ಬ್ರೇಕಿಂಗ್ ನ್ಯೂಸ್
03-06-21 10:28 pm Satish, Bengaluru ಕರ್ನಾಟಕ
ಬೆಂಗಳೂರು, ಜೂನ್ 3: ಏಳು ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ಕೆಎಸ್‌ಆರ್‌ಟಿಸಿ ಬ್ರ್ಯಾಂಡ್ ಹೆಸರು ಕೇರಳದ ಪಾಲಾಗಿದೆ. ಕೆಎಸ್‌ಆರ್‌ಟಿಸಿ ಹೆಸರನ್ನು ಕರ್ನಾಟಕ ಸರಕಾರ ತನ್ನ ಸಾರಿಗೆ ಪ್ರಾಧಿಕಾರಕ್ಕೆ ಬಳಕೆ ಮಾಡುವಂತಿಲ್ಲ ಎಂದು ಟ್ರೇಡ್ ಮಾರ್ಕ್ ಪ್ರಾಧಿಕಾರ ಆದೇಶ ಮಾಡಿದೆ.
ಟ್ರೇಡ್ ಮಾರ್ಕ್ ರಿಜಿಸ್ಟರಿ ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್) ಆಧಾರದ ಮೇಲೆ ತೀರ್ಪು ನೀಡಿದ್ದು, Karnataka State Road Transport Corporation (KSRTC) ಎನ್ನುವ ವಿಸ್ತೃತ ರೂಪವನ್ನು ಕರ್ನಾಟಕ ಸರಕಾರ ಬಳಕೆ ಮಾಡುವಂತಿಲ್ಲ ಎಂದು ಆದೇಶಿಸಿದೆ. ಈ ಬೆಳವಣಿಗೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಟ್ವಿಟ್ಟರ್‌ನಲ್ಲಿ ಕರ್ನಾಟಕ ಸಾರಿಗೆ ಸಮರ್ಥಿಸಿಕೊಂಡು ನೆಟ್ಟಿಗರು ಸರಣಿ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ.
KSRTC ಎನ್ನುವ ಹೆಸರನ್ನು ಕೇರಳದವರು ಗೆದ್ದುಕೊಳ್ಳಬಹುದು. ಆದರೆ ಕ.ರಾ.ರ.ಸಾ.ನಿ ಸೇವೆ ಮತ್ತು ಗುಣಮಟ್ಟವನ್ನು ಹಿಂದಿಕ್ಕುವುದು ದಕ್ಷಿಣ ಭಾರತದ ಯಾವ ರಾಜ್ಯದ ಸಾರಿಗೆ ನಿಗಮಕ್ಕೂ ಆಗಲಿಕ್ಕಿಲ್ಲ. ದಕ್ಷಿಣದ ನಾಲ್ಕು ರಾಜ್ಯಗಳ ಸಾರಿಗೆ ಬಳಸಿದ ಅನುಭವದ ಮೇಲೆ ಇದು ನನ್ನ ಅನಿಸಿಕೆ ಎಂದು ವಸಂತ್ ಶೆಟ್ಟಿ ಎಂಬವರು ಟ್ವೀಟ್ ಮಾಡಿದ್ದಾರೆ.
ಗಂಡಭೇರುಂಡ ಲೋಗೊ ಜೊತೆಗೆ ಕೇರಳ ಸರಕಾರ ಕೆಎಸ್ಸಾರ್ಟಿಸಿ ಹೆಸರನ್ನು ತನ್ನ ಸಾರಿಗೆ ಬಸ್ ಗಳಲ್ಲಿ ನಮೂದಿಸಿತ್ತು. ಆದರೆ, ಕರ್ನಾಟಕ ಸರಕಾರವೂ ಸಾರಿಗೆ ಪ್ರಾಧಿಕಾರಕ್ಕೆ ಅದೇ ಹೆಸರಿಟ್ಟು ಲೋಗೊ ಬದಲು ಮಾಡಿತ್ತು. ಈ ವಿಚಾರ ಜಟಾಪಟಿಗೆ ಕಾರಣವಾಗಿತ್ತಲ್ಲದೆ, ಕೇರಳ ಸರಕಾರ ಹೆಸರನ್ನು ತನ್ನದಾಗಿಸಿಕೊಳ್ಳಲು ಟ್ರೇಡ್ ಮಾರ್ಕ್ ಪ್ರಾಧಿಕಾರಕ್ಕೆ ದೂರು ನೀಡಿತ್ತು. ಕೆಎಸ್ಆರ್‌ಟಿಸಿ ಎಂಬ ಹೆಸರನ್ನು ಕೇರಳ 1962ರಲ್ಲೇ ನೋಂದಣಿ ಮಾಡಿಸಿದೆ. ಕರ್ನಾಟಕ 1972ರಲ್ಲಿ ನೋಂದಣಿ ಮಾಡಿಸಿದ್ದು ಎಂಬ ಅಂಶವನ್ನು ತೀರ್ಪು ನೀಡುವಾಗ ಪರಿಗಣಿಸಿದೆ.
ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಕರ್ನಾಟಕದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಈ ಬಗ್ಗೆ ಅಧಿಕೃತ ಘೋಷಣೆ ಬಂದಿಲ್ಲ. ಆದೇಶ ಬಂದ ಮೇಲೆ ಕಾನೂನು ಹೋರಾಟದ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
After a seven-year-long dispute with neighboring state Karnataka, the Kerala State Road Transport Corporation says it has got the legal rights to the trademarked-acronym KSRTC- with the logo of two elephants and the name Ana Vandi- associated with the state-run transport corporation.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
12-02-25 12:27 pm
HK News Desk
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm