ಬ್ರೇಕಿಂಗ್ ನ್ಯೂಸ್
27-05-21 05:09 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 27: ಸಿಎಂ ಬದಲಾವಣೆ ಮಾಡಿಯೇ ತೀರುತ್ತೇವೆಂದು ದೆಹಲಿಗೆ ಹೊರಟಿದ್ದ ಸಚಿವ ಸಿ.ಪಿ.ಯೋಗೀಶ್ವರ್ ನೇತೃತ್ವದ ಬಣ ಮತ್ತೆ ಖಾಲಿ ಕೈಯಲ್ಲಿ ಮರಳಿದೆ. ದೆಹಲಿಯಲ್ಲಿ ಮೂರು ದಿನಗಳ ಕಾಲ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿಗಾಗಿ ಎಡತಾಕಿದ ಯೋಗಿ ಬಣಕ್ಕೆ ಕೊನೆಗೂ ಭೇಟಿ ಸಾಧ್ಯವಾಗಲಿಲ್ಲ. ನಾಯಕತ್ವದ ವಿಚಾರದಲ್ಲಿ ನಮ್ಮನ್ನು ಭೇಟಿಯಾಗಲು ಬರಬೇಡಿ ಎಂಬ ಸ್ಪಷ್ಟ ಸೂಚನೆ ಹೊರಬಿದ್ದೊಡನೆ ಸಚಿವ ಯೋಗೀಶ್ವರ್ ಮತ್ತು ಶಾಸಕ ಅರವಿಂದ ಬೆಲ್ಲದ ದೆಹಲಿಯಿಂದ ಬೆಂಗಳೂರಿಗೆ ವಾಪಸಾಗಿದ್ದಾರೆ.
ಅತ್ತ ದೆಹಲಿಯಲ್ಲಿ ಯೋಗಿ ಬಣ ಕಸರತ್ತು ನಡೆಸುತ್ತಿರುವಾಗಲೇ ಆರ್. ಅಶೋಕ್ ಬಾಂಬ್ ಸಿಡಿಸಿದ್ದರು. ನಾಯಕತ್ವದ ಬದಲಾವಣೆ ವಿಚಾರ ಚರ್ಚೆಯಲ್ಲಿರುವುದು ನೂರಕ್ಕೆ ನೂರು ಸತ್ಯ. ಒಂದು ಬಣ ದೆಹಲಿಯಲ್ಲಿ ಬೀಡು ಬಿಟ್ಟಿದ್ದೂ ಅಷ್ಟೇ ಸತ್ಯ. ಆದರೆ, ಯಡಿಯೂರಪ್ಪ ಅವರೇ ನಮ್ಮ ಮುಖ್ಯಮಂತ್ರಿ. ಕೆಲವರು ನಮ್ಮ ಸರಕಾರದ ಆಕ್ಸಿಜನ್ ಕಿತ್ತುಕೊಳ್ಳಲು ನೋಡುತ್ತಿದ್ದಾರೆ. ಆದರೆ, ನಮ್ಮ ಸರಕಾರಕ್ಕೆ ಅನಿಯಮಿತ ಆಕ್ಸಿಜನ್ ಪೂರೈಕೆಯಾಗುತ್ತಿದೆ ಎನ್ನುವ ಮೂಲಕ ಸಚಿವ ಯೋಗಿಗೆ ಪರೋಕ್ಷ ಟಾಂಗ್ ಕೊಟ್ಟಿದ್ದರು.
ಸಿಎಂ ಬದಲಾವಣೆಗಾಗಿ ಒತ್ತಡ ಹೇರಲು ಸಿ.ಪಿ.ಯೋಗೀಶ್ವರ್ ಮೂರು ದಿನಗಳ ಹಿಂದೆ ದೆಹಲಿಗೆ ತೆರಳಿದ ಕೂಡಲೇ ಇನ್ನೂ 20 ಶಾಸಕರು ದೆಹಲಿಗೆ ತೆರಳಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಆಮೂಲಕ ಹೈಕಮಾಂಡಿಗೆ ಪ್ರಬಲ ಒತ್ತಡ ಹೇರಲು ಪ್ಲಾನ್ ಹಾಕಲಾಗಿತ್ತು. ಅತೃಪ್ತ ಶಾಸಕರು ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗಿತ್ತಾದರೂ, ಕೊನೆಕ್ಷಣದಲ್ಲಿ ಅದ್ಯಾವುದೂ ಕೈಗೂಡಿರಲಿಲ್ಲ. ಇಷ್ಟಾಗುತ್ತಿದ್ದಂತೆ, ಡಿಸಿಎಂ ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ್, ಈಶ್ವರಪ್ಪ ಸೇರಿದಂತೆ ಹಿರಿಯ ಸಚಿವರು, ಶಾಸಕರು ಕೂಡ ಯಡಿಯೂರಪ್ಪ ಪರವಾಗಿ ಬ್ಯಾಟ್ ಬೀಸಿದ್ದರು.
ಮುಖ್ಯಮಂತ್ರಿ ಬದಲಾವಣೆ ಬರೀಯ ಊಹೋಪೋಹ ಅಷ್ಟೇ. ಮಾಧ್ಯಮಗಳ ಸುದ್ದಿಗೆ ಕಿವಿಕೊಡುವುದು ಬೇಡ. ಅದಕ್ಕೆಲ್ಲ ಪ್ರತಿಕ್ರಿಯೆ ಕೊಡುವುದೂ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದರು. ಇದೇ ವೇಳೆ, ಲಿಂಗಾಯತ ಸಮುದಾಯದ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಕೆಲವರು ಚುನಾವಣೆ ಎದುರಿಸಿ ಗೆಲ್ಲಲಾಗದವರು ಮುಖ್ಯಮಂತ್ರಿ ಬದಲಾವಣೆಗೆ ಕಸರತ್ತು ಮಾಡುತ್ತಾರೆ. ಇವರನ್ನು ನಂಬಿ ಪಕ್ಷಕ್ಕೆ ಚುನಾವಣೆ ಗೆಲ್ಲುವುದಕ್ಕಾಗುತ್ತಾ.. ಯಡಿಯೂರಪ್ಪ ಇಲ್ಲದೆ ರಾಜ್ಯದ ಬಿಜೆಪಿಗೆ ಅಸ್ತಿತ್ವವೇ ಇಲ್ಲ. ಇಂಥ ಹೊತ್ತಿನಲ್ಲಿ ಯಡಿಯೂರಪ್ಪ ಅವರನ್ನು ಹೊರಗಿಟ್ಟು ಬಿಜೆಪಿ ಹೈಕಮಾಂಡ್ ಕೈಸುಟ್ಟುಕೊಳ್ಳುವ ಕೆಲಸ ಮಾಡುತ್ತದೆಯೇ ಎಂದು ಹೇಳಿದ್ದರು.
ವಿಜಯೇಂದ್ರ ಬಗ್ಗೆ ಸಚಿವ ಯೋಗಿ ಗರಂ
ಇವೆಲ್ಲ ಬೆಳವಣಿಗೆಯ ಮಧ್ಯೆಯೇ ಬೆಂಗಳೂರಿಗೆ ಆಗಮಿಸಿದ್ದ ಸಚಿವ ಯೋಗೀಶ್ವರ್ ಇಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದಾರೆ. ಈ ವೇಳೆ, ಸುದ್ದಿಗಾರರು ಕೇಳಿದ ಪ್ರಶ್ನೆಗೆ, ದೆಹಲಿಗೆ ಹೋಗಿದ್ದು ಹೌದು. ಕೆಲವು ವಿಚಾರಗಳ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಿದ್ದೆ. ಅದನ್ನೆಲ್ಲ ಹೇಳಿಕೊಳ್ಳೋಕೆ ಆಗಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಇಲ್ಲ. ಮೂರು ಬಣಗಳ ಸರಕಾರ ಇದೆ. ಹಾಗೆಂದು, ನಾನು ಸಚಿವನಾಗಿದ್ದ ಮೇಲೆ ನನ್ನ ಖಾತೆಯಲ್ಲಿ ನನ್ನ ಮಗ ಅಧಿಕಾರ ಚಲಾಯಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎನ್ನುವ ಮೂಲಕ ಸಿಎಂ ಪುತ್ರ ವಿಜಯೇಂದ್ರನ ಹೆಸರೆತ್ತದೆ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಬದಲಾವಣೆಯ ವಿಚಾರ ಮೊದಲಿನಿಂದಲೂ ಕೇಳಿಬರುತ್ತಿದ್ದರೂ, ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಬದಲಾಯಿಸಲು ಮುಂದಾಗಿಲ್ಲ. ಈ ಬಾರಿಯೂ ಜೂನ್ ತಿಂಗಳಲ್ಲಿ ಸಿಎಂ ಯಡಿಯೂರಪ್ಪ ಬದಲಾಗುವುದು ಖಂಡಿತ ಎಂದು ಕೆಲವರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಈ ರೀತಿಯ ಬೆಳವಣಿಗೆ ಹಿಂದೆ ಬಿ.ಎಲ್. ಸಂತೋಷ್ ಗುಂಪಿನ ಹಿಡನ್ ಕಸರತ್ತು ಇದೆಯೆಂಬ ಮಾತು ಕೂಡ ಕೇಳಿಬರುತ್ತಿದೆ.
BJP top brass refuses to meet Karnataka tourism minister C P Yogeshwar.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
12-02-25 12:27 pm
HK News Desk
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm