ಬ್ರೇಕಿಂಗ್ ನ್ಯೂಸ್
01-06-21 09:54 pm Satish, Bengaluru Correspondent ಕರ್ನಾಟಕ
ದಾವಣಗೆರೆ, ಜೂನ್ 1: ಯಡಿಯೂರಪ್ಪ ಆಲದ ಮರ, ಚಾಕು ಹಾಕಲು ಬಂದ್ರೆ ನಾವು ಸುಮ್ನೆ ಬೀಡ್ತೀವಾ? ಉಂಡು ಹೋದ ಕೊಂಡೂ ಹೋದ ಯೋಗಿಶ್ವರ್ ಒಬ್ಬ ಭ್ರಷ್ಟಾಚಾರಿ.. ಹೀಗೆಂದು ಸಚಿವ ಸಿ.ಪಿ. ಯೋಗೀಶ್ವರ್ ಅವರನ್ನು ಛೇಡಿಸಿದ್ದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ.
ಇತ್ತೀಚೆಗೆ ಸಿಎಂ ಯಡಿಯೂರಪ್ಪ ವಿರುದ್ಧ ದೆಹಲಿಗೆ ದೂರು ಹೇಳಿಕೊಂಡು ಹೋಗಿದ್ದಲ್ಲದೆ, ರಾಜ್ಯದಲ್ಲಿರುವುದು ಮೂರು ಪಕ್ಷಗಳ ಸರಕಾರ ಎಂದು ಟೀಕಿಸಿದ್ದ ಯೋಗೀಶ್ವರ್ ವಿರುದ್ಧ ಬಿಜೆಪಿಯ ಇತರ ಸಚಿವರು, ಯಡಿಯೂರಪ್ಪ ಬಣದ ಶಾಸಕರು ಹರಿಹಾಯ್ದಿದ್ದಾರೆ.
ಇದೇ ವಿಚಾರದಲ್ಲಿ ದಾವಣಗೆರೆಯಲ್ಲಿ ಯೋಗೀಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ ಎಂಪಿ ರೇಣುಕಾಚಾರ್ಯ, ಯೋಗೀಶ್ವರ್ ಒಬ್ಬ ಭ್ರಷ್ಟಾಚಾರಿ.. ಆ ವ್ಯಕ್ತಿ ಏನೆಲ್ಲ ಮಾಡಿದ್ದಾನೆ ಅವೆಲ್ಲದರ ದಾಖಲೆ ಬಿಡುಗಡೆ ಮಾಡುತ್ತೇನೆ. ಮೆಗಾಸಿಟಿ ಅಕ್ರಮದ ಬಗ್ಗೆಯೂ ದಾಖಲೆ ಬಿಡುಗಡೆ ಮಾಡ್ತೀನಿ ಎಂದು ಗುಡುಗಿದ್ದಾರೆ.
ಚುನಾವಣೆಯಲ್ಲಿ ಸೋತ ವ್ಯಕ್ತಿ ಅವರಿವರ ಕಾಲು ಹಿಡಿದು ಮಂತ್ರಿ ಆಗಿದ್ದಾನೆ. ಕೊಟ್ಟ ಇಲಾಖೆಯ ಅಧಿಕಾರಿಗಳ ಸಭೆಯನ್ನೇ ಮಾಡಿಲ್ಲ. ಕೇವಲ ದೆಹಲಿ- ಬೆಂಗಳೂರು ಪ್ರವಾಸ ಮಾಡುವುದೇ ಆಗಿದೆ. ಕೆಲವು
ದೆಹಲಿ ನಾಯಕರ ಗೇಟ್ ಕಾದು ಗಾಸಿಪ್ ಹರಡಿಸುವುದೇ ಯೋಗಿಶ್ವರ್ ಕೆಲಸವಾಗಿದೆ. ಇದೀಗ ರಾಷ್ಟ್ರೀಯ ನಾಯಕರೇ ಮಂಗಳಾರತಿ ಮಾಡಿ ಕಳುಹಿಸಿದ್ದಾರೆ ಎಂದು ಮೂದಲಿಸಿದರು.
ಯೋಗೀಶ್ವರ್ ತನ್ನ ಸ್ವಂತ ಊರು ಚಿಕ್ಕೇರಿಹಳ್ಳಿಯಲ್ಲಿ ಬಿಜೆಪಿಗೆ ಗ್ರಾಪಂ ಸ್ಥಾನವನ್ನೂ ಗೆಲ್ಲಿಸಲು ಸಾಧ್ಯವಾಗಿಲ್ಲ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಗರಸಭೆಯನ್ನೂ ಗೆದ್ದಿಲ್ಲ. ಇವರಿಗೆ ರಾಮನಗರ ಉಸ್ತುವಾರಿ ಬೇಕಂತೆ ಎಂದು ವ್ಯಂಗ್ಯವಾಡಿದ ರೇಣುಕಾಚಾರ್ಯ,
ಚುನಾವಣೆಯಲ್ಲಿ ಸೋತ ವ್ಯಕ್ತಿಗೆ ಹಿಂಬಾಗಿಲ ಮೂಲಕ ಮಂತ್ರಿ ಸ್ಥಾನ ಕೊಟ್ಟಿದ್ದೇ ಅಪರಾಧ, ಈತನಿಗೆ ಉಸ್ತುವಾರಿ ಬೇಕಂತೆ. ಮೂರು ಪಕ್ಷ ಹಾರಿ ಬಂದ ಯೋಗಿಶ್ವರ್ ಪಾಲಿಗೆ ಬಿಜೆಪಿಯಲ್ಲಿ ಕಥೆ ಮುಗಿದಂತೆ. ಈಗಾಗ್ಲೇ 65 ಜನ ಶಾಸಕರು ಸಹಿ ಮಾಡಿದ್ದೇವೆ, ಕೋವಿಡ್ ಮುಗಿದ ಬಳಿಕ ಸಚಿವ ಸ್ಥಾನದಿಂದ ವಜಾಕ್ಕೆ ಹೈಕಮಾಂಡ್ ಗೆ ಅಗ್ರಹ ಮಾಡುತ್ತೇವೆ ಎಂದು ಹೇಳಿದರು.
ಯತ್ನಾಳ್ ಸಿಎಂ ಬಗ್ಗೆ ಹಗುರವಾಗಿ ಮಾತನಾಡೋದು ಸರಿಯಲ್ಲ. ಪದೇ ಪದೇ ವಿಜಯೇಂದ್ರ ಹೆಸರು ಯಾಕೆ ಹೇಳ್ತೀರಿ.. ಇವೆಲ್ಲದರ ಬಗ್ಗೆ ಇನ್ನು ಸುಮ್ಮನಿರಲು ಸಾಧ್ಯವಿಲ್ಲ ಎಂದು ರೇಣುಕಾಚಾರ್ಯ ಕಿಡಿಕಾರಿದ್ದಾರೆ.
Davangere MP Renukacharya slammed at CP Yogeshwar says he's a most corrupted Politician. CM Yediyurappa is like an Ashoka tree no one can cut off him said Renukacharya
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
12-02-25 06:05 pm
Mangalore Correspondent
Ullal News, Dr Kalladka Prabhakar Bhat: ಸಾಕು...
11-02-25 07:44 pm
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
12-02-25 12:27 pm
HK News Desk
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm