"ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ" ; ಭೂಮಾಫಿಯಾ ವಿರುದ್ಧ ಜಾಲತಾಣದಲ್ಲಿ ಅಭಿಯಾನ

12-06-21 12:34 pm       Headline Karnataka News Network   ಕರ್ನಾಟಕ

ಸಾಮಾಜಿಕ ಜಾಲತಾಣದಲ್ಲಿ ಜನರು ರೋಹಿಣಿ ಪರವಾಗಿ ಭಾರೀ ಬ್ಯಾಟಿಂಗ್ ನಡೆಸಿದ್ದಾರೆ. ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ ಹೆಸರಲ್ಲಿ ಜಾಲತಾಣದಲ್ಲಿ ಸಹಿ ಸಂಗ್ರಹ ಅಭಿಯಾನ ಶುರುವಾಗಿದೆ. 

ಮೈಸೂರು, ಜೂನ್ 12: ಮೈಸೂರಿನಲ್ಲಿ ಭೂಮಾಫಿಯಾಕ್ಕೆ ಬಲಿಬಿದ್ದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯಾಗಿದ್ದಾರೆ ಎಂಬ ವಿಚಾರ ಹೊರಬರುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಎದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಜನರು ರೋಹಿಣಿ ಪರವಾಗಿ ಭಾರೀ ಬ್ಯಾಟಿಂಗ್ ನಡೆಸಿದ್ದಾರೆ. ರಾಜಕಾರಣಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಇದೇ ಹೊತ್ತಲ್ಲಿ ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ ಹೆಸರಲ್ಲಿ ಜಾಲತಾಣದಲ್ಲಿ ಸಹಿ ಸಂಗ್ರಹ ಅಭಿಯಾನ ಶುರುವಾಗಿದೆ. 

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪರ ಆನ್ ಲೈನ್ ಕ್ಯಾಂಪೇನ್ ಆರಂಭಗೊಂಡಿದ್ದು ರೋಹಿಣಿ ಸಿಂಧೂರಿ ಅವರನ್ನು ಮತ್ತೆ ಮೈಸೂರಿಗೆ ಡಿಸಿಯಾಗಿ ನೇಮಿಸುವಂತೆ ಒತ್ತಾಯಿಸಲಾಗಿದೆ. "ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ" ಹೆಸರಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ. 

'ಚೇಂಜ್ ಆರ್ಗ್' ಎಂಬ ಹೆಸರಿನ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ಆರಂಭಿಸಿದ್ದು ಈಗಾಗಲೇ ಸುಮಾರು 26 ಸಾವಿರ ಜನರಿಂದ ಸಹಿ ಸಂಗ್ರಹ ನಡೆದಿದೆ. ರೋಹಿಣಿ ಸಿಂಧೂರಿಯನ್ನು ಮರಳಿ ಮೈಸೂರಿಗೆ ನೇಮಿಸುವಂತೆ ಒತ್ತಾಯಿಸಿ ಸಹಿ ಸಂಗ್ರಹ ಮಾಡಲಾಗುತ್ತಿದ್ದು ಇದನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗೆ ಸಲ್ಲಿಕೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ‌

ರೋಹಿಣಿಯವರು ತಾನು ಭೂ ಮಾಫಿಯಾದ ಬಲಿಪಶು ಎಂದು ಹೇಳಿಕೊಂಡ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. 35 ಸಾವಿರ ಸಹಿ ಸಂಗ್ರಹಿಸುವ ಗುರಿ ಹೊಂದಿದ್ದು ಈಗಾಗ್ಲೇ 26 ಸಾವಿರ ಸಹಿ ಹಾಕಿದ್ದಾರೆ. ‌

An online campaign has been launched to bring back Rohini Sindhuri as Deputy Commissioner of Mysuru.