ಬ್ರೇಕಿಂಗ್ ನ್ಯೂಸ್
01-06-21 09:22 pm Satish, Bengaluru Correspondent ಕರ್ನಾಟಕ
ಬೆಂಗಳೂರು, ಜೂನ್ 01; ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ಕರ್ನಾಟಕದಲ್ಲಿಯೂ ದ್ವಿತೀಯ ಪಿಯು ಪರೀಕ್ಷೆ ರದ್ದಾಗಲಿದೆಯೇ? ಎಂಬ ಪ್ರಶ್ನೆ ಎದ್ದಿದೆ.
ಮಂಗಳವಾರ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಕರ್ನಾಟಕದ ಶಿಕ್ಷಣ ಸಚಿವ ಸುರೇಶ್ ಕುಮಾರ್ ದ್ವಿತೀಯ ಪಿಯುಸಿ ಪರೀಕ್ಷೆಗಳ ಬಗ್ಗೆ ಮಾತನಾಡಿದ್ದು, "ಸಿಬಿಎಸ್ಇ 12ನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕುರಿತಂತೆ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಶೀಘ್ರ ತೀರ್ಮಾನ ಪ್ರಕಟಿಸಲಾಗುತ್ತದೆ" ಎಂದರು.
"ಕೇಂದ್ರೀಯ ಮಂಡಳಿಯು ಪರೀಕ್ಷೆ ರದ್ದು ಮಾಡಿದೆ. ರಾಜ್ಯ ಪಠ್ಯಕ್ರಮ ಅನುಸರಿಸಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನದ ಕುರಿತು ತೀರ್ಮಾನ ಮಾಡಲಾಗುತ್ತದೆ" ಎಂದು ತಿಳಿಸಿದರು.
"ವಿದ್ಯಾರ್ಥಿಗಳ ಆರೋಗ್ಯ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ಶೀಘ್ರದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ" ಎಂದು ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು. ಕರ್ನಾಟಕದಲ್ಲಿ ಮೇ 24ರಿಂದ ಜೂನ್ 10ರ ತನಕ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಲು ದಿನಾಂಕ ಪ್ರಕಟಿಸಲಾಗಿತ್ತು. ಆದರೆ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
10ನೇ ತರಗತಿ ಪರೀಕ್ಷೆ?:
ದ್ವಿತೀಯ ಪಿಯುಸಿ ಪರೀಕ್ಷೆ ಮಾತ್ರವಲ್ಲ 10ನೇ ತರಗತಿ ಪರೀಕ್ಷೆ ಸಹ ಮುಂದೂಡಲಾಗಿದೆ. ಪರೀಕ್ಷೆ ನಡೆಸುವ ಕುರಿತು ಇನ್ನು ಶಿಕ್ಷಣ ಇಲಾಖೆ ಅಂತಿಮ ತೀರ್ಮಾನ ಕೈಗೊಂಡಿಲ್ಲ.
Karnataka Education Minister Suresh Kumar to Soon Determine if CBSE 2nd PUC Class 12 board exams in Karnataka will be cancelled or not. Class 12 board exams will not take place this year for CBSE and CISCE students, the decision came after a meeting between high-profile ministers of the Narendra Modi government. The meeting was chaired by PM and attended by the Union Minister of Information and Broadcasting Prakash Javadekar and Union Minister of Defence Rajnath Singh.
30-10-24 07:54 pm
Bangalore Correspondent
ರಾಕಿ ಭಾಯ್ ಸಿನಿಮಾ 'ಟಾಕ್ಸಿಕ್'ಗಾಗಿ ನೂರಾರು ಮರಗಳ ಮ...
30-10-24 02:02 pm
Chikkamagaluru accident, Hassan: ಚಿಕ್ಕಮಗಳೂರು...
30-10-24 12:18 pm
Actor Darshan Bail, Released, Murder: ಕೊನೆಗೂ...
30-10-24 11:55 am
ರೈತರ ಜಮೀನಿಗೆ ವಕ್ಫ್ ನೋಟಿಸ್ ; ವಿಜಯಪುರದಲ್ಲಿ ತೀವ್...
29-10-24 11:02 pm
29-10-24 08:23 pm
HK News Desk
ಕಾಞಂಗಾಡ್ ; ತೈಯ್ಯಂ ಉತ್ಸವಕ್ಕೂ ಮುನ್ನ ಪಟಾಕಿ ದುರಂತ...
29-10-24 12:01 pm
ಕೇರಳದ ಯೂಟ್ಯೂಬರ್ ದಂಪತಿ ಸಾವಿಗೆ ಶರಣು ; ಕೊನೆಯ ವಿ...
28-10-24 08:38 pm
ಇಸ್ರೇಲಿಗೆ ನಮ್ಮ ಸಾಮರ್ಥ್ಯ ತೋರಿಸುತ್ತೇವೆ ಎಂದು ಪೋಸ...
28-10-24 05:56 pm
Cyber fraud, Digital arrest, Modi: "ಡಿಜಿಟಲ್ ಅ...
28-10-24 11:47 am
30-10-24 06:32 pm
Mangalore Correspondent
Mangalore Fire, Pilikula: ಪಿಲಿಕುಳ ನಿಸರ್ಗಧಾಮದಲ...
30-10-24 04:28 pm
Mangalore Rajyotsava Award 2024: ಜಿಲ್ಲಾ ರಾಜ್ಯ...
28-10-24 10:51 pm
Leopard, pilar, Deralakatte; ದೇರಳಕಟ್ಟೆ ಪ್ರದೇಶ...
28-10-24 03:53 pm
MLA Harish Poonja, B K Harishprasad: ಪುಡಿ ರಾಜ...
28-10-24 01:00 pm
29-10-24 01:01 pm
Mangalore Correspondent
Mangalore Murder, Crime, Kateel: ಕಟೀಲು ಬಳಿ ಮನ...
29-10-24 12:38 pm
Mangalore Crime, Drugs: ಪಣಂಬೂರಿನಲ್ಲಿ ಡ್ರಗ್ಸ್...
28-10-24 11:12 pm
Bangalore Crime, Blackmail: ಪತ್ನಿ ಮತ್ತು ಆಕೆಯ...
28-10-24 02:47 pm
Mangalore News, Cyber Fraud: ಮಹಾರಾಷ್ಟ್ರದ ಎಸ್ಐ...
27-10-24 08:57 pm