ಬ್ರೇಕಿಂಗ್ ನ್ಯೂಸ್
19-06-21 08:07 pm Satish, Bengaluru Correspondent ಕರ್ನಾಟಕ
ಬೆಂಗಳೂರು, ಜೂನ್ 19: ಕೊನೆಗೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೊರೊನಾ ಲಾಕ್ಡೌನ್ ಸಡಿಲಿಕೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ. ದಕ್ಷಿಣ ಕನ್ನಡ, ಉಡುಪಿ, ಹಾಸನ ಸೇರಿ 13 ಜಿಲ್ಲೆಗಳಲ್ಲಿ ಅನ್ ಲಾಕ್ 1.0 ಜಾರಿ ಮಾಡಿದರೆ, ಇನ್ನುಳಿದ 19 ಜಿಲ್ಲೆಗಳಲ್ಲಿ ಎರಡನೇ ಹಂತದ ಅನ್ ಲಾಕ್ ನೀಡಲಾಗಿದ್ದು, ಆ ಭಾಗದಲ್ಲಿ ಬಹುತೇಕ ಸಡಿಲಿಕೆ ಮಾಡಲಾಗಿದೆ. ಎರಡನೇ ಹಂತದ ಅನ್ ಲಾಕ್ ಆಗಿರುವ ಏರಿಯಾಗಳಲ್ಲಿ ಬಸ್ ಸಂಚಾರಕ್ಕೂ ಅವಕಾಶ ನೀಡಲಾಗಿದೆ.
ಕೊರೊನಾ ಪಾಸಿಟಿವಿಟಿ ರೇಟ್ ಶೇ.10ರ ಒಳಗಿದ್ದು, ಶೇ.5ಕ್ಕಿಂತ ಹೆಚ್ಚಿರುವ 13 ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಹಾಸನ, ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಧಾರವಾಡ, ಬಳ್ಳಾರಿ, ಹಾಸನ, ವಿಜಯಪುರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಮೊದಲ ಹಂತದ ಅನ್ ಲಾಕ್ ನೀಡಲಾಗಿದೆ. ಅಂದರೆ, ಮಧ್ಯಾಹ್ನ 2 ಗಂಟೆ ವರೆಗೆ ಈ ಜಿಲ್ಲೆಗಳಲ್ಲಿ ಅಗತ್ಯ ಸಾಮಗ್ರಿಗಳ ಅಂಗಡಿಗಳನ್ನು ತೆರೆದಿಡಲು ಅವಕಾಶ ಇರುತ್ತದೆ. ಉಳಿದಂತೆ, ಹೊಟೇಲ್ ಪಾರ್ಸೆಲ್ ಇನ್ನಿತರ ಅಗತ್ಯ ಕಾರ್ಯಗಳಿಗೆ ಎಂದಿನಂತೆ ಅವಕಾಶ ಇರಲಿದೆ. ಬಸ್, ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ.
ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟ, ಕಲಬುರ್ಗಿ, ಉತ್ತರ ಕನ್ನಡ, ಬೆಂಗಳೂರು ನಗರ, ಮಂಡ್ಯ, ತುಮಕೂರು, ರಾಯಚೂರು, ಗದಗ, ಕೊಪ್ಪಳ, ಹಾವೇರಿ, ಯಾದಗಿರಿ, ಚಿಕ್ಕೋಡಿ ಸೇರಿ 16 ಜಿಲ್ಲೆಗಳಲ್ಲಿ ಎರಡನೇ ಹಂತದ ಅನ್ ಲಾಕ್ ಘೋಷಣೆ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ ಪಾಸಿಟಿವ್ ರೇಟ್ ಶೇ.5ಕ್ಕಿಂತ ಕಡಿಮೆ ಇರುವುದರಿಂದ ಬಸ್ ಸಂಚಾರಕ್ಕೂ ಅವಕಾಶ ನೀಡಲಾಗಿದೆ. ಆದರೆ, ಬಸ್ಸಿನಲ್ಲಿ ಶೇ.50ಕ್ಕಿಂತ ಹೆಚ್ಚು ಜನರು ಸಂಚರಿಸುವಂತಿಲ್ಲ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಮಾಡಲಿದೆ.
16 ಜಿಲ್ಲೆಗಳಲ್ಲಿ ಖಾಸಗಿ, ಸರಕಾರಿ ಕಚೇರಿಗಳು ಬೆಳಗ್ಗಿನಿಂದ ಸಂಜೆ 5 ಗಂಟೆ ವರೆಗೆ ಶೇ.50 ಸಿಬಂದಿಯೊಂದಿಗೆ ತೆರೆದಿಡಬಹುದು. ಅಲ್ಲದೆ, ಹೊಟೇಲ್, ಬಾರ್ ಅಂಡ್ ರೆಸ್ಟೋರೆಂಟಿನಲ್ಲಿ ಕುಳಿತು ಊಟ, ತಿಂಡಿ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ, ಬಾರ್ ನಲ್ಲಿ ಕುಳಿತು ಕುಡಿಯೋದಕ್ಕೆ ಅವಕಾಶ ಇರಲ್ಲ. ಬೆಂಗಳೂರು ನಗರ ಸೇರಿದಂತೆ 16 ಜಿಲ್ಲೆಯ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿಗಳು ಸೇರಿ ಬಹುತೇಕ ರಿಲೀಫ್ ಸಿಕ್ಕಂತಾಗಿದೆ. ಸಿನಿಮಾ ಥಿಯೇಟರ್, ಈಜು ಕೊಳ, ಶಾಪಿಂಗ್ ಮಾಲ್, ಪಬ್ ಸೇರಿ ಒಂದಷ್ಟು ಭಾಗಕ್ಕೆ ಮಾತ್ರ ಅವಕಾಶ ನೀಡಲಾಗಿಲ್ಲ.
ಮೈಸೂರು ಜಿಲ್ಲೆಯಲ್ಲಿ ಮಾತ್ರ ಹತ್ತು ಶೇಕಡಕ್ಕಿಂತ ಹೆಚ್ಚು ಪಾಸಿಟಿವ್ ರೇಟ್ ಇರುವುದರಿಂದ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ. ರಾಜ್ಯದಲ್ಲಿ ಒಂದು ಜಿಲ್ಲೆಯಲ್ಲಿ ಮಾತ್ರ ಈ ಹಿಂದೆ ಇರುವಂತೇ ಲಾಕ್ಡೌನ್ ವಿಸ್ತರಣೆ ಮಾಡಿ, ರಾಜ್ಯ ಸರಕಾರ ಆದೇಶ ಮಾಡಿದೆ. ಇದಲ್ಲದೆ, ಅನ್ ಲಾಕ್ ಘೋಷಣೆ ಎಲ್ಲಿ ವರೆಗೆ ಅನ್ನುವ ದಿನಾಂಕವನ್ನು ಸರಕಾರ ಘೋಷಣೆ ಮಾಡಿಲ್ಲ. ಮುಂದಿನ ಆದೇಶದ ವರೆಗೆ ಈಗ ನೀಡಿರುವ ಆದೇಶ ಜಾರಿ ಆಗಲಿದೆ.
ಕಳೆದ ಜೂನ್ 11ರಂದು ನೀಡಿದ್ದ ಆದೇಶದಲ್ಲಿ 11 ಜಿಲ್ಲೆಗಳಲ್ಲಿ ಲಾಕ್ಡೌನ್ ವಿಸ್ತರಣೆ ಮಾಡಲಾಗಿತ್ತು. 19 ಜಿಲ್ಲೆಗಳಲ್ಲಿ ಮೊದಲ ಹಂತದ ಅನ್ ಲಾಕ್ ಅಂದ್ರೆ ಮಧ್ಯಾಹ್ನ 2 ಗಂಟೆ ವರೆಗೆ ಅಗತ್ಯ ಸಾಮಗ್ರಿ ಕೊಳ್ಳುವುದಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಒಂದು ವಾರದ ನಂತರ ಪಾಸಿಟಿವಿಟಿ ರೇಟ್ ನೋಡಿಕೊಂಡು ಮೈಸೂರು ಹೊರತುಪಡಿಸಿ 13 ಮತ್ತು 16 ಜಿಲ್ಲೆಗಳನ್ನು ವಿಭಜಿಸಿ ಅನ್ ಲಾಕ್ ಪ್ರಕ್ರಿಯೆ ಆರಂಭಿಸಲಾಗಿದೆ.
Lockdown to repeat in 13 districts of Karnataka including Dakshina Kannada states CM. With the continuous decline in COVID-19 cases, Karnataka Chief Minister BS Yediyurappa today further relaxed lockdown restrictions in the state from June 21. For the next phase of the unlock, the Karnataka government has given relaxation in timings to gyms, restaurants, and resorts. Further, buses and metro services have been allowed to function at 50% capacity. Private offices can operate at 50 per cent capacity in 16 districts that have a positivity rate below 5 per cent.
11-02-25 11:12 pm
Bangalore Correspondent
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
11-02-25 06:41 pm
HK News Desk
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm