ಉಸ್ತುವಾರಿಗೆ ಕಪ್ಪ ಕಾಣಿಕೆ ಕೊಡಲೇಬೇಕು, ಇವರು ಬಂದಿರೋದೇ ಬೊಕ್ಕಸ ಲೂಟಿ ಮಾಡೋಕೆ ; ಎಚ್ಡಿಕೆ ಕಿಡಿ 

18-06-21 06:28 pm       Headline Karnataka News Network   ಕರ್ನಾಟಕ

ಅರುಣ್ ಸಿಂಗ್ ರಾಜ್ಯಕ್ಕೆ ಬಂದಿರೋದು ಕರ್ನಾಟಕದ ಸಂಪತ್ತನ್ನ ಲೂಟಿ ಮಾಡೋಕೆ.. ಸರಕಾರ ಉಳಿಸಿಕೊಳ್ಳಲು ಇವರಿಗೆ ದೇಣಿಗೆ ನೀಡಲೇಬೇಕು.

ಮಂಡ್ಯ, ಜೂನ್ 18: ರಾಜ್ಯ ಬಿಜೆಪಿ ಉಸ್ತುವಾರಿ ಹೊಂದಿರುವ ಅರುಣ್ ಸಿಂಗ್ ರಾಜ್ಯಕ್ಕೆ ಬಂದಿರೋದು ಕರ್ನಾಟಕದ ಸಂಪತ್ತನ್ನ ಲೂಟಿ ಮಾಡೋಕೆ.. ಸರಕಾರ ಉಳಿಸಿಕೊಳ್ಳಲು ಇವರಿಗೆ ದೇಣಿಗೆ ನೀಡಲೇಬೇಕು. ಇವರು ರಾಜ್ಯ ಲೂಟಿ ಮಾಡೋ ವೀಕ್ಷಕರು.. 

ಹೀಗೆಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಮದ್ದೂರಿನಲ್ಲಿ ಈ ಬಗ್ಗೆ ಮಾತನಾಡಿದ ಎಚ್ಡಿಕೆ, ರಾಷ್ಟ್ರೀಯ ಪಕ್ಷಗಳು ರಾಜ್ಯಗಳಿಗೆ ವೀಕ್ಷಕರನ್ನ ನೇಮಿಸೋದು ಹಿಂದೆ ದೇಶದಲ್ಲಿ ಪಾಳೆಗಾರರ ಬಳಿ ವಸೂಲಿ ಮಾಡಿಸಲು ನೇಮಿಸಿದ ರೀತಿ. ಅವರು ಆಯಾ ರಾಜ್ಯಗಳಿಗೆ ಹೋಗಿ ಕಪ್ಪ ಪಡೆದು ತರುತ್ತಾರೆ.‌

ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಅರುಣ್ ಸಿಂಗ್ ಬಂದಿಲ್ಲ. ಅವರು ಬಂದಿರೋದು ದೇಣಿಗೆ ತೆಗೆದುಕೊಂಡು ಹೋಗಲು.. ರಾಜ್ಯವನ್ನ ಲೂಟಿ ಮಾಡುವಂತ ವೀಕ್ಷಕರು ಇವರೆಲ್ಲಾ.. ಇದು ನಮ್ಮ ನಾಡಿನ ಅತ್ಯಂತ ದೌರ್ಭಾಗ್ಯ. ಈ ರೀತಿ ಬರುವಂತ ವೀಕ್ಷಕರಿಗೆ ಸರಕಾರ ನಡೆಸುವ ಮಂದಿ ದೇಣಿಗೆ ಕೊಟ್ಟು ಅಧಿಕಾರ ಉಳಿಸಿಕೊಳ್ತಿದ್ದಾರೆ. ಈ ಸಂಸ್ಕೃತಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷದಲ್ಲಿದೆ.‌ ನಮ್ಮ ಜನ ಬುದ್ಧಿವಂತರಾಗದೆ ಇದ್ದರೆ ನಿಮ್ಮ ಸಂಪತ್ತು ಲೂಟಿ ಆಗುತ್ತಲೇ ಇರುತ್ತೆ ಲೇವಡಿ ಮಾಡಿದ್ದಾರೆ.

Kumaraswamy hits out at BJP Arun Singh says he has come to loot Karnataka.