ರಾಜ್ಯದಲ್ಲಿ ಐದು ಹಂತದಲ್ಲಿ ಅನ್ ಲಾಕ್ ; ಸಚಿವ ಅಶೋಕ್ ಸುಳಿವು

09-06-21 05:48 pm       Headline Karnataka News Network   ಕರ್ನಾಟಕ

ಜೂನ್ 14ರ ನಂತರ ಎಲ್ಲದಕ್ಕೂ ರಾಜ್ಯ ಸರಕಾರ ಮುಕ್ತ ಮಾಡುವುದಿಲ್ಲ. ಹಂತ ಹಂತವಾಗಿ ಅನ್ ಲಾಕ್ ಪ್ರಕ್ರಿಯೆ ಜಾರಿಗೊಳಿಸುವ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಸುಳಿವು ನೀಡಿದ್ದಾರೆ.

ಬೆಂಗಳೂರು, ಜೂನ್ 9: ಜೂನ್ 14ಕ್ಕೆ ರಾಜ್ಯದಲ್ಲಿ ಬಹುತೇಕ ಎರಡನೇ ಕೋವಿಡ್ ಅಲೆಯ ಲಾಕ್ಡೌನ್ ಕೊನೆಯಾಗುವ ಸಾಧ್ಯತೆಯಿದೆ. ಆದರೆ, ಜೂನ್ 14ರ ನಂತರ ಎಲ್ಲದಕ್ಕೂ ರಾಜ್ಯ ಸರಕಾರ ಮುಕ್ತ ಮಾಡುವುದಿಲ್ಲ. ಹಂತ ಹಂತವಾಗಿ ಅನ್ ಲಾಕ್ ಪ್ರಕ್ರಿಯೆ ಜಾರಿಗೊಳಿಸುವ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಸುಳಿವು ನೀಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಐದು ಹಂತಗಳಲ್ಲಿ ಅನ್ ಲಾಕ್ ಪ್ರಕ್ರಿಯೆ ಜಾರಿಗೊಳಿಸಲಾಗುವುದು. ಆದರೆ, ಜಿಲ್ಲಾವಾರು ಇದರ ಅನುಷ್ಠಾನ ಪ್ರಕ್ರಿಯೆ ಬದಲಾವಣೆ ಇರಬಹುದು. ಆರಂಭದಲ್ಲಿ ನಿತ್ಯದ ಸಾಮಗ್ರಿ ಖರೀದಿಗೆ ಇರುವ ನಿರ್ಬಂಧವನ್ನು ಮಧ್ಯಾಹ್ನ 12ರ ವರೆಗೆ ಸಡಿಲಗೊಳಿಸುವ ಚಿಂತನೆ ಇದೆ ಎಂದಿದ್ದಾರೆ.

ಮೊದಲ ಹಂತದಲ್ಲಿ ಜನರಿಗೆ ಪಾರ್ಕ್ ನಲ್ಲಿ ನಡೆದಾಡುವುದಕ್ಕೆ ಅವಕಾಶ ಕೊಡಬೇಕೆಂಬ ಸಲಹೆಯನ್ನು ತಜ್ಞರು ಕೊಟ್ಟಿದ್ದಾರೆ. ಈ ರೀತಿಯ ಚಟುವಟಿಕೆಗಳಿಗೆ ಮೊದಲ ಹಂತದಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ. ಆದರೆ, ಈ ಬಗ್ಗೆ ಮುಖ್ಯಮಂತ್ರಿಗಳು ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತುಕತೆ ನಡೆಸಿ ನಿರ್ಧಾರಕ್ಕ ಬರಲಿದ್ದಾರೆ ಎಂದು ಅಶೋಕ್ ತಿಳಿಸಿದ್ದಾರೆ. 

Karnataka Revenue Minister R Ashoka on Wednesday indicated that the state may go for unlocking in four to five phases after June 14, as the COVID-19 induced lockdown comes to an end.