ಬ್ರೇಕಿಂಗ್ ನ್ಯೂಸ್
18-07-21 10:52 pm Mangaluru Correspondent ಕರ್ನಾಟಕ
ಬೆಂಗಳೂರು, ಜುಲೈ 18: ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಕೆಳಗಿಳಿಯುವುದು ನಿಶ್ಚಿತವಾಗಿದ್ದು ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ ಗ್ಯಾಂಗ್ ಸಂಪುಟದಿಂದ ಖಾಯಂ ಆಗಿ ಹೊರಬೀಳಲಿದೆ. ಹೀಗೆಂದು ಸ್ಫೋಟಕ ಮಾಹಿತಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳುತ್ತಿರುವ ಆಡಿಯೋ ವೈರಲ್ ಆಗಿದ್ದು ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ನಳಿನ್ ಕುಮಾರ್ ತಮ್ಮ ಆಪ್ತರ ಬಳಿ ತುಳುವಿನಲ್ಲಿ ಹೇಳುತ್ತಿದ್ದಾರೆ ಎನ್ನಲಾದ ಆಡಿಯೋ ಬಹಿರಂಗವಾಗಿದೆ. ಸಿಎಂ ಯಡಿಯೂರಪ್ಪ ಅವರನ್ನು ಬದಲಾಯಿಸಲಾಗುತ್ತದೆ ಎನ್ನುವ ಗುಸುಗುಸು ಹಬ್ಬಿರುವ ಬೆನ್ನಲ್ಲೇ ಈ ರೀತಿಯ ಆಡಿಯೋ ಬಹಿರಂಗವಾಗಿದ್ದು ಬಿಜೆಪಿ ರಾಜ್ಯಾಧ್ಯಕ್ಷರ ಪಾಲಿಗೆ ದೊಡ್ಡ ಮೈನಸ್ ಆಗಿದೆ. ಅಲ್ಲದೆ, ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬರಲಿದ್ದಾರೆ ಎಂಬ ಸುಳಿವನ್ನು ಸ್ವತಃ ರಾಜ್ಯಾಧ್ಯಕ್ಷರೇ ನೀಡಿದಂತಾಗಿದೆ.
ಯಾರಲ್ಲೋ ಫೋನಲ್ಲಿ ಮಾತನಾಡುತ್ತಾ ಈ ಮಾತು ಹೇಳಿದ್ದು ಅದನ್ನು ಜೊತೆಗಿದ್ದವರೇ ರೆಕಾರ್ಡ್ ಮಾಡಿದ್ದಾರೆ. ಯಡಿಯೂರಪ್ಪ ಅವರ ಜಾಗಕ್ಕೆ ಮೂವರ ಪೈಕಿ ಒಬ್ಬರು ಬರಲಿದ್ದಾರೆ. ಈಶ್ವರಪ್ಪ , ಜಗದೀಶ ಶೆಟ್ಟರ್ ಗ್ಯಾಂಗನ್ನು ಹೊರದಬ್ಬುತ್ತೇವೆ. ಹೊಸ ಟೀಮ್ ಅಧಿಕಾರಕ್ಕೆ ಬರಲಿದೆ. ಹೊಸ ಮೂವರಲ್ಲಿ ಯಾರು ಬಂದರೂ, ತೊಂದರೆ ಇಲ್ಲ. ಪವರ್ ನಮ್ಮ ಕೈಯಲ್ಲೇ ಇರುತ್ತದೆ. ಇದನ್ನು ಯಾರಿಗೂ ಹೇಳ್ಬೇಡಿ ಎನ್ನುತ್ತಾ ಗುಟ್ಟಾಗಿ ಹೇಳಿಕೊಂಡಿದ್ದ ಮಾತು ಈಗ ರಟ್ಟಾಗಿದೆ.
ತಮ್ಮ ಆಪ್ತರ ಬಳಿ ಕಟೀಲ್ ಅವರು ತುಳುವಿನಲ್ಲಿ ಮಾತನಾಡಿದ್ದು ಯಾರಿಗೂ ಹೇಳಬೇಡ ಎನ್ನುವುದನ್ನು ಪದೇ ಪದೇ ಹೇಳುತ್ತಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿ ಈಶ್ವರಪ್ಪ , ಜಗದೀಶ್ ಶೆಟ್ಟರ್ ಪ್ರಭಾವಿ ಮತ್ತು ಹಿರಿಯ ಸಚಿವರಾಗಿದ್ದು ಇಂಥವರನ್ನೇ ಹೊರಗೆ ಬೀಳಲಿದ್ದಾರೆ ಎಂದಿದ್ದು ಬಿಜೆಪಿ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
Mangalore BJP Naleen Kumar Kateel audio on change of CM leaked. The recorded audio conversation states that Eshwarappa and Jagadish Shettar will be removed and a new team will be formed. High command has got three names for the CM Candidate list in Karnataka he says. The Audio has now gone viral.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 12:31 pm
Mangalore Correspondent
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm