ಬ್ರೇಕಿಂಗ್ ನ್ಯೂಸ್
06-06-21 05:06 pm Sandesh, Mysore ಕರ್ನಾಟಕ
ಮೈಸೂರು, ಜೂನ್ 5: ಹೈಕಮಾಂಡ್ ಸೂಚಿಸಿದ್ರೆ ರಾಜಿನಾಮೆ ನೀಡ್ತೀನಿ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆಯ ಬಗ್ಗೆ ಎಂಎಲ್ಸಿ ಎಚ್. ವಿಶ್ವನಾಥ್ ಗಂಭೀರವಾಗಿ ಪ್ರತಿಕ್ರಿಯಿಸಿದ್ದಾರೆ. ದೆಹಲಿ ನಾಯಕರು ಹೇಳಿದಂತೆ ಕೇಳೋದು ಬಿಜೆಪಿಯಲ್ಲಿ ಮೊದಲಿಂದಲೂ ಇರುವ ಪರಿಪಾಠ. ಪರ್ಯಾಯ ನಾಯಕರನ್ನು ಮಾಡ್ತಾರೆ ಎಂದು ಹೇಳಿಕೆ ನೀಡಿದ್ದೇ ಯಡಿಯೂರಪ್ಪ ಅವರ ದೊಡ್ಡತನ. ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಎಂದು ವಿಶ್ವನಾಥ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್, ನನಗೆ ಪರ್ಯಾಯ ನಾಯಕ ಇದ್ದಾರೆ ಎಂದು ಹೇಳಿರುವುದೇ ದೊಡ್ಡ ಮಾತು. ರಾಜ್ಯದಲ್ಲಿ ಜನ, ರಾಜಕೀಯ ನಾಯಕರು ಯಡಿಯೂರಪ್ಪ ಅವರ ಬಗ್ಗೆ ಬಹಳ ವಿಶ್ವಾಸ ಇಟ್ಟುಕೊಂಡು ಬಂದಿದ್ದಾರೆ. ಯಡಿಯೂರಪ್ಪ ಈಗಿನ ಪರಿಸ್ಥಿತಿಯಲ್ಲಿ ರಾಜ್ಯದ ಹಿತಕ್ಕಾಗಿ ದೆಹಲಿ ನಾಯಕರ ಮಾತು ಕೇಳಿ ಕೆಳಗಿಳಿಯುತ್ತೇನೆ ಎನ್ನುವುದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.
ಈ ರೀತಿಯ ಬೆಳವಣಿಗೆ ಬಹಳ ದಿನದಿಂದ ನಡೆಯುತ್ತಿತ್ತು. ಆರ್ ಎಸ್ ಎಸ್ ಕೂಡ ಯಡಿಯೂರಪ್ಪ ಅವರ ಮನವೊಲಿಸಿದೆ ಅಂತ ಕಾಣುತ್ತೆ. ನಾಡಿನ ಹಿತದಿಂದ ಯಡಿಯೂರಪ್ಪ ರಾಜೀನಾಮೆ ಕೊಡುತ್ತೇನೆ ಎಂದಿರುವುದನ್ನು ನಾಡಿನ ಜನಾನೂ ಸ್ವಾಗತ ಮಾಡ್ತಾರೆ. ಯಾರೋ ಮಾತನಾಡಿದ್ರು ಅಂತ ಅವರೇನು ರಾಜೀನಾಮೆ ಕೊಡುತ್ತಿಲ್ಲ. ಅವರಿಗೆ ವಯಸ್ಸಿನ ಕಾರಣ, ಆರೋಗ್ಯದ ಸಮಸ್ಯೆ ಇದೆ. ಬಿಜೆಪಿಯಲ್ಲಿ ವಯಸ್ಸಿನ ಲಕ್ಷ್ಮಣ ರೇಖೆ ಇದೆ. ಹಿರಿಯ ನಾಯಕರಾದ ಯಡಿಯೂರಪ್ಪ ಅವರಿಗೆ ಮಾತ್ರ ಒಂದು ವಿನಾಯ್ತಿ ಕೊಟ್ಟಿದ್ರು. ಬಿಎಸ್ವೈ ಬಹಳ ಕಷ್ಟಪಟ್ಟು ರಾಜ್ಯದಲ್ಲಿ ಪಕ್ಷ ಕಟ್ಟಿದ್ದರು. ಹಾಗಾಗಿ ಅವರನ್ನು ವಿಶೇಷ ರೀತಿಯಲ್ಲಿ ಪರಿಗಣಿಸಲಾಗಿದೆ.
ಸೈನಿಕ ದೆಹಲಿಗೆ ಹೋಗಿ ಬಂದ್ರು ಅಂತ ಅವರು ರಾಜೀನಾಮೆ ಕೊಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ರಾಜ್ಯದ ಆಡಳಿತ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಹೈಕಮಾಂಡ್ ಮಾತು ಮೀರಲ್ಲ ಎಂದು ಹೇಳಿದ್ದೇ ಯಡಿಯೂರಪ್ಪ ಅವರ ದೊಡ್ಡತನ. ಸಿಎಂ ಹೇಳಿಕೆ ನಿರೀಕ್ಷಿತ ಮತ್ತು ಬಹಳಷ್ಟು ದಿನದಿಂದ ನಡೆಯುತ್ತಿತ್ತು. ಅದಕ್ಕಾಗಿಯೇ ಸಚಿವ ಬೊಮ್ಮಾಯಿ ಮತ್ತು ವಿಜಯೇಂದ್ರ ದೆಹಲಿಗೆ ಹೋಗಿದ್ರು. ಮುಖ್ಯಮಂತ್ರಿಯವರು ಪಕ್ಷವನ್ನು ಬಲಪಡಿಸಲು ಈ ನಿರ್ಧಾರಕ್ಕೆ ಬಂದಿದ್ದಾರೆ. ಬಿಎಸ್ವೈ ಮೇಲಿನ ವಿಶ್ವಾಸದಿಂದ ನಾವೆಲ್ಲ ಬಿಜೆಪಿಗೆ ಹೋಗಿದ್ದೆವು. ಯಡಿಯೂರಪ್ಪ ಅವರ ವಯಸ್ಸಿನ ಕಾರಣದಿಂದ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ. ರಾಜಿನಾಮೆ ಕೊಟ್ರು, ತಗೊಂಡ್ರು ಎನ್ನುವುದಕ್ಕಿಂತ ಹೈಕಮಾಂಡ್ ತೀರ್ಮಾನ ಮುಖ್ಯ ಎಂದು ಸೂಚ್ಯವಾಗಿ ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಬೆಂಗಳೂರಿನಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದ್ದಾಗ, ಹೈಕಮಾಂಡ್ ಹೇಳಿದರೆ ರಾಜಿನಾಮೆ ನೀಡಲು ಸಿದ್ಧ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಬಿಜೆಪಿ ನಾಯಕರು ಒಂದೊಂದು ವ್ಯಾಖ್ಯಾನ ಮಾಡುತ್ತಿದ್ದಾರೆ. ಎಚ್. ವಿಶ್ವನಾಥ್ ಒಂದು ಹೆಜ್ಜೆ ಮುಂದಿಟ್ಟು ಯಡಿಯೂರಪ್ಪ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಸಿಎಂ ಬದಲಾವಣೆಯ ಸನ್ನಿಹಿತ ಅನ್ನುವ ಸುಳಿವನ್ನು ನೀಡಿದ್ದಾರೆ. ಆದರೆ, ಬಿಜೆಪಿಯ ಬಹಳಷ್ಟು ನಾಯಕರು ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದೇ ಹೇಳಿಕೆ ನೀಡಿದ್ದಾರೆ.
Breaking his silence on the speculations over a leadership change in Karnataka, Chief Minister BS Yediyurappa on Sunday said he will continue to hold the top post as long as the BJP high command has "confidence in him" and will resign only when they ask him. Mysore H Vishwanath talks about resignation of Karnataka CM BS Yediyurappa
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
12-02-25 12:27 pm
HK News Desk
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm