ವೈದ್ಯ ದೀಪಕ್ ಮೇಲೆ ಹಲ್ಲೆ: ಜೂನ್ 3ರಿಂದ ತರೀಕೆರೆಯಲ್ಲಿ ಆಸ್ಪತ್ರೆ-ಕ್ಲಿನಿಕ್ ಬಂದ್

03-06-21 10:33 am       Headline Karnataka News Network   ಕರ್ನಾಟಕ

ತರೀಕೆರೆಯ ಮಕ್ಕಳ ತಜ್ಞ ವೈದ್ಯ ದೀಪಕ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣ ಖಂಡಿಸಿ ಜೂನ್ 3ರಿಂದ ಜೂನ್ 6ರವರೆಗೆ ಖಾಸಗಿ ಆಸ್ಪತ್ರೆ-ಕ್ಲಿನಿಕ್ ಸೇವೆ ಬಂದ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ.

ಚಿಕ್ಕಮಗಳೂರು, ಜೂನ್ 3: ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಮಕ್ಕಳ ತಜ್ಞ ವೈದ್ಯ ದೀಪಕ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣ ಖಂಡಿಸಿ ಜೂನ್ 3ರಿಂದ ಜೂನ್ 6ರವರೆಗೆ ಖಾಸಗಿ ಆಸ್ಪತ್ರೆ-ಕ್ಲಿನಿಕ್ ಸೇವೆ ಬಂದ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ.

ಮಕ್ಕಳ ತಜ್ಞ ವೈದ್ಯ ದೀಪಕ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣ ವಿರೋಧಿಸಿ ನಾಲ್ಕು ದಿನ ಖಾಸಗಿ ಆಸ್ಪತ್ರೆಗಳ ಸೇವೆ ಸ್ಥಗಿತಗೊಳಿಸಲಾಗಿದ್ದು, ವೈದ್ಯರ ಸಾಮೂಹಿ

ಡಾ.ದೀಪಕ್ ಮೇಲಿನ ಹಲ್ಲೆ ಇಡೀ ವೈದ್ಯ ಸಮೂಹದ ಮೇಲೆ ನಡೆದ ದೌರ್ಜನ್ಯವಾಗಿದೆ. ಜೀವ ಬಲಿ ಪಡೆಯುವಂಥ ಕ್ರೌರ್ಯಕ್ಕೆ ಮುಂದಾದರೆ ಹೇಗೆ? ಎಂದು ತರೀಕೆರೆಯ ಖಾಸಗಿ ವೈದ್ಯರು ಪ್ರಶ್ನಿಸಿದ್ದಾರೆ.



ಕೊರೊನಾದಂಥ ಸನ್ನಿವೇಶದಲ್ಲಿ ಪ್ರಾಣ ಒತ್ತೆ ಇಟ್ಟು ಡಾ.ದೀಪಕ್ ಕೆಲಸ ಮಾಡಿದ್ದರು. ಇಂದು ದೀಪಕ್ ಮೇಲೆ, ನಾಳೆ ಇನ್ನ್ಯಾರೋ ವೈದ್ಯರ ಮೇಲೆ ಹಲ್ಲೆ. ವೈದ್ಯರ ರಕ್ಷಣೆಗೆ ಸರ್ಕಾರ ಮುಂದಾಗಲೇಬೇಕೆಂದು ವೈದ್ಯರ ಸಂಘಟನೆಗಳು ಒತ್ತಾಯಿಸಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲು ಅಭಿಯಾನ ಶುರುವಾಗಿದ್ದು, ಡಾ.ದೀಪಕ್ ಮೇಲಿನ ಹಲ್ಲೆಗೆ ನ್ಯಾಯ ಸಿಗದಿದ್ದರೆ ಬೆಂಗಳೂರಿನಲ್ಲೂ ವೈದ್ಯಕೀಯ ಸೇವೆ ಸ್ಥಗಿತಕ್ಕೆ ಚಿಂತನೆ ನಡೆಸಲಾಗಿದೆ.