ಬ್ರೇಕಿಂಗ್ ನ್ಯೂಸ್
23-06-21 04:40 pm Headline Karnataka News Network ಕರ್ನಾಟಕ
ಮೈಸೂರು, ಜೂನ್ 23: ರಾಜ್ಯದಲ್ಲಿಯೂ ಕೊರೊನಾ ವೈರಸಿನ ಹೊಸ ರೂಪಾಂತರಿ ಡೆಲ್ಟಾ ಪ್ಲಸ್ ಪತ್ತೆಯಾಗಿದೆ ಎಂದು ಹೇಳಿಕೆ ನೀಡಿ ಆರೋಗ್ಯ ಸಚಿವ ಡಾ.ಸುಧಾಕರ್ ಆತಂಕ ಎಬ್ಬಿಸಿರುವ ಬೆನ್ನಲ್ಲೇ ಮೈಸೂರಿನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪ್ರಸಾದ್, ಡೆಲ್ಟಾ ಪ್ಲಸ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಡೆಲ್ಟಾ ಪ್ಲಸ್ ಪತ್ತೆಯಾಗಿರುವುದು ಮೇ ತಿಂಗಳ ಸ್ಯಾಂಪಲ್ ನಲ್ಲಿ. ಸೋಂಕಿತ ವ್ಯಕ್ತಿ ಆಗಲೇ ಗುಣಮುಖರಾಗಿ ತೆರಳಿದ್ದಾರೆ. ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ನಿತ್ಯವೂ ಸಾವಿರಾರು ಸ್ವಾಬ್ ತೆಗೆಯುತ್ತೇವೆ. ಈ ಪೈಕಿ ಪ್ರತಿ ತಿಂಗಳಲ್ಲೂ ವಿಶೇಷವಾಗಿ ಕಂಡ 40 ಸ್ಯಾಂಪಲ್‌ಗಳನ್ನು ರ‌್ಯಾಂಡಮ್ ಆಗಿ ಆಯ್ಕೆ ಮಾಡಿ ಬೆಂಗಳೂರಿನ ಲ್ಯಾಬ್ ಗೆ ಕಳುಹಿಸುತ್ತೇವೆ. ಮೇ ತಿಂಗಳಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ಗೆ ಕಳುಹಿಸಿದ್ದ ಸ್ಯಾಂಪಲ್‌ನಲ್ಲಿ ಡೆಲ್ಟಾ ಪ್ಲಸ್ ಕಂಡುಬಂದಿದೆ. ಒಂದು ಕೇಸ್ ಕಂಡು ಬಂದಿರುವುದನ್ನೇ ಆರೋಗ್ಯ ಸಚಿವರು ಮತ್ತು ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವರು ಘೋಷಣೆ ಮಾಡಿದ್ದಾರೆ.

ಈಗಾಗಲೇ ಸೋಂಕಿತ ವ್ಯಕ್ತಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಡೆಲ್ಟಾ ಪ್ಲಸ್ ಕರೊನಾದ ಮತ್ತೊಂದು ರೂಪಾಂತರ ಅಷ್ಟೆ. ಇದನ್ನು ಮೂರನೇ ಅಲೆ ಅಂತ ಭಾವಿಸಬೇಕಿಲ್ಲ. ಮೈಸೂರು ಜಿಲ್ಲೆಯಲ್ಲಿ 36 ಲಕ್ಷ ಜನಸಂಖ್ಯೆ ಇದೆ. ಇದುವರೆಗೆ 16 ಲಕ್ಷ ಜನರನ್ನು ಟೆಸ್ಟ್ ಮಾಡಿದ್ದೇವೆ.
ಈ ಪೈಕಿ 1.63 ಲಕ್ಷ ಪಾಸಿಟಿವ್ ಕೇಸ್ ಬಂದಿದೆ. ಈಗ ಕರೊನಾ ನಿಯಂತ್ರಣದಲ್ಲಿದೆ ಎಂದು ಡಿಎಚ್ಓ ಡಾ.ಪ್ರಸಾದ್ ಹೇಳಿದ್ದಾರೆ.
ಮಕ್ಕಳಲ್ಲಿ ಅತಿ ಹೆಚ್ಚು ಕೇಸ್ ಬರುತ್ತಿದೆ ಎನ್ನುವುದೂ ಸುಳ್ಳು ವರದಿ. ನಾನು 16 ತಿಂಗಳ ಅಂಕಿ ಅಂಶಗಳನ್ನೂ ಪರಿಶೀಲನೆ ಮಾಡಿದ್ದೇನೆ. ಆ ರೀತಿಯ ಅಂಶ ಕಂಡುಬಂದಿಲ್ಲ. ಕೊರೊನಾ ಸೋಂಕಿನ ಮೂರನೇ ಅಲೆ ಶುರುವಾಗಿದೆ ಅನ್ನೋದು ಕೇವಲ ಊಹಾಪೋಹ ಎಂದು ಮೈಸೂರು ಡಿಎಚ್‌ಒ ಡಾ.ಪ್ರಸಾದ್ ಹೇಳಿದ್ದಾರೆ.
Delta Plus Variant Cases not Found in Karnataka Health minster in trouble. Mysore DHO clarifies that two new cases of the Delta Plus variant of coronavirus have not been found in Karnataka.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm