ಬ್ರೇಕಿಂಗ್ ನ್ಯೂಸ್
09-06-21 11:19 pm Nagesh, Mysore ಕರ್ನಾಟಕ
ಮೈಸೂರು, ಜೂನ್ 9: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾ.ರಾ.ಮಹೇಶ್ ನಡುವಿನ ಕಿತ್ತಾಟ ಮುಂದುವರಿದಿದೆ. ನನ್ನ ವಿರುದ್ಧ ಭೂ ದಾಖಲೆಗಳಿದ್ದರೆ ತೋರಿಸಲಿ ಎನ್ನುವ ಸವಾಲಿಗೆ ರೋಹಿಣಿ ಸಿಂಧೂರಿ ಉತ್ತರ ಕೊಟ್ಟಿದ್ದಾರೆ. ವರ್ಗಾವಣೆಗೂ ಮುನ್ನ ಹೊರಡಿಸಿದ ಆದೇಶದ ಪ್ರತಿಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಯ ಬಿಟ್ಟಿದ್ದು ರೋಹಿಣಿ ಸಿಂಧೂರಿ ಹೊಸ ದಾಳ ಉರುಳಿಸಿದ್ದಾರೆ.
ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ಸಾ.ರಾ.ಮಹೇಶ್, ರೋಹಿಣಿ ಸಿಂಧೂರಿ ಮೈಸೂರು ಜಿಲ್ಲೆಯ ಒಂದೇ ಒಂದು ಗುಂಟೆ ಸರ್ಕಾರಿ ಜಮೀನನ್ನೂ ರಕ್ಷಣೆ ಮಾಡಿಲ್ಲ. ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಅಂತ ಚಾಲೆಂಜ್ ಮಾಡಿದ್ದರು. ಸಂಜೆ ಹೊತ್ತಿಗೆ ರೋಹಿಣಿ ಸಿಂಧೂರಿ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ರೋಹಿಣಿ ಸಿಂಧೂರಿ ಮೈಸೂರಿನಿಂದ ನಿರ್ಗಮಿಸುವ ಮುನ್ನ ಮಾಡಿದ ಆದೇಶಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿವೆ. ರೋಹಿಣಿ ಸಿಂಧೂರಿ ಸಹಿಯುಳ್ಳ ನಾಲ್ಕು ಆದೇಶ ಪ್ರತಿಗಳು ಮಾಜಿ ಸಚಿವ ಸಾ.ರಾ. ಮಹೇಶ್ ನಿಜಬಣ್ಣವನ್ನು ಬಯಲು ಮಾಡಿದೆ.
ಮೈಸೂರು ತಾಲೂಕಿನ ಕೇರಗಳ್ಳಿ ಸರ್ವೇ ನಂ.115ರಲ್ಲಿ 129.2 ಎಕರೆ ಜಾಗವಿದೆ. ಆದರೆ 199 ಎಕರೆಗೆ ಆರ್ಟಿಸಿ ಮಾಡಿಕೊಡಲಾಗಿತ್ತು. ಹೆಚ್ಚುವರಿಯಾಗಿ ಜಾಗವೇ ಇಲ್ಲದೆ 61.18 ಎಕರೆಗೆ ಮಾಡಿಕೊಟ್ಟಿದ್ದ ಆರ್ಟಿಸಿಯನ್ನು ಜಿಲ್ಲಾಧಿಕಾರಿಯಾಗಿದ್ದ ಸಿಂಧೂರಿ ರದ್ದು ಮಾಡಿದ್ದಾರೆ. ಸಾರಾ ಮಹೇಶ್ ಆರೋಪಕ್ಕೆ ತಿರುಗೇಟು ನೀಡಿ ಮಂಗಳಾರತಿ ಮಾಡಿದ್ದಾರೆ.
ಇದಲ್ಲದೆ, ಲಿಂಗಾಂಬುದಿ ಪಾಳ್ಯದ ಸರ್ವೇ ನಂ. 124/2ರಲ್ಲಿರುವ 1.39 ಎಕರೆ ಜಾಗ ಕೃಷಿ ಉದ್ದೇಶಕ್ಕೆ ಮೀಸಲಾಗಿತ್ತು. ಆದ್ರೆ ಮುಡಾ ಅಧಿಕಾರಿಗಳು 2016ರ ಸಿಡಿಪಿ ಪ್ಲ್ಯಾನ್ನಲ್ಲಿ ಹಸಿರು ವಲಯವಾಗಿದ್ದ ಭೂಮಿಯನ್ನು ಹಳದಿ ವಲಯ ಅಂತ ಪರಿವರ್ತನೆ ಮಾಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ರೋಹಿಣಿ ಸಿಂಧೂರಿ ಭೂ ಪರಿವರ್ತನಾ ಆದೇಶ ರದ್ದುಪಡಿಸಿ ಭೂ ಮಾಫಿಯಾದವರಿಗೆ ಟಾಂಗ್ ಕೊಟ್ಟಿದ್ದರು.
ಮೈಸೂರಿನ ಸರ್ವೇ ನಂ.10/2ರಲ್ಲಿರುವ ಲಿಂಗಾಂಬುದಿ ಕೆರೆಯ ಬಳಿಯಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರು ರೆಸಾರ್ಟ್ ನಿರ್ಮಿಸಲು ಉದ್ದೇಶಿಸಿದ್ದರು. ರೆಸಾರ್ಟ್ ನಿರ್ಮಿಸುವ ಸಲುವಾಗಿಯೇ ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು. ಕೆರೆ ಸುತ್ತಲಿನ 75 ಮೀಟರ್ ಭೂಮಿ ಬಫರ್ ಝೋನ್ ಆಗಿರುವ ಹಿನ್ನೆಲೆಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸುವುದನ್ನು ರದ್ದುಗೊಳಿಸಿ ರೋಹಿಣಿ ಸಿಂಧೂರಿ ಗಮನ ಸೆಳೆದಿದ್ದಾರೆ.
ಇನ್ನು ದಟ್ಟಗಳ್ಳಿಯ ಸರ್ವೇ ನಂ.123ರಲ್ಲಿ ಗೋಮಾಳದ ಪೈಕಿ 5 ಎಕರೆ ಜಮೀನನ್ನು ವ್ಯಕ್ತಿಯೊಬ್ಬರು ನಕಲಿ ದಾಖಲೆ ಸೃಷ್ಟಿಸಿ ಪಡೆದುಕೊಂಡಿದ್ದರು. ಆ ಜಾಗದ ಹರಾಜು ಪ್ರಕ್ರಿಯೆ ಮತ್ತು ಮಂಜೂರಾತಿ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಒಟ್ಟಾರೆ ವರ್ಗಾವಣೆಯಾದ ದಿನವೇ ರೋಹಿಣಿ ಸಿಂಧೂರಿ ನಾಲ್ಕು ಆದೇಶಗಳನ್ನು ಹೊರಡಿಸುವ ಮೂಲಕ ತಾನು ಭೂ ಮಾಫಿಯಾಕ್ಕೆ ಕೈ ಹಾಕಿದ್ದೆ. ಅದಕ್ಕಾಗಿ ರಾಜಕಾರಣಿಗಳು ಕಿರುಕುಳ ಕೊಡಲಾರಂಭಿಸಿದ್ದರು ಅನ್ನುವುದನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.
ಒತ್ತುವರಿ ಸಾಬೀತಾದರೆ ರಾಜಕೀಯ ನಿವೃತ್ತಿ ಸವಾಲು:
ರೋಹಿಣಿ ಸಿಂಧೂರಿ ಕಡೆಯಿಂದ ದಾಖಲೆ ಬಿಡುಗಡೆಯಾಗುತ್ತಿದ್ದಂತೆ ಮುಖ ಉಳಿಸಿಕೊಳ್ಳಲು ಹೋರಾಟಕ್ಕಿಳಿದಿರುವ ಜೆಡಿಎಸ್ ಶಾಸಕ ಸಾರಾ ಮಹೇಶ್, ಸಾರಾ ಪೌಲ್ಟ್ರಿಯಲ್ಲಿ ಕೆರೆ ಒತ್ತುವರಿ ಮಾಡಿಕೊಂಡಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಒಂದ್ವೇಳೆ, ಸುಳ್ಳು ಎಂದು ಸಾಬೀತಾದರೆ ರೋಹಿಣಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದಲ್ಲದೆ, ಇದೇ ವಿಚಾರದಲ್ಲಿ ಪ್ರತಿಭಟಿಸಿ ನಾಳೆ ಬೆಳಗ್ಗೆ ಹತ್ತರಿಂದ ನನ್ನ ಕಚೇರಿ ಮುಂದೆ ಒಂಟಿಯಾಗಿ ಪ್ರತಿಭಟನೆ ಕೂರುವುದಾಗಿ ಹೇಳಿದ್ದಾರೆ.
The former Deputy Commissioner. Rohini Sindhuri, whose recent transfer out of Mysuru is perceived to be the handiwork of the land mafia, on Wednesday released circulars of the action initiated by her to revoke certain land transactions that were prima facie in violation of the law.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm