ಬ್ರೇಕಿಂಗ್ ನ್ಯೂಸ್
06-06-21 01:39 pm Headline Karnataka News Network ಕರ್ನಾಟಕ
ಮೈಸೂರು, ಜೂನ್ 6: ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ತೆರವು ಮಾಡಲಾಗಿದೆ. ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅಭಯದ ನಡುವೆಯೂ ಮುಖ್ಯಮಂತ್ರಿ ಯಡಿಯೂರಪ್ಪ ರೋಹಿಣಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಮಾಡಿದ್ದಾರೆ.
ಕಳೆದ ಒಂದು ತಿಂಗಳಿಂದ ರಾಜಕಾರಣಿಗಳ ಮರ್ಜಿಗೆ ಸಿಲುಕದೆ ತಾನು ನಡೆದದ್ದೇ ದಾರಿ ಎನ್ನುತ್ತಾ ಜಿಲ್ಲಾಧಿಕಾರಿಯಾಗಿ ಅಧಿಕಾರಿ ಚಲಾಯಿಸುತ್ತಿದ್ದ ರೋಹಿಣಿ ಸಿಂಧೂರಿ ವಿರುದ್ಧ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪಸಿಂಹ, ಮಾಜಿ ಸಚಿವ ಸಾರಾ ಮಹೇಶ್ ಸೇರಿದಂತೆ ರಾಜಕಾರಣಿಗಳೆಲ್ಲ ಟೀಕೆಯ ಸುರಿಮಳೆಗೈದಿದ್ದರು. ರೋಹಿಣಿ ತಮ್ಮ ಮಾತು ಕೇಳೋದಿಲ್ಲ. ದರ್ಪದಿಂದ ವರ್ತಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಅದರ ಜೊತೆಗೆ ಕೊರೊನಾ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ, ಹಳ್ಳಿಗೆ ಹೋಗಿ ಕೆಲಸ ಮಾಡಲಿ ಎಂದು ಮೂದಲಿಸಿದ್ದರು.
ಆದರೆ, ಈ ಎಲ್ಲ ಆರೋಪಗಳಿಗೆ ತನ್ನ ಕೆಲಸ, ಕಾರ್ಯಗಳ ಮೂಲಕವೇ ಉತ್ತರ ನೀಡಿದ್ದ ರೋಹಿಣಿ ಸರಕಾರದ ಪಾಲಿಗೆ ಮಗ್ಗುಲ ಮುಳ್ಳಾಗಿದ್ದರು. ಇದೇ ಸಂದರ್ಭದಲ್ಲಿ ರಾಜಕಾರಣಿಗಳ ಭೂಅಕ್ರಮಕ್ಕೆ ಕೈಹಾಕಿದ್ದ ಜಿಲ್ಲಾಧಿಕಾರಿ ಅದರ ತನಿಖೆಗಾಗಿ ಅಧಿಕಾರಿಗಳಿಂದ ಫೈಲ್ ತರಿಸಿಕೊಂಡಿದ್ದರು. ಕೆಐಎಡಿಬಿ, ಮಹಾನಗರ ಪಾಲಿಕೆಯ ಅಧಿಕಾರಿಗಳು ತಮ್ಮ ಭ್ರಷ್ಟಾಚಾರ ಹೊರಗೆ ಬರುವುದೆಂದು ಬೆದರಿ, ಬೆವತು ಹೋಗಿದ್ದರು. ಇಂಥ ಸಂದರ್ಭದಲ್ಲೇ ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಶಿಲ್ಪಾ ನಾಗ್, ಜಿಲ್ಲಾಧಿಕಾರಿಯ ವಿರುದ್ಧವೇ ಸುದ್ದಿಗೋಷ್ಠಿ ಕರೆದು ವ್ಯರ್ಥಾಲಾಪ ಮಾಡಿದ್ದರು. ಜಿಲ್ಲಾಧಿಕಾರಿಯಾಗಿ ಸರ್ವಾಧಿಕಾರಿ ವರ್ತನೆ ತೋರುತ್ತಿದ್ದಾರೆ. ಅವರ ಕಿರುಕುಳದಿಂದಾಗಿ ಕೆಲಸ ಮಾಡಲು ಸಾಧ್ಯವಾಗದೆ ಆಯುಕ್ತ ಹುದ್ದೆಗೇ ರಾಜಿನಾಮೆ ನೀಡುತ್ತೇನೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ, ಮತ್ತೊಂದು ಬಾಂಬ್ ಸೃಷ್ಟಿಸಿದ್ದರು.
ಇದರಿಂದ ಇಬ್ಬರು ಅಧಿಕಾರಿಗಳ ಬೀದಿ ಜಗಳ ಸುದ್ದಿಯಾಗುತ್ತಿದ್ದಂತೆ, ಮೈಸೂರು ಜಿಲ್ಲಾಧಿಕಾರಿ ಮತ್ತು ಆಯುಕ್ತರ ನಡುವಿನ ಶೀತಲ ಸಮರ ಹೊರಬಂದಿತ್ತು. ಇಬ್ಬರು ಕೂಡ ಐಎಎಸ್ ಅಧಿಕಾರಿಯಾಗಿದ್ದು ಮತ್ತು ಶಿಲ್ಪಾನಾಗ್ ರಾಜಕಾರಣಿಗಳ ಟೀಕೆಯ ಮಧ್ಯೆಯೇ ಜಿಲ್ಲಾಧಿಕಾರಿಯ ವಿರುದ್ಧ ತಿರುಗಿ ಬಿದ್ದಿದ್ದು ದಕ್ಷ ಅಧಿಕಾರಿಯೆಂದು ಹೆಸರು ಮಾಡಿದ್ದ ರೋಹಿಣಿಯ ಹೆಸರಿಗೆ ಮಸಿ ಬಳಿಯುವಂತಾಗಿತ್ತು. ಈ ಹಿಂದೆ ಹಾಸನ ಜಿಲ್ಲಾಧಿಕಾರಿಯಾಗಿದ್ದಾಗಲೂ ಮಾಜಿ ಸಚಿವ ರೇವಣ್ಣ ಪ್ರಣೀತ ಕುಟುಂಬ ರಾಜಕಾರಣ ಮತ್ತು ಉಸ್ತುವಾರಿ ಸಚಿವರಾಗಿದ್ದ ಎ.ಮಂಜು ಲಾಬಿಗೆ ಮಣಿಯದೆ ಗಟ್ಟಿ ನಿಂತಿದ್ದ ರೋಹಿಣಿ ವಿರುದ್ಧ ರಾಜಕಾರಣಿಗಳೆಲ್ಲ ಪಕ್ಷಭೇದ ಮರೆತು ಟೀಕಿಸಲು ಆರಂಭಿಸಿದ್ದರು.
ಅಂದಿನ ದ್ವೇಷ ಹೊಂದಿದ್ದ ಕಾಂಗ್ರೆಸ್ ಮುಖಂಡ ಎ.ಮಂಜು, ಐಎಎಸ್ ಅಧಿಕಾರಿಯೆಂಬ ಗೌರವವನ್ನೂ ಕೊಡದೆ ತಿಪ್ಪೆಯಲ್ಲಿರೋರು ಕೂಡ ಐಎಎಸ್ ಮಾಡುತ್ತಾರೆ, ರೋಹಿಣಿಯದ್ದೇನು ಮಹಾ ಎನ್ನುವ ರೀತಿ ಟೀಕಿಸಿದ್ದರು. ಜೆಡಿಎಸ್ ಮತ್ತು ಬಿಜೆಪಿ ಮುಖಂಡರೆಲ್ಲ ರೋಹಿಣಿಯ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದರು. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಅಧಿಕಾರಿಯ ದೌಲತ್ತು ಬೇಕಿತ್ತಾ ಎಂದು ಟೀಕಿಸಿದ್ದರು. ಆದರೆ, ಇವೆಲ್ಲ ಟೀಕೆ- ಟಿಪ್ಪಣಿ ಮಧ್ಯೆ ಮೈಸೂರಿಗೆ ಆಗಮಿಸಿದ್ದ ರಾಜ್ಯ ಮುಖ್ಯ ಕಾರ್ಯದರ್ಶಿ ರವಿ ಕುಮಾರ್, ಜಿಲ್ಲಾಧಿಕಾರಿ ರೋಹಿಣಿಯ ಪರವಾಗೇ ಬ್ಯಾಟಿಂಗ್ ಮಾಡಿದ್ದರು. ಅಲ್ಲದೆ, ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಇಲಾಖೆಯ ಒಳಗಿನ ವಿಚಾರವನ್ನು ಮಾಧ್ಯಮದ ಮುಂದಕ್ಕೆ ಒಯ್ದು ಬೀದಿ ರಂಪ ಮಾಡಿದ್ದಕ್ಕೆ ಗರಂ ಆಗಿದ್ದರು. ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ಯಾವುದೇ ವರ್ಗಾವಣೆ ಅಗತ್ಯವಿಲ್ಲ. ಎಲ್ಲವೂ ಸರಿಯಾಗಿದೆ, ಸರಿ ಮಾಡ್ಕೊಂಡು ಹೋಗುತ್ತಾರೆ. ಶಿಲ್ಪಾನಾಗ್ ರಾಜಿನಾಮೆಯನ್ನೇ ನೀಡಿಲ್ಲ ಎನ್ನುವ ಮೂಲಕ ಶಿಲ್ಪಾ ರಾಜಿನಾಮೆ ಪ್ರಹಸನಕ್ಕೆ ಕೆಂಗಣ್ಣು ಬೀರಿದ್ದರು.
ಆದರೆ, ನಿನ್ನೆ ಮಧ್ಯಾಹ್ನ ಹೇಳಿಕೆ ನೀಡಿದ್ದ ಮೈಸೂರು ಉಸ್ತುವಾರಿ ಸಚಿವ ಸೋಮಶೇಖರ್, ದರ್ಪದ ಅಧಿಕಾರಿಗಳನ್ನು ಇಟ್ಟುಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವ ಹೇಳಿಕೆ ನೀಡುವ ಮೂಲಕ ರೋಹಿಣಿ ಸಿಂಧೂರಿ ವರ್ಗಾವಣೆ ಮಾಡಿಯೇ ತೀರುತ್ತೇನೆಂಬ ಸುಳಿವು ನೀಡಿದ್ದರು. ಆನಂತರ ನಿನ್ನೆ ರಾತ್ರಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಇಬ್ಬರು ಅಧಿಕಾರಿಗಳನ್ನೂ ಎತ್ತಂಗಡಿ ಮಾಡಿ ಆದೇಶ ಮಾಡಿದ್ದಾರೆ.
Indian Administrative Service (IAS) officers Rohini Sindhuri and Shilpa Nag have been transferred by the Karnataka government days after a they were involved in a power tussle. "Rohini Sindhuri Dasari, the Deputy Commissioner of the Mysuru District, Mysuru is transferred with immediate effect and posted until further orders as Commissioner for Hindu Religious and Charitable Endowments," the notification issued by the Karnataka government on Saturday said, news agency ANI reported.
30-10-24 07:54 pm
Bangalore Correspondent
ರಾಕಿ ಭಾಯ್ ಸಿನಿಮಾ 'ಟಾಕ್ಸಿಕ್'ಗಾಗಿ ನೂರಾರು ಮರಗಳ ಮ...
30-10-24 02:02 pm
Chikkamagaluru accident, Hassan: ಚಿಕ್ಕಮಗಳೂರು...
30-10-24 12:18 pm
Actor Darshan Bail, Released, Murder: ಕೊನೆಗೂ...
30-10-24 11:55 am
ರೈತರ ಜಮೀನಿಗೆ ವಕ್ಫ್ ನೋಟಿಸ್ ; ವಿಜಯಪುರದಲ್ಲಿ ತೀವ್...
29-10-24 11:02 pm
29-10-24 08:23 pm
HK News Desk
ಕಾಞಂಗಾಡ್ ; ತೈಯ್ಯಂ ಉತ್ಸವಕ್ಕೂ ಮುನ್ನ ಪಟಾಕಿ ದುರಂತ...
29-10-24 12:01 pm
ಕೇರಳದ ಯೂಟ್ಯೂಬರ್ ದಂಪತಿ ಸಾವಿಗೆ ಶರಣು ; ಕೊನೆಯ ವಿ...
28-10-24 08:38 pm
ಇಸ್ರೇಲಿಗೆ ನಮ್ಮ ಸಾಮರ್ಥ್ಯ ತೋರಿಸುತ್ತೇವೆ ಎಂದು ಪೋಸ...
28-10-24 05:56 pm
Cyber fraud, Digital arrest, Modi: "ಡಿಜಿಟಲ್ ಅ...
28-10-24 11:47 am
30-10-24 06:32 pm
Mangalore Correspondent
Mangalore Fire, Pilikula: ಪಿಲಿಕುಳ ನಿಸರ್ಗಧಾಮದಲ...
30-10-24 04:28 pm
Mangalore Rajyotsava Award 2024: ಜಿಲ್ಲಾ ರಾಜ್ಯ...
28-10-24 10:51 pm
Leopard, pilar, Deralakatte; ದೇರಳಕಟ್ಟೆ ಪ್ರದೇಶ...
28-10-24 03:53 pm
MLA Harish Poonja, B K Harishprasad: ಪುಡಿ ರಾಜ...
28-10-24 01:00 pm
29-10-24 01:01 pm
Mangalore Correspondent
Mangalore Murder, Crime, Kateel: ಕಟೀಲು ಬಳಿ ಮನ...
29-10-24 12:38 pm
Mangalore Crime, Drugs: ಪಣಂಬೂರಿನಲ್ಲಿ ಡ್ರಗ್ಸ್...
28-10-24 11:12 pm
Bangalore Crime, Blackmail: ಪತ್ನಿ ಮತ್ತು ಆಕೆಯ...
28-10-24 02:47 pm
Mangalore News, Cyber Fraud: ಮಹಾರಾಷ್ಟ್ರದ ಎಸ್ಐ...
27-10-24 08:57 pm