ಕೇಂದ್ರದಿಂದ ಜೂನ್ ಕೊನೆ ವರೆಗೂ ನಿರ್ಬಂಧ ಮುಂದುವರಿಸಲು ಸೂಚನೆ ; ಸಚಿವ ಬೊಮ್ಮಾಯಿ

29-05-21 09:35 pm       Satish, Bengaluru Correspondent   ಕರ್ನಾಟಕ

ಕರ್ನಾಟಕದಲ್ಲಿ ಜೂನ್ 7ರ ಬಳಿಕವೂ ಲಾಕ್ಡೌನ್ ಮುಂದುವರಿಸಬೇಕೇ, ಬೇಡವೇ ಎನ್ನುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಲಿದ್ದಾರೆ ಎಂದು ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರು, ಮೇ 29: ಕೇಂದ್ರ ಗೃಹ ಸಚಿವಾಲಯದಿಂದ ಇತ್ತೀಚೆಗೆ ಬಿಡುಗಡೆ ಮಾಡಿರುವ ಗೈಡ್ ಲೈನ್ಸ್ ನಲ್ಲಿ ಎಲ್ಲ ರಾಜ್ಯಗಳು ಕೋವಿಡ್ ನಿಯಂತ್ರಣ ಮಾಡುವುದಕ್ಕಾಗಿ ಜೂನ್ 30ರ ವರೆಗೂ ನಿರ್ಬಂಧಗಳನ್ನು ಮುಂದುವರಿಸುವಂತೆ ಸೂಚನೆ ನೀಡಲಾಗಿದೆ. ಆದರೆ, ಕರ್ನಾಟಕದಲ್ಲಿ ಜೂನ್ 7ರ ಬಳಿಕವೂ ಲಾಕ್ಡೌನ್ ಮುಂದುವರಿಸಬೇಕೇ, ಬೇಡವೇ ಎನ್ನುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಲಿದ್ದಾರೆ ಎಂದು ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಈ ಬಗ್ಗೆ ಎಲ್ಲ ಸಚಿವರು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿ ಈ ಬಗ್ಗೆ ನಿರ್ಧಾರಕ್ಕೆ ಬರಲಿದ್ದಾರೆ. ಜೂನ್ 5ರ ವೇಳೆಗೆ ಈ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ಹೇಳಿದರು.

ಕಳೆದ ಮೇ 10ರಿಂದ ರಾಜ್ಯದಲ್ಲಿ ನಿರ್ಬಂಧಿತ ಲಾಕ್ಡೌನ್ ಜಾರಿಯಲ್ಲಿದ್ದು, ಬೆಳಗ್ಗೆ 6ರಿಂದ ಹತ್ತು ಗಂಟೆ ವರೆಗೆ ಅಗತ್ಯ ವಸ್ತುಗಳ ಖರೀದಿಗಾಗಿ ಅವಕಾಶ ನೀಡಲಾಗಿದೆ. ಮೇ 24ರ ವರೆಗೆ ಜಾರಿಗೊಳಿಸಿದ್ದ ಲಾಕ್ಡೌನನ್ನು ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ಪರಿಗಣಿಸಿ ಮತ್ತೆ ಎರಡು ವಾರಗಳಿಗೆ ಅಂದರೆ ಜೂನ್ 7ರ ವರೆಗೆ ವಿಸ್ತರಿಸಲಾಗಿತ್ತು.

ಕೇಂದ್ರ ಸರಕಾರ ಜೂನ್ ಕೊನೆ ವರೆಗೂ ನಿರ್ಬಂಧಗಳನ್ನು ಮುಂದುವರಿಸಲು ಸೂಚನೆ ನೀಡಿದೆ. ಆದರೆ, ಅಂತಿಮ ನಿರ್ಧಾರವನ್ನು ಆಯಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬಿಟ್ಟಿದೆ. ರಾಜ್ಯದಲ್ಲಿ ಮೂರು ವಾರಗಳ ಪರ್ಯಂತ ಲಾಕ್ಡೌನ್ ಪರಿಣಾಮ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಆದರೆ ಪಾಸಿಟಿವ್ ಆಗುತ್ತಿರುವ ಶೇಕಡಾವಾರು ಪ್ರಮಾಣ ಇಳಿಕೆಯಾಗಿಲ್ಲ. ಪಾಸಿಟಿವ್ ದರ ಗ್ರಾಮೀಣ ಪ್ರದೇಶಗಳಲ್ಲಿ ಹತ್ತು ಶೇಕಡಾಕ್ಕಿಂತ ಕಡಿಮೆಗೆ ಬರಲೇಬೇಕು. ಅದಕ್ಕಾಗಿ ನಾವು ಇದೇ ರೀತಿಯ ಲಾಕ್ಡೌನ್ ಮಾಡಲೇಬೇಕಾಗುತ್ತದೆ. ಬೇರಾವುದೇ ಉಪಾಯ ಇಲ್ಲ. ಆರೋಗ್ಯ ಕಾರ್ಯಕರ್ತರನ್ನು ಬಳಸ್ಕೊಂಡು ಸೋಂಕು ಹರಡುವುದನ್ನು ತಪ್ಪಿಸಬೇಕು. ಜೊತೆಗೆ ಸೋಂಕಿತರನ್ನು ಗುಣಮುಖರಾಗಿಸಬೇಕು ಎಂದು ಬೊಮ್ಮಾಯಿ ಹೇಳಿದರು.

Karnataka Chief Minister B S Yediyurappa on Saturday said the question of extending the lockdown may not arise if only the public cooperated and there is a decline in COVID-19 cases. These would be the factors that would determine the State government's decision on the lockdown which the State is currently in till June 7.