ಭಟ್ಕಳದಲ್ಲಿ ಅಕ್ರಮ ನೆಲೆಸಿದ್ದ ಪಾಕಿಸ್ತಾನಿ ಮಹಿಳೆಯ ಬಂಧನ

10-06-21 03:48 pm       Headline Karnataka News Network   ಕರ್ನಾಟಕ

ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಖತೀಜಾ ಮೆಹರಿನ್ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. 

ಭಟ್ಕಳ, ಜೂನ್ 10: ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. 

ಖಚಿತ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದ ಭಟ್ಕಳ ಪೊಲೀಸರಿಂದ ಮಹಿಳೆಯನ್ನು ಬಂಧಿಸಿದ್ದಾರೆ.‌ ಖತೀಜಾ ಮೆಹರಿನ್ ಬಂಧಿತ ಪಾಕಿಸ್ತಾನಿ ಮಹಿಳೆ. ಎಂಟು ವರ್ಷಗಳ ಹಿಂದೆ ಈ ಮಹಿಳೆಯನ್ನು ಭಟ್ಕಳ ಮೂಲದ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್‌ ಎಂಬಾತ ವಿವಾಹವಾಗಿದ್ದ. ದುಬೈನಲ್ಲಿ ಮದುವೆ ನಡೆದಿತ್ತು 2014ರಲ್ಲಿ ಪ್ರವಾಸಿ ವೀಸಾ ಪಡೆದು 3 ತಿಂಗಳು ಭಾರತಕ್ಕೆ ಬಂದು ವಾಪಸ್ಸಾಗಿದ್ದಳು. ಅದರ ಬಳಿಕ 2015ರಲ್ಲಿ ಕಳ್ಳಮಾರ್ಗದ ಮೂಲಕ ಭಾರತ ಪ್ರವೇಶ ಮಾಡಿದ್ದ ಮಹಿಳೆ ಭಟ್ಕಳದಲ್ಲೇ ಉಳಿದುಕೊಂಡಿದ್ದಳು. 

2014 ರಿಂದ ಭಟ್ಕಳದ ನವಾಯತ ಕಾಲೋನಿಯಲ್ಲಿ ಮಹಿಳೆ ವಾಸವಿದ್ದಳು.‌ ಕಳೆದ 8 ವರ್ಷಗಳಿಂದ ಮೂರು ಮಕ್ಕಳೊಂದಿಗೆ ಭಟ್ಕಳದಲ್ಲೇ ವಾಸ್ತವ್ಯ ಹೂಡಿದ್ದಳು. ಈ ನಡುವೆ, ಸುಳ್ಳು ದಾಖಲೆ ನೀಡಿ ಭಟ್ಕಳದಲ್ಲಿ ಓಟರ್ ಐಡಿ, ರೇಷನ್ ಕಾರ್ಡ್, ಜನ್ಮದಾಖಲೆ ಪಡೆದಿದ್ದಳು. 

ಅಕ್ರಮವಾಗಿ ವಾಸ ಮಾಡಿರುವ ವಿಚಾರದಲ್ಲಿ ಮಹಿಳೆ ವಿರುದ್ಧ ಐಪಿಸಿ ಸೆಕ್ಷನ್ 468, 471 ಅಡಿ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A Pakistani woman has been arrested for an illegal stay in Bhatkal, Uttar Karnataka. It is said she has married a Man from Bhatkal and has been residing for 8 years by illegal means.