ಅವುಗಳು ಪ್ರಾಣಾಪಾಯಕ್ಕೆ ಸಿಲುಕಿದ ಅದಷ್ಟೋ ಸನ್ನಿವೇಶವನ್ನು ನಾವು ಓದಿದ್ದೇವೆ. ಆದರೆ ಸಾಮಾನ್ಯವಾಗಿ ಹಾವುಗಳು ನಾಡಿನಲ್ಲಿಯೂ ಆಗಾಗ ಕಾಣಸಿಗುತ್ತಿರುತ್ತದೆ. ಇದೇ ರೀತಿ ಸನ್ನಿವೇಶ ಇಂದು ಕೂಡ ನಡೆದಿದ್ದು, ಜಮೀನು ಸ್ವಚ್ಛಗೊಳಿಸುವ ವೇಳೆ ನಾಗರಹಾವಿನ ಮರಿಗಳು ಮತ್ತು ಮೊಟ್ಟೆಗಳು ಪತ್ತೆಯಾದ ಘಟನೆ ಚಿತ್ರದುರ್ಗ ಜಿಲ್ಲೆಯ ಓಬಳಾಪುರದಲ್ಲಿ ನಡೆದಿದೆ.
ಆರ್.ಕೆ.ಸ್ವಾಮಿ ಎಂಬುವರು ಜೆಸಿಬಿಯಿಂದ ಜಮೀನು ಸ್ವಚ್ಛಗೊಳಿಸುತ್ತಿದ್ದು, ಭೂಮಿಯನ್ನು ಸಮತಟ್ಟು ಮಾಡುವ ಸಂದರ್ಭದಲ್ಲಿ ಮಣ್ಣಿನಡಿ ಹಾವಿನ ಮರಿ ಮತ್ತು ಮೊಟ್ಟೆಗಳು ಕಂಡು ಬಂದಿವೆ.
ಕೂಡಲೇ ಈ ವಿಷಯದ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಉರಗ ತಜ್ಞ ಶಿವು ಸ್ಥಳಕ್ಕೆ ಆಗಮಿಸಿದ್ದು, ನಾಗರಹಾವಿನ 21ಮರಿಗಳು ಮತ್ತು 25ಕ್ಕೂ ಹೆಚ್ಚು ಮೊಟ್ಟೆಗಳನ್ನು ಸಂರಕ್ಷಿಸಿದ್ದಾರೆ. ಬಳಿಕ ಅದೇ ಜಮೀನಿನಲ್ಲಿದ್ದ ಎರಡು ನಾಗರಹಾವುಗಳನ್ನು ಸಹ ಸೆರೆ ಹಿಡಿದಿದ್ದಾರೆ.
ಸದ್ಯ ಹಾವುಗಳು ಮತ್ತು ಮೊಟ್ಟೆಗಳನ್ನು ಸಂರಕ್ಷಿಸಿಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ನಾಗರಹಾವು, ಮರಿ ಮತ್ತು ಮೊಟ್ಟೆ ಕಾಡಿಗೆ ಸ್ಥಳಾಂತರಿಸುವ ಬಗ್ಗೆ ನಿರ್ಧರಿಸಿದ್ದಾರೆ. ಚಿತ್ರದುರ್ಗ ಬಳಿಯ ಜೋಗಿಮಟ್ಟಿ ಅರಣ್ಯದ ಒಂದು ಭಾಗದಲ್ಲಿ ಹಾವುಗಳು ಮತ್ತು ಮೊಟ್ಟೆಗಳನ್ನು ಒಟ್ಟಿಗೆ ಬಿಡುವ ಬಗ್ಗೆ ಚಿಂತನೆ ನಡೆದಿದ್ದು, ಈ ಬಗ್ಗೆ ಅಧಿಕಾರಿಗಳು ಖಚಿತ ತೀರ್ಮಾನ ಕೈಗೊಳ್ಳಲಿದ್ದಾರೆ.
Chitradurga 25 Snake Cobra eggs and 21 little snakes rescued. The forest officials are now planning to place them back to forest.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
12-02-25 12:27 pm
HK News Desk
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm