ಬ್ರೇಕಿಂಗ್ ನ್ಯೂಸ್
04-06-21 12:14 pm Headline Karnataka News Network ಕರ್ನಾಟಕ
ಬೆಂಗಳೂರು, ಜೂನ್ 4: ಉಡುಪಿ ಜಿಲ್ಲೆಯ ಮಣಿಪಾಲ ಮೂಲದ ಮಣಿಪಾಲ್ ಗ್ರೂಪ್ ಸಮೂಹ ತನ್ನ ಉದ್ಯಮ ಜಾಲವನ್ನು ವಿಸ್ತರಿಸುತ್ತಲೇ ಇದ್ದು ಕೊರೊನಾ ಬಿಕ್ಕಟ್ಟಿನ ನಡುವೆಯೇ ಬೆಂಗಳೂರು ಮೂಲದ ವಿಕ್ರಮ್ ಆಸ್ಪತ್ರೆಯನ್ನು ಬರೋಬ್ಬರಿ 350 ಕೋಟಿ ರೂಪಾಯಿಗೆ ಖರೀದಿಸಿದೆ.
ಉದ್ಯಮಿ ರಂಜನ್ ಪೈ ಮಾಲೀಕತ್ವದ ಮಣಿಪಾಲ್ ಗ್ರೂಪ್ ಕಳೆದ ಏಪ್ರಿಲ್‌ನಲ್ಲಿ ಕೊಲಂಬಿಯಾ ಏಷ್ಯಾದ ಭಾರತೀಯ ವಿಭಾಗವನ್ನು 2,100 ಕೋಟಿ ರೂ.ಗೆ ಖರೀದಿಸಿ ಹುಬ್ಬೇರಿಸಿತ್ತು. ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಆಸ್ಪತ್ರೆಯನ್ನು ಖರೀದಿಸಿದ್ದು ಒಂದೇ ವರ್ಷದಲ್ಲಿ ಮಣಿಪಾಲ್ ಆಸ್ಪತ್ರೆಯಿಂದ ಎರಡನೇ ಡೀಲ್ ನಡೆದಿದೆ. ಇದರೊಂದಿಗೆ ಅಪೊಲೊ ನಂತರ ದೇಶದ ಎರಡನೇ ಅತಿ ದೊಡ್ಡ ಆಸ್ಪತ್ರೆ ಸಮೂಹವಾಗಿ ಮಣಿಪಾಲ್ ಗ್ರೂಪ್ ಸಮೂಹ ಹೊರಹೊಮ್ಮಿದೆ.
ಈ ಡೀಲ್ ಬಳಿಕ ವಿಕ್ರಮ್ ಆಸ್ಪತ್ರೆಯ ಹೆಸರು ಮಣಿಪಾಲ್ ಹಾಸ್ಪಿಟಲ್ ಎಂದು ಬದಲಾಗಲಿದೆ. ಇದರೊಂದಿಗೆ ರಾಜಧಾನಿ ಬೆಂಗಳೂರು ಒಂದರಲ್ಲೇ ಮಣಿಪಾಲ್ ಗ್ರೂಪ್‌ನ ಆಸ್ಪತ್ರೆಗಳ ಸಂಖ್ಯೆ 10ಕ್ಕೆ ಏರಿಕೆಯಾಗಲಿದೆ. (4 ಮಣಿಪಾಲ್ ಹಾಸ್ಪಿಟಲ್ಸ್, 5 ಕೊಲಂಬಿಯಾ ಏಷ್ಯಾ ಹಾಸ್ಪಿಟಲ್, ಒಂದು ವಿಕ್ರಮ್ ಆಸ್ಪತ್ರೆ).
ಇದೇ ವೇಳೆ, ಮಣಿಪಾಲ್ ಗ್ರೂಪ್ ಎರಡು ಕಡೆ ಗ್ರೀನ್‌ಫೀಲ್ಡ್ ಆಸ್ಪತ್ರೆಗಳನ್ನು ನಿರ್ಮಿಸುತ್ತಿದ್ದು, ಮುಂದಿನ 24 ತಿಂಗಳುಗಳಲ್ಲಿ ಮುಕ್ತಾಯವಾಗುವ ನಿರೀಕ್ಷೆಯಿದೆ. ಇದರಿಂದ ನಮ್ಮ ನೆಟ್ವರ್ಕ್ 12 ಆಸ್ಪತ್ರೆಗಳಿಗೆ ವಿಸ್ತರಣೆಯಾಗಲಿದ್ದು, 2,300 ಬೆಡ್ ಲಭ್ಯವಾಗಲಿದೆ ಎಂದು ಎಂದು ಮಣಿಪಾಲ್ ಎಜ್ಯುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್‌ನ ಅಧ್ಯಕ್ಷ ರಂಜನ್ ಪೈ ತಿಳಿಸಿದ್ದಾರೆ.
ವಿಕ್ರಮ್ ಮತ್ತು ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ ಖರೀದಿಯ ನಂತರ ದೇಶದಲ್ಲಿ ಮಣಿಪಾಲ್ ಗ್ರೂಪ್‌ನ ಆಸ್ಪತ್ರೆಗಳ ಸಂಖ್ಯೆ 27ಕ್ಕೆ ಏರಿಕೆಯಾಗಲಿದೆ. 14 ನಗರಗಳಲ್ಲಿ ಮಣಿಪಾಲ್ ಆಸ್ಪತ್ರೆಗಳಿದ್ದು, 7,300 ಬೆಡ್‌ಗಳನ್ನು ಹೊಂದಿವೆ. 4,000 ವೈದ್ಯರು ಹಾಗೂ 11,000 ಸಿಬ್ಬಂದಿಗಳು ಆಸ್ಪತ್ರೆಗಳ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶದ ಅತೀ ದೊಡ್ಡ ಆಸ್ಪತ್ರೆ ಸಮೂಹ ಅಪೋಲೊ ಬಳಿಯಲ್ಲಿ 70 ಆಸ್ಪತ್ರೆಗಳಿವೆ.
Manipal Hospitals, the second-largest hospital chain in India, entered into a definitive agreement with private equity firm Multiples to acquire a 100% stake in Bengaluru-based multi-specialty hospital Vikram Hospital for consideration of ₹350 crores.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm