ಬ್ರೇಕಿಂಗ್ ನ್ಯೂಸ್
15-06-21 10:06 pm Satish, Bengaluru Correspondent ಕರ್ನಾಟಕ
ಬೆಂಗಳೂರು, ಜೂನ್ 15: ಅಯೋಧ್ಯೆಯ ರಾಮ ಮಂದಿರದ ಕಾರ್ಯದಲ್ಲಿ ಭ್ರಷ್ಟಾಚಾರ ಆಗಿದ್ದರೆ, ಅವರನ್ನು ಯಾವುದೇ ಮುಲಾಜಿಲ್ಲದೆ ಶಿಕ್ಷಿಸಬೇಕು. ಅದರ ಬಗ್ಗೆ ಸುಪ್ರೀಂ ಕೋರ್ಟ್ ನಿಗಾದಡಿ ತನಿಖೆ ನಡೆಯಬೇಕು. ಯಾಕಂದ್ರೆ, ರಾಮ ಮಂದಿರ ದೇಶದ ಜನರ ನಂಬಿಕೆಯ ವಿಚಾರ. ದೇಶಾದ್ಯಂತ ಗ್ರಾಮ ಗ್ರಾಮಗಳಲ್ಲಿ ಜನರಿಂದ ಸಂಗ್ರಹಿಸಿರುವ ಹಣವನ್ನು ದುರುಪಯೋಗ ಮಾಡಿರುವುದು ರಾಮನ ಮೇಲಿನ ನಂಬಿಕೆಯನ್ನೇ ಘಾಸಿಗೊಳಿಸಿದಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ನಡೆದ ಪೆಟ್ರೋಲ್ ಬೆಲೆಯೇರಿಕೆ ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಡಿಕೆಶಿ, ಹಳ್ಳಿ ಹಳ್ಳಿಗಳ ಜನರು ನೀಡಿರುವ ದೇಣಿಗೆಯ ಹಣದಲ್ಲಿ ಕೋಟ್ಯಂತರ ರೂಪಾಯಿ ಭೂ ಅಕ್ರಮ ನಡೆಸಿರುವ ಆರೋಪ ಕೇಳಿಬಂದಿದೆ. ಇದು ದೇಶದ ಜನರ ಭಾವನೆಯ ಮೇಲೆ ಮಾಡಿರುವ ಅನ್ಯಾಯ. ಯಾಕಂದ್ರೆ, ಜನರು ತಮ್ಮ ದುಡಿದ ಹಣವನ್ನು ರಾಮನ ಮೇಲಿನ ಭಕ್ತಿಯಿಂದ ಕೊಟ್ಟಿದ್ದಾರೆ. ರಾಮಮಂದಿರದ ವಿಚಾರದಲ್ಲಿ ಭ್ರಷ್ಟಾಚಾರದ ಆರೋಪ ಬಂದಿರುವುದು ಇಡೀ ದೇಶಕ್ಕೆ ಅವಮಾನ. ದೇಶದ ಜನತೆಗೆ ಮಾಡಿದ ಅವಮಾನ. ನಂಬಿಕೆಯ ಮೇಲೆ ಎಸಗಿದ ಘೋರ ಪ್ರಮಾದ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕಾಗಿದೆ ಎಂದು ಒತ್ತಾಯಿಸಿದರು.
ದೇಶಾದ್ಯಂತ ಜನರು ರಾಮನಿಗಾಗಿ ತಮ್ಮಿಂದಾದ ಹಣ ಮತ್ತು ಮಂದಿರ ಕಟ್ಟಲು ಕಲ್ಲನ್ನು ದಾನ ನೀಡಿದ್ದಾರೆ. ಈಗ ಈ ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು. ಅದರಲ್ಲಿ ಮೋದಿಯೇ ಇರಲಿ, ಯೋಗಿಯೇ ಇರಲಿ. ತಪ್ಪಿತಸ್ಥರಾದರೆ ಶಿಕ್ಷೆ ಎದುರಿಸಬೇಕು. ಯಾಕಂದ್ರೆ, ರಾಮನ ಮೇಲಿನ ದೇಶದ ಜನರ ನಂಬಿಕೆ ಮತ್ತು ಭಾವನೆಯನ್ನು ಇವರು ಘಾಸಿಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಪೆಟ್ರೋಲ್ ದರ ನೂರು ರೂ. ಗಡಿ ದಾಟಿದೆ. ಇದರಲ್ಲಿ 65 ರೂ. ತೆರಿಗೆಯಾದರೆ, ಪೆಟ್ರೋಲಿನ ಮೂಲ ಬೆಲೆ ಕೇವಲ 35 ರೂಪಾಯಿ. ಕೊರೊನಾ ಸಂಕಷ್ಟ ಕಾಲದಲ್ಲಿ ಜನರ ಮೇಲೆ ಹೊರೆ ಹೊರಿಸಿ, ಇವರು ದುಡ್ಡು ಮಾಡುತ್ತಿದ್ದಾರೆ. ದೇಶಾದ್ಯಂತ 100 ನಾಟೌಟ್ ಪ್ರತಿಭಟನೆಯನ್ನು ಕಾಂಗ್ರೆಸ್ ಮಾಡುತ್ತಿದ್ದು ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಡಿಕೆಶಿ ಹೇಳಿದರು.
Karnataka Pradesh Congress Committee president, D K Shivakumar has demanded that the guilty in the alleged Ram Mandir land scam in Ayodhya must be punished.
11-02-25 11:12 pm
Bangalore Correspondent
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
11-02-25 06:41 pm
HK News Desk
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm