ಬ್ರೇಕಿಂಗ್ ನ್ಯೂಸ್
07-06-21 11:51 am Bangalore Correspondent ಕರ್ನಾಟಕ
Photo credits : DH Photo
ಬೆಂಗಳೂರು, ಜೂನ್ 7 : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿದ್ದು, ಆರು ಮಂದಿ ಕೆಲಸಗಾರರು ಗಾಯಗೊಂಡಿದ್ದಾರೆ.
ಅವಿನಾಶ್, ಸಿರಾಜ್, ಪ್ರಶಾಂತ್, ಗೌತಮ್, ಅಜಯ್ ಕುಮಾರ್ ಹಾಗೂ ನಾಗೇಶ್ ರಾವ್ ಗಾಯಗೊಂಡವರಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಮಾನ ನಿಲ್ದಾಣದಲ್ಲಿ ವಿಸ್ತರಣೆ ಹಾಗೂ ಎರಡನೇ ಟರ್ಮಿನಲ್ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ನಿಲ್ದಾಣ ವ್ಯಾಪ್ತಿಯ ಜಾಗದಲ್ಲಿ ಹೊಸ ರಸ್ತೆಯನ್ನೂ ನಿರ್ಮಿಸಲಾಗುತ್ತಿದೆ. ಟರ್ಮಿನಲ್ ಹಾಗೂ ರಸ್ತೆಗೆ ಸಂಚಾರ ಸಂಕೇತಗಳ ಬಿಳಿ ಬಣ್ಣದ ಪಟ್ಟಿಗಳನ್ನು ಹಾಕುವ ಕೆಲಸ ಕೆಲ ದಿನಗಳಿಂದ ನಡೆಯುತ್ತಿತ್ತು.
ಕೆಲಸಕ್ಕೆ ಹಾಜರಾಗಿದ್ದ ಕಾರ್ಮಿಕರು, ಕೆಳ ಸೇತುವೆಯಲ್ಲಿ ಸೇರಿದ್ದರು. ರಸ್ತೆಗೆ ಬಳಿಯಬೇಕಾದ ಬಣ್ಣವನ್ನು ರಾಸಾಯನಿಕದ ಜೊತೆ ಮಿಶ್ರಣ ಮಾಡಿ ಸಿಲಿಂಡರ್ ಬಳಸಿ ಕಾಯಿಸುತ್ತಿದ್ದರು. ಈ ಸಂದರ್ಭ ಏಕಾಏಕಿ ಸ್ಫೋಟ ಸಂಭವಿಸಿದ್ದು ಬೆಂಕಿ ಹೊತ್ತಿಕೊಂಡಿದೆ. ಕೆಲ ಕ್ಷಣಗಳಲ್ಲೇ ಬೆಂಕಿ ಕೆನ್ನಾಲಗೆ ಇಡೀ ಕೆಳ ಸೇತುವೆಯನ್ನು ಆವರಿಸಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ನಿಲ್ದಾಣದ ಅಗ್ನಿಶಾಮಕ ಸಿಬ್ಬಂದಿ, ಎರಡೂವರೆ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಗುತ್ತಿಗೆ ವಹಿಸಿದ್ದ ಕಂಪನಿಯ ವಿರುದ್ಧ ಪೊಲೀಸರು ಎಫ್ಐಆರ್ ಮಾಡಿದ್ದು ಕಾರ್ಮಿಕರ ಸುರಕ್ಷತೆ ಬಗ್ಗೆ ಗಮನಹರಿಸದೆ ನಿರ್ಲಕ್ಷ್ಯದ ಬಗ್ಗೆ ಕೇಸು ದಾಖಲಿಸಿದ್ದಾರೆ.
Six workers were wounded, two of them seriously, in a blast near the Kempegowda International Airport here on Sunday, police said.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
12-02-25 12:27 pm
HK News Desk
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm