ಬ್ರೇಕಿಂಗ್ ನ್ಯೂಸ್
10-06-21 05:01 pm Headline Karnataka News Network ಕರ್ನಾಟಕ
ಮೈಸೂರು, ಜೂನ್ 10 : ಜೆಡಿಎಸ್ ಮುಖಂಡ, ಮಾಜಿ ಸಚಿವ ಸಾರಾ ಮಹೇಶ್ ಭೂ ಹಗರಣ ಹೊರಬೀಳುತ್ತಿದ್ದಂತೆ ಮೈಸೂರಿನ ಮತ್ತೊಬ್ಬ ಹಿರಿಯ ರಾಜಕಾರಣಿ ಎಚ್.ವಿಶ್ವನಾಥ್ ತೊಡೆ ತಟ್ಟಿದ್ದಾರೆ. ಅಲ್ಲದೆ, ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ಎಚ್.ವಿಶ್ವನಾಥ್, ಡಿಸಿ ಯಾವುದೇ ಚಪರಾಸಿ ವ್ಯಕ್ತಿ ಅಲ್ಲ. ಒಬ್ಬ ಡಿಸಿಯ ಬಗ್ಗೆ ನಾವು ಯಾವ ರೀತಿ ಮಾತನಾಡುತ್ತಿದ್ದೇವೆ. ಕೊರೊನಾ ಓಡಿಸಿ ಅಂತ ಸಿಎಂ, ಪಿಎಂ ಕರೆ ನೀಡಿದ್ದರೆ, ಇವರೆಲ್ಲಾ ಸೇರಿಕೊಂಡು ಇಲ್ಲಿನ ಐಎಎಸ್ ಅಧಿಕಾರಿಗಳನ್ನೇ ಓಡಿಸುತ್ತಿದ್ದಾರೆ. ಎಲ್ರೂ ಸೇರಿ ಶಿಲ್ಪಾನಾಗ್ ಹೆಗಲ ಮೇಲೆ ಬಂದೂಕು ಇಟ್ಟು ರೋಹಿಣಿ ಸಿಂಧೂರಿಗೆ ಶೂಟ್ ಮಾಡಿದ್ದಾರೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇವರು ಹಾಸನದಿಂದ ಇಲ್ಲಿ ಬಂದು ಪ್ರೆಸ್‌ಮೀಟ್ ಮಾಡುತ್ತಾರಲ್ಲಾ.. ಎಂದು ಪರೋಕ್ಷವಾಗಿ ಸಾರಾ ಮಹೇಶ್ ಬಗ್ಗೆ ತಿವಿದ ಹಳ್ಳಿಹಕ್ಕಿ , ಏನಾಗಿದೆ ಮೈಸೂರಿಗೆ ? ರಾಜಕಾಲುವೆ ಮೇಲೆ ಕಲ್ಯಾಣ ಮಂಟಪ ನಿರ್ಮಾಣ ಆಗಿದೆ ಅಂತೀರಲ್ರೀ.. ಇದಕ್ಕಾಗಿ ಒಂದು ಗುಂಟೆ ಅಲ್ಲ, ಸಾವಿರಾರು ಎಕರೆ ಹೋಗಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದಾರೆ. ಇದರ ಬಗ್ಗೆ ತನಿಖೆಯಾಗಲಿ, ಮೈಸೂರು ಸುತ್ತಮುತ್ತ ಏನೇನು ಒತ್ತುವರಿ ಆಗಿದೆ. ಎಲ್ಲದರ ಬಗ್ಗೆನೂ ತನಿಖೆಯಾಗಲಿ. ಚಾಮುಂಡಿಬೆಟ್ಟದ ಸುತ್ತಲೂ ಸಾಕಷ್ಟು ಭೂ ಒತ್ತುವರಿ ಆಗಿದೆ. ಇದೆಲ್ಲದರ ತನಿಖೆಗೆ ರೋಹಿಣಿ ಸಿಂಧೂರಿಯನ್ನೇ ಆರು ತಿಂಗಳಿಗೆ ವಿಶೇಷಾಧಿಕಾರಿಯಾಗಿ ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಎಲ್ಲಾ ಜನಪ್ರತಿನಿಧಿಗಳು ಒಟ್ಟಾಗಿ ಸೇರಿ ಕರೊನಾ ಓಡಿಸುವ ಬದಲು ಅಧಿಕಾರಿಯನ್ನೇ ಓಡಿಸಿದರು.ರೋಹಿಣಿ ಸಿಂಧೂರಿ ಮತ್ತು ಶಿಲ್ಪಾನಾಗ್ ಇಬ್ಬರೂ ಒಳ್ಳೆಯ ಅಧಿಕಾರಿಗಳು. ಇಬ್ಬರು ಐಎಎಸ್ ಅಧಿಕಾರಿಗಳನ್ನು ಹೊರ ಹಾಕಿದ್ದು ರಾಜಕಾರಣಿಗಳ ಸ್ವಾರ್ಥ ಎಂದು ಕಿಡಿಕಾರಿದ ಎಚ್ ವಿಶ್ವನಾಥ್, ಈಗ ರಿಯಲ್ ಎಸ್ಟೇಟ್ ಅನ್ನೋದು ದೊಡ್ಡ ಇಂಡಸ್ಟ್ರಿಯಾಗಿ ಬದಲಾಗಿದೆ. ಈ ಪೈಕಿ ಸಾರಾ ಮಹೇಶ್ ಯಾವ ಇಂಡಸ್ಟ್ರಿಲಿಯಸ್ಟ್ ? ಇಲ್ಲಿನ ಮುಡಾ ಅಧ್ಯಕ್ಷ ಯಾವ ಇಂಡಸ್ಟ್ರಿ ಮಾಡಿದ್ದಾರೆ ? ಎಷ್ಟು ಜನಕ್ಕೆ ಉದ್ಯೋಗ ನೀಡಿದ್ದಾರೆ ?
ನನ್ನ ಅನಿಸಿಕೆ ಪ್ರಕಾರ, ಶಿಲ್ಪಾನಾಗ್ ಇಲ್ಲಿ ಬಲಿಪಶು ಆಗಿದ್ದಾರೆ. ಆದರೆ, ಇವರ ಕಮಿಷನ್ ಎಷ್ಟು ಅನ್ನೋದನ್ನು ಕೇಳಬಯಸುತ್ತೇನೆ. ರೋಹಿಣಿ ಸಿಂಧೂರಿ ಅವರ ವರ್ಗಾವಣೆಯೇ ನಿಮ್ಮ ಕಮಿಷನ್ನಾ ಎಂದು ಪ್ರಶ್ನೆ ಮಾಡಿದ್ದಾರೆ.
ಸಾ.ರಾ.ಮಹೇಶ್ ಮತ್ತು ರಾಜೀವ್ ಇಬ್ಬರೂ ಬ್ಯುಸಿನೆಸ್ ಪಾಲುದಾರರು ಎಂಬುದು ನಿಜ. ಆದರೆ, ಇವರಿಬ್ಬರು ಯಾವ ಇಂಡಸ್ಟ್ರೀ ಮಾಡಿಕೊಂಡಿದ್ದೀರಾ.. ಎಷ್ಟು ಜನರಿಗೆ ಕೆಲಸ ಕೊಟ್ಟಿದ್ದೀರಾ.. ರಿಯಲ್ ಎಸ್ಟೇಟೇ ನಿಮಗೆ ಒಂದು ಇಂಡಸ್ಟ್ರಿಯೇ ? ಇವರಿಬ್ಬರು ಹಿಂದೆ ಹೇಗಿದ್ರು ಈಗ ಹೇಗಿದ್ದಾರೆ ಎಂದು ನೋಡಿಕೊಳ್ಳಿ ಎಂದು ಹಳೆಯದನ್ನು ಕೆದಕಿ ಟಾಂಗ್ ಕೊಟ್ಟರು.
ಜಿಲ್ಲಾಧಿಕಾರಿಯಾಗಿ ಭೂ ಒತ್ತುವರಿಯ ತನಿಖೆಗೆ ಮುಂದಾದರೆ, ನಿಮಗೆ ಯಾಕೆ ಹೆದರಿಕೆ ಆಗಬೇಕು. ಸಾರಾ ಮಹೇಶ್ ಪ್ರತಿಭಟನೆ ಮಾಡುವ ಬದಲು ತಮ್ಮ ಸಾರಾ ಕಲ್ಯಾಣ ಮಂಟಪದ ಬಗ್ಗೆ ದಾಖಲೆ ಕೊಡಲಿ ಎಂದು ಹೇಳಿದರು. ಸುದ್ದಿಗೋಷ್ಟಿಗೂ ಮುನ್ನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಭೇಟಿಯಾದ ವಿಶ್ವನಾಥ್, ಇಡೀ ಪ್ರಕರಣದ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಮಾಡುತ್ತೇನೆ ಎಂದು ವಿಶ್ವನಾಥ್ ಹೇಳಿದ್ದಾರೆ.
BJP Senior Leader H Vishwanath appeals government to appoint Rohini Sindhi as special officer to investigate land encroachment in mysuru
25-11-24 05:51 pm
Bangalore Correspondent
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm