ಸಿಎಂ ಬದಲಾವಣೆ ಅಪ್ಪಟ ಸುಳ್ಳು ; ಕಳ್ಳನ ಹೆಂಡತಿ ಯಾವತ್ತಿದ್ದರೂ ಡ್ಯಾಶ್... ಸಿ.ಟಿ.ರವಿ ಕಿಡಿ

22-06-21 04:53 pm       Headline Karnataka News Network   ಕರ್ನಾಟಕ

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಹತ್ವದ ಹೇಳಿಕೆ ನೀಡಿದ್ದಾರೆ

ಚಿಕ್ಕಮಗಳೂರು, ಜೂ.22: : ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಹತ್ವದ ಹೇಳಿಕೆ ನೀಡಿದ್ದಾರೆ. 

ಪಕ್ಷದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ  “ಕಳ್ಳನ ಹೆಂಡತಿ ಯಾವತ್ತಿದ್ದರೂ …. ಡ್ಯಾಶ್” ಎಂಬ ಗಾದೆಯ ಮೂಲಕ ಕಿಡಿಕಾರಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸುವವರು ಯಾರೆಂದು ಪತ್ತೆ ಹಚ್ಚುವುದು ಕಷ್ಟವೇನಲ್ಲ. ಸಿಎಂ ಬದಲಾವಣೆ ಎನ್ನುವುದು ಒಂದು ಸುಳ್ಳು ಸುದ್ದಿ. ಉಸ್ತುವಾರಿ ಅರುಣ್ ಸಿಂಗ್ ವರಿಷ್ಠರಿಗೆ ವರದಿ ಕೊಟ್ಟರು ಎನ್ನವುದೂ ಸುಳ್ಳು ಸುದ್ದಿ. ಅರುಣ್ ಸಿಂಗ್ ಮೂರು ದಿನದಿಂದ ಕೇಂದ್ರದಲ್ಲೇ ಇಲ್ಲ ಎಂದರು.

ಪತ್ರಿಕೆ, ವಾಹಿನಿಗಳು ವರದಿ ಕೊಟ್ಟರು ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಇದರ ಹಿಂದೆ ಯಾರೋ ಷಡ್ಯಂತ್ರ ನಡೆಸುತ್ತಿರುವಂತಿದೆ. ಅಪಪ್ರಚಾರದಿಂದ ಸುದ್ದಿಯನ್ನು ಜೀವಂತ ಇಡುವಂತೆ ಮಾಡುತ್ತಿದ್ದಾರೆ. ಸುದ್ದಿ ಬಿಟ್ಟು ಅದನ್ನ ಚರ್ಚೆಗೆ ಹುಟ್ಟು ಹಾಕುತ್ತಾರೆ. ಕ್ರಿಯೆ, ಪ್ರತಿಕ್ರಿಯೆ ಮೂಲಕ ಅದೇ ಜೀವಂತವಾಗಿರುತ್ತದೆ. ಸುಳ್ಳು ಸುದ್ದಿಯ ಸೃಷ್ಠಿಕರ್ತರಿಂದ ಸುಳ್ಳು ಸುದ್ದಿ ಸೃಷ್ಟಿಯಾಗಿದೆ. ಯಾರಿಗೆ ಕೆಲಸ ಇಲ್ಲವೋ ಅವರಿಗೆ ಈ ರೀತಿ ಸುದ್ದಿ ಸೃಷ್ಠಿ ಮಾಡುವುದೇ ಕೆಲಸ ಎಂದು ಸಿ.ಟಿ.ರವಿ ಕಿಡಿಕಾರಿದರು.

No discussion on change in Karnataka CM CT Ravi slams those circulating fake news. CT Ravi issued a statement during a program in Chikmagalur.