ಬ್ರೇಕಿಂಗ್ ನ್ಯೂಸ್
03-07-21 08:30 pm Satish, Bengaluru Correspondent ಕರ್ನಾಟಕ
ಬೆಂಗಳೂರು, ಜುಲೈ 3: ರಾಜ್ಯದಲ್ಲಿ ಕೊರೊನಾ ಲಾಕ್ಡೌನ್ ಮತ್ತಷ್ಟು ಸಡಿಲಗೊಳಿಸಿ ಸರಕಾರ ಆದೇಶ ಮಾಡಿದೆ. ವೀಕೆಂಡ್ ಕರ್ಫ್ಯೂವನ್ನು ರದ್ದುಪಡಿಸುವ ಜೊತೆಗೆ ಬಹುತೇಕ ಎಲ್ಲ ರೀತಿಯ ಖಾಸಗಿ, ಸರಕಾರಿ ಕಚೇರಿ ಮತ್ತು ಎಲ್ಲ ಪ್ರಕಾರದ ವಾಣಿಜ್ಯ, ವ್ಯಾಪಾರದ ವಹಿವಾಟುಗಳಿಗೆ ಅವಕಾಶ ನೀಡಲಾಗಿದೆ. ಅಲ್ಲದೆ, ಮಾಲ್ ನಲ್ಲಿ ಮಲ್ಟಿಫ್ಲೆಕ್ಸ್ ಹೊರತುಪಡಿಸಿ ಇತರೇ ವಾಣಿಜ್ಯ ಚಟುವಟಿಕೆಗೆ ಅನುಮತಿ ನೀಡಲಾಗಿದೆ. ಶಾಲೆ, ಕಾಲೇಜುಗಳನ್ನು ಜು.19ರ ವರೆಗೂ ತೆರೆಯಲು ಅವಕಾಶ ಇಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಉಳಿದಂತೆ, ಸಿನಿಮಾ ಪ್ರದರ್ಶನದ ಮಲ್ಪಿಫ್ಲೆಕ್ಸ್, ಥಿಯೇಟರ್ ಗಳಿಗೆ ಅವಕಾಶ ನೀಡಲಾಗಿಲ್ಲ. ದೇವಸ್ಥಾನ, ಮಸೀದಿಯಲ್ಲಿ ಪ್ರಾರ್ಥನೆಗೆ ಮತ್ತು ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೆ, ದೇವಸ್ಥಾನದಲ್ಲಿ ವಿಶೇಷ ಪೂಜೆ, ಸೇವೆಗಳನ್ನು ನಡೆಸಲು ಅನುಮತಿ ನೀಡಲಾಗಿಲ್ಲ. ಅನ್ ಲಾಕ್ -3ರ ಮಾರ್ಗಸೂಚಿ ರಾಜ್ಯದಲ್ಲಿ ಜು.19ರ ವರೆಗೆ ಜಾರಿಯಲ್ಲಿ ಇರಲಿದೆ. ಪಾಸಿಟಿವ್ ದರ ಹೆಚ್ಚಿರುವ ಕೊಡಗು ಜಿಲ್ಲೆ ಹೊರತುಪಡಿಸಿ ರಾಜ್ಯದಾದ್ಯಂತ ಏಕರೂಪದ ಅನ್ ಲಾಕ್ ಆದೇಶ ಜಾರಿಗೆ ತರಲಾಗಿದೆ.
ಅನ್ ಲಾಕ್ ಮೂರನೇ ಆದೇಶದ ಪ್ರಮುಖಾಂಶಗಳು ಹೀಗಿರುತ್ತವೆ.
ಜುಲೈ 5ರಿಂದ ಅನ್ ಲಾಕ್ 3.0 ಮಾರ್ಗಸೂಚಿ ಜಾರಿ
ಇನ್ನು ಮುಂದೆ ವೀಕೆಂಡ್ ಲಾಕ್ಡೌನ್ ನಿರ್ಬಂಧ ಇರಲ್ಲ
ಜುಲೈ 19ರ ವರೆಗೂ ಶಾಲಾ, ಕಾಲೇಜಿಗೆ ಅನುಮತಿ ಇರಲ್ಲ
ಬಾರ್, ಹೊಟೇಲ್ ಗಳಲ್ಲಿ ಕುಳಿತು ತಿನ್ನಲು, ಕುಡಿಯಲು ಅವಕಾಶ
ರಾತ್ರಿ 9ರ ವರೆಗೂ ಬಾರ್ ಗಳಲ್ಲಿ ಕುಳಿತು ಕುಡಿಯಲು ಅನುಮತಿ
ದೇವಸ್ಥಾನ ಸೇರಿ ಧಾರ್ಮಿಕ ಕೇಂದ್ರಗಳಿಗೆ ದರ್ಶನಕ್ಕೆ ಅನುಮತಿ
ದೇವಸ್ಥಾನಗಳಲ್ಲಿ ದರ್ಶನಕ್ಕೆ ಮಾತ್ರ, ಸೇವೆಗಳಿಗೆ ಅವಕಾಶ ಇರಲ್ಲ
ಬಸ್ ಗಳಲ್ಲಿ ಸೀಟು ಭರ್ತಿಯೊಂದಿಗೆ ಪ್ರಯಾಣಿಕರ ಸಂಚಾರಕ್ಕೆ ಅವಕಾಶ
ಕೆಎಸ್ಸಾರ್ಟಿಸಿ, ಬಿಎಂಟಿಸಿ, ಖಾಸಗಿ ಬಸ್ ಸಂಚಾರಕ್ಕೆ ಅನುಮತಿ
ಎಲ್ಲ ರೀತಿಯ ಕೈಗಾರಿಕೆಗಳಲ್ಲಿ ಕೋವಿಡ್ ನಿಯಮ ಅನುಸರಿಸಿ ಸಿಬಂದಿಗೆ ಅವಕಾಶ
ಮಲ್ಟಿಫ್ಲೆಕ್ಸ್, ಪಬ್, ಸಿನಿಮಾ ಥಿಯೇಟರ್ ಗಳಿಗೆ ಅವಕಾಶ ಇರಲ್ಲ
ಸ್ವಿಮ್ಮಿಂಗ್ ಪೂಲ್ ಗಳಲ್ಲಿ ಕ್ರೀಡಾಪಟುಗಳಿಗೆ ಮಾತ್ರ ತರಬೇತಿಗೆ ಅನುಮತಿ
ಕ್ರೀಡಾ ಸಂಕೀರ್ಣ, ಸ್ಟೇಡಿಯಂಗಳಲ್ಲಿ ತರಬೇತಿ, ಅಭ್ಯಾಸಗಳಿಗೆ ತೊಂದರೆ ಇಲ್ಲ
ಎಲ್ಲ ರೀತಿಯ ಧಾರ್ಮಿಕ, ರಾಜಕೀಯ ಸಭೆ, ಸಮಾರಂಭಗಳಿಗೆ ನಿಷೇಧ ಮುಂದುವರಿಕೆ
ಮದುವೆ ಕಾರ್ಯಕ್ರಮಗಳಿಗೆ ನೂರು ಜನಕ್ಕೆ ಸೀಮಿತಗೊಳಿಸಿ ಅವಕಾಶ
ಅಂತ್ಯಕ್ರಿಯೆ ಕಾರ್ಯಗಳಿಗೆ 20 ಜನರಿಗೆ ಮಾತ್ರ ಅವಕಾಶ
ಮಾಲ್ ಗಳನ್ನು ಕೋವಿಡ್ ನಿಯಮಾನುಸಾರ ತೆರೆಯಲು ಅನುಮತಿ
ಆಯಾ ಜಿಲ್ಲೆಗಳಲ್ಲಿ ಮಾರ್ಗಸೂಚಿ ಹೇರಲು ಜಿಲ್ಲಾಧಿಕಾರಿಗೆ ಅವಕಾಶ
ಸದ್ಯ ಕೊಡಗು ಜಿಲ್ಲೆ ಹೊರತುಪಡಿಸಿ ರಾಜ್ಯದಾದ್ಯಂತ ಏಕರೂಪದ ಆದೇಶ ಜಾರಿ
ಕೊಡಗಿನಲ್ಲಿ ಪಾಸಿಟಿವ್ ರೇಟ್ 5ಕ್ಕಿಂತ ಹೆಚ್ಚಿರುವುದರಿಂದ ಯಥಾಸ್ಥಿತಿ ಮುಂದುವರಿಕೆ
ಶಾಲೆ, ಕಾಲೇಜು, ಟ್ಯೂಶನ್ ಸೆಂಟರ್, ತರಬೇತಿ ಕೇಂದ್ರಗಳಿಗೆ ಅವಕಾಶ ಇರಲ್ಲ
ರಾತ್ರಿ 9ರಿಂದ ಬೆಳಗ್ಗೆ 5ರ ವರೆಗೆ ಜುಲೈ 19ರ ವರೆಗೂ ನೈಟ್ ಕರ್ಫ್ಯೂ ಜಾರಿ
ನೈಟ್ ಕರ್ಫ್ಯೂ ಅವಧಿಯಲ್ಲಿ ಅನಿವಾರ್ಯ ಕಾರಣ ಹೊರತುಪಡಿಸಿ ಸಂಚಾರ ಇರಲ್ಲ
ಕಂಟೈನ್ಮೆಂಟ್ ವಲಯ ಹೊರತಪಡಿಸಿ ಎಲ್ಲ ರೀತಿಯ ಚಟುವಟಿಕೆಗೆ ಅವಕಾಶ
Announcing Unlock 3.0 on Saturday, Chief Minister B S Yediyurappa said the government decided to further relax the existing Covid-19 restrictions based on expert recommendations. Cinema halls, theatres and pubs will remain closed even as all shops, restaurants, malls, private offices, government offices are allowed to be open fully subject to strictly enforcing Covid appropriate behaviour failing which action will be initiated under the Disaster Management Act, 2005.
11-02-25 11:12 pm
Bangalore Correspondent
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
11-02-25 06:41 pm
HK News Desk
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm