ಬ್ರೇಕಿಂಗ್ ನ್ಯೂಸ್
07-06-21 05:07 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 07; ಕೊರೋನಾ ಎರಡನೇ ಅಲೆಯಿಂದ ಸಾರಿಗೆ ನಿಗಮಗಳು ಸಂಕಷ್ಟಕ್ಕೆ ಸಿಲುಕಿದ್ದು, ಲಾಕ್ ಡೌನ್ ನಿಂದ ಇಲ್ಲಿಯವರೆಗೂ ಸಾರಿಗೆ ನಿಗಮಗಳಿಗೆ ಒಟ್ಟು 560 ಕೋಟಿ ರೂ. ನಷ್ಟವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಾರಿಗೆ ಇಲಾಖೆಯಿಂದ ಈ ಬಗ್ಗೆ ಸೋಮವಾರ ಮಾಹಿತಿ ಲಭ್ಯವಾಗಿದ್ದು, ನೌಕರರಿಗೆ ಸಂಬಳ ಕೊಡಲು ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳು ಹೆಣಗಾಡುವಂತಾಗಿದೆ.
ಕೋರೋನಾ ಹಿನ್ನಲೆ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಬಸ್‌ಗಳು ರಸ್ತೆಗಿಳಿದಿಲ್ಲ. ಬಸ್‌ಗಳು ಕಾರ್ಯಚರಣೆ ಆಗದ ಹಿನ್ನಲೆ ನಾಲ್ಕು ನಿಗಮಗಳಿಗೆ 560 ಕೋಟಿ ರೂ. ನಷ್ಟವಾಗಿದೆ. ಅಲ್ಲದೇ ಈ ಹಿಂದೆ ನೌಕರರು ಮುಷ್ಕರ ನಡೆಸಿದ್ದರ ಪರಿಣಾಮ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಇದನ್ನು ಚೇತರಿಸಿಕೊಳ್ಳುವಷ್ಟರಲ್ಲಿ ಲಾಕ್ಡೌನ್ ಘೋಷಣೆಯಿಂದ ಈಗ ಮತ್ತಷ್ಟು ಸಾರಿಗೆ ಸಂಸ್ಥೆಗೆ ನಷ್ಟವಾಗಿದೆ.

ಕೊರೋನಾ ಎರಡನೇ ಅಲೆಯಿಂದ ಯಾವ ಯಾವ ನಿಗಮಗಳಿಗೆ ಎಷ್ಟು ನಷ್ಟ? ಸಾರಿಗೆ ನೌಕರರು ಮುಷ್ಕರದಿಂದ ದಿನದ ನಷ್ಟವೆಷ್ಟು? ಒಂದು ದಿನ ಬಸ್ ನಿಂತರೆ ನಾಲ್ಕು ನಿಗಮಗಳಿಗೆ ನಷ್ಟ ಎಷ್ಟು? ಎನ್ನುವುದನ್ನು ನೋಡುವುದಾದರೆ ಒಂದು ದಿನ ಬಸ್ ಕಾರ್ಯಾಚರಣೆ ಸ್ಥಗಿತವಾದರೆ ನಾಲ್ಕು ನಿಗಮಗಳಿಗೆ ಸುಮಾರು 14 ಕೋಟಿ ರೂ. ನಷ್ಟವಾಗುತ್ತದೆ.
ಪ್ರಸ್ತುತ ಬಿಎಂಟಿಸಿಯ ದಿನದ ಆದಾಯ ಸುಮಾರು 2.5 ರಿಂದ 3 ಕೋಟಿ ಇದೆ. ಲಾಕ್ಡೌನ್ ಘೋಷಣೆಯಾಗಿ 40 ದಿನ ಕಳೆದಿದೆ. ಇದರಿಂದ ಇಲ್ಲಿವರೆಗೆ ಬಿಎಂಟಿಸಿಗೆ 120 ಕೋಟಿ ರೂ. ನಷ್ಟವಾಗಿದೆ. ಕೆಎಸ್ಆರ್‌ಟಿಸಿ ನಿತ್ಯದ ಆದಾಯ 7 ಕೋಟಿ ರೂ. ಇದ್ದು, 40 ದಿನಕ್ಕೆ ಕೆಎಸ್ಆರ್‌ಟಿಸಿ ಗೆ ಒಟ್ಟು 280 ಕೋಟಿ ರೂ. ನಷ್ಟವಾಗಿದೆ.
ವಾಯುವ್ಯ ಸಾರಿಗೆ ನಿಮಗದ ಪ್ರಸ್ತುತ ಆದಾಯ 2 ಕೋಟಿ ರೂ. ಆಗಿದ್ದು, 40 ದಿನಕ್ಕೆ ವಾಯುವ್ಯ ಸಾರಿಗೆಗೆ ಒಟ್ಟು 80 ಕೋಟಿ ರೂ. ನಷ್ಟವಾಗಿದೆ. ಈಶಾನ್ಯ ಸಾರಿಗೆ ನಿಗಮದ ಪ್ರಸ್ತುತ ನಿತ್ಯ ಆದಾಯ 2 ಕೋಟಿ ರೂ. ಆಗಿದ್ದು, 40 ದಿನಕ್ಕೆ ಈಶಾನ್ಯ ಸಾರಿಗೆಗೆ ಒಟ್ಟು 80 ಕೋಟಿ ರೂ. ನಷ್ಟವಾಗಿದೆ.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
21-09-26 08:21 pm
HK News Staffer
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm