ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಮಾಸಿಕ 3,500 ರೂ. ನೆರವು ; ಬಿಎಸ್ ಯಡಿಯೂರಪ್ಪ ಘೋಷಣೆ

29-05-21 09:45 pm       Satish, Bengaluru Correspondent   ಕರ್ನಾಟಕ

ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ರಾಜ್ಯ ಸರಕಾರ ಬಾಲ ಸೇವಾ ಯೋಜನೆ ಎಂಬ ವಿಶಿಷ್ಟ ಯೋಜನೆ ಘೋಷಿಸಿದೆ.

ಬೆಂಗಳೂರು, ಮೇ 29: ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ರಾಜ್ಯ ಸರಕಾರ ಬಾಲ ಸೇವಾ ಯೋಜನೆ ಎಂಬ ವಿಶಿಷ್ಟ ಯೋಜನೆ ಘೋಷಿಸಿದೆ. ಈ ಯೋಜನೆ ಅಡಿಯಲ್ಲಿ ಮಕ್ಕಳ ರಕ್ಷಕರಿಗೆ ತಿಂಗಳಿಗೆ 3,500 ರೂ. ನೆರವು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಒಂದೊಮ್ಮೆ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ರಕ್ಷಕರು ಇರದೇ ಇದ್ದಲ್ಲಿ ಅವರನ್ನು ಮಕ್ಕಳ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಈ ಮಕ್ಕಳಿಗೆ ಗುಣಮುಟ್ಟದ ಶಿಕ್ಷಣ ಸಿಗುವಂತೆ ಮಾಡಲು ಮಾದರಿ ರೆಸಿಡೆನ್ಸಿಯನ್‌ ಶಾಲೆಗಳಿಗೆ ದಾಖಲಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

10ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಉಚಿತ ಲ್ಯಾಪ್‌ಟಾಪ್‌ ಅಥವಾ ಟ್ಯಾಬ್‌ ನೀಡಲಾಗುವುದು. 21 ವರ್ಷ ಪೂರ್ಣಗೊಳಿಸಿದ ಯುವತಿಯರಿಗೆ ಮದುವೆ, ಉನ್ನತ ಶಿಕ್ಷಣ ಹಾಗೂ ಸ್ವ ಉದ್ಯೋಗಕ್ಕಾಗಿ 1 ಲಕ್ಷ ರೂಪಾಯಿ ನೆರವು ನೀಡಲಾಗುವುದು ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ಮಗುವಿನ ಪರಿಪೂರ್ಣ ವಿಕಾಸಕ್ಕಾಗಿ ಅಗತ್ಯ ಮಾರ್ಗದರ್ಶನ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ. ಈ ಮೂಲಕ ಇತರ ರಾಜ್ಯಗಳಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ನೀಡಲಾಗುತ್ತಿರುವ ನೆರವಿನ ಮಾದರಿಯಲ್ಲಿಯೇ ರಾಜ್ಯ ಸರಕಾರವೂ ನೆರವು ಘೋಷಿಸಿದೆ.

The Karnataka government will provide monetary support to children who have lost both parents owing to the Covid-19 pandemic, Chief Minister B S Yediyurappa said Saturday.