ಬ್ರೇಕಿಂಗ್ ನ್ಯೂಸ್
22-07-21 10:17 pm Headline Karnataka News Network ಕರ್ನಾಟಕ
ಬೆಂಗಳೂರು, ಜುಲೈ 22: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ನಡುವೆ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರದ್ದು ಎನ್ನಲಾದ ಆಡಿಯೋ ಬಾಂಬ್ ಬಗ್ಗೆ ಆರೆಸ್ಸೆಸ್ ನಾಯಕರು ಗರಂ ಆಗಿದ್ದಾರೆ. ಆಡಿಯೋ ಹೊರಬಂದಿದ್ದ ಕಾರಣಕ್ಕೇ ಲಿಂಗಾಯತ ಮತ್ತು ವೀರಶೈವ ಸಮುದಾಯದ ಮಠಗಳ ಸ್ವಾಮೀಜಿಗಳು ಬೀದಿಗೆ ಬಂದಿದ್ದಾರೆ. ಇದಕ್ಕೆ ರಾಜ್ಯಾಧ್ಯಕ್ಷರ ಲೂಸ್ ಟಾಕ್ ಕಾರಣ ಎಂದು ಆರೆಸ್ಸೆಸ್ ನಾಯಕರು ಗರಂ ಆಗಿದ್ದಾರಂತೆ. ಪ್ರಾಂತ ಜವಾಬ್ದಾರಿ ಹೊತ್ತಿರುವ ಬೆಂಗಳೂರಿನ ಮುಕುಂದ್ ಸೇರಿದಂತೆ ಹಲವು ನಾಯಕರು ನಳಿನ್ ಅವರ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ ಎನ್ನಲಾಗುತ್ತಿದ್ದು, ಈ ರೀತಿಯ ಲೂಸ್ ಟಾಕ್ ಮಾತಿನಿಂದಾಗಿ ರಾಜ್ಯದಲ್ಲಿ ಇಂಥ ಸ್ಥಿತಿ ಬಂದೊದಗಿದೆ ಎಂದಿದ್ದಾರೆ.
ವಿವಿಧ ಮಠಗಳ ಮಠಾಧೀಶರು ಬಿಎಸ್ವೈ ಅವರನ್ನು ಇಳಿಸುವ ವಿಚಾರದಲ್ಲಿ ಆರೆಸ್ಸೆಸ್ ನಾಯಕರ ಮೇಲೆ ಟೀಕೆ ಮಾಡುತ್ತಿರುವುದು ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಸೃಷ್ಟಿಸಿದೆ. ಮುಖ್ಯಮಂತ್ರಿ ಬದಲಾವಣೆಯ ಕೆಲಸವನ್ನು ಆರೆಸ್ಸೆಸ್ ನಾಯಕರೇ ಮಾಡುತ್ತಿದ್ದಾರೆಂದು ಸ್ವಾಮೀಜಿಗಳು ಹೇಳುತ್ತಿರುವುದು ರಾಜ್ಯದ ಜನರಿಗೆ ಬೇರೆಯದೇ ಆದ ಸಂದೇಶ ಹೋಗುವಂತಾಗಿದೆ ಎನ್ನುವ ಮಾತು ಸಂಘದ ನಾಯಕರಿಂದಲೇ ವ್ಯಕ್ತವಾಗುತ್ತಿದೆ. ಹೀಗಾಗಿ ಪ್ರಾಂತದಿಂದ ಹಿಡಿದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ಸಂಘದ ನಾಯಕರು ರಾಜ್ಯಾಧ್ಯಕ್ಷರ ನಡೆಯ ಬಗ್ಗೆ ಗರಂ ಆಗಿದ್ದಾರೆ.
ಪ್ರಾಂತ ಜವಾಬ್ದಾರಿ ಇರುವ ಆರೆಸ್ಸೆಸ್ ನಾಯಕರು ಬಿಜೆಪಿ ರಾಜ್ಯ ಘಟಕದ ಮೇಲೆ ಸಂಘಟನೆಯ ವಿಚಾರದಲ್ಲಿ ಸಲಹೆ, ಸೂಚನೆ ಕೊಡುವ ಜವಾಬ್ದಾರಿ ಹೊತ್ತಿದ್ದಾರೆ. ಲಿಂಗಾಯತರ ಮಟ್ಟಿಗೆ ವಿವಿಧ ಮಠಗಳ ಸ್ವಾಮೀಜಿಗಳು ಪ್ರಭಾವಿಯಾಗಿರುವುದರಿಂದ ಅವರೇ ಬೀದಿಗಿಳಿದು ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಎಚ್ಚರಿಕೆ ನೀಡುತ್ತಿರುವುದು ಹೈಕಮಾಂಡ್ ಮಟ್ಟದಲ್ಲಿ ಇರಿಸುಮುರಿಸಿಗೆ ಕಾರಣವಾಗಿದೆ. ಈ ರೀತಿಯ ಬೆಳವಣಿಗೆಯಿಂದ ಬಿಜೆಪಿ ಸಂಘಟನೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೆಯಾ ಅನ್ನುವ ಬಗ್ಗೆ ಆರೆಸ್ಸೆಸ್ ನಾಯಕರಿಂದ ವರದಿ ಪಡೆಯಲಿದ್ದಾರೆ. ಈ ವೇಳೆ, ಆಡಿಯೋ ವಿಚಾರದಿಂದ ಎದ್ದಿರುವ ಅಪಸ್ವರ ಮತ್ತು ಕಳೆದೆರಡು ದಿನಗಳಲ್ಲಿ ರಾಜ್ಯದಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ಪ್ರಾಂತ ಜವಾಬ್ದಾರಿ ಹೊತ್ತ ಆರೆಸ್ಸೆಸ್ ನಾಯಕರು ಕೇಂದ್ರಕ್ಕೆ ವರದಿ ನೀಡಲಿದ್ದಾರೆ.
ಸಿಎಂ ಸ್ಥಾನ ತ್ಯಜಿಸಲು ಪ್ಲಾನ್ ಆಗಿತ್ತು
ವಾರದ ಹಿಂದೆ ದೆಹಲಿಗೆ ತೆರಳಿದ್ದ ವೇಳೆ, ಅಮಿತ್ ಷಾ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಯಡಿಯೂರಪ್ಪ ಅವರನ್ನು ಮನವೊಲಿಸಿ ಸ್ಥಾನ ಬಿಟ್ಟುಕೊಡಲು ಸೂಚನೆಯನ್ನೂ ನೀಡಿದ್ದರು. ಅದಕ್ಕೆ ಒಪ್ಪಿಯೂ ಬಂದಿದ್ದ ಯಡಿಯೂರಪ್ಪ ಆಗಸ್ಟ್ ಮೊದಲ ವಾರದಲ್ಲಿ ಸ್ಥಾನ ಬಿಟ್ಟುಕೊಡುವುದು ಎಂದಾಗಿತ್ತು. ಅದಕ್ಕೂ ಮುನ್ನ ಜುಲೈ 26ರಂದು ಶಾಸಕಾಂಗ ಸಭೆ ಕರೆದು ಎರಡು ವರ್ಷಗಳ ಸಾಧನೆಯ ಬಗ್ಗೆ ಭಾಷಣ ಮಾಡುವುದೆಂದು ನಿಗದಿಯಾಗಿತ್ತು. ಕಳೆದೊಂದು ವರ್ಷದಿಂದ ಹೈಕಮಾಂಡ್, ಯಡಿಯೂರಪ್ಪ ಅವರನ್ನು ಗೌರವಪೂರ್ವಕವಾಗಿ ಇಳಿಸಲು ಸಿದ್ಧತೆಯನ್ನೂ ನಡೆಸಿತ್ತು. ಎಲ್ಲವೂ ಅಂದ್ಕೊಂಡಂತೇ ಆಗಿರುತ್ತಿದ್ದರೆ, ಯಡಿಯೂರಪ್ಪ ಸದ್ದಿಲ್ಲದೆ ಇಳಿದು ಹೋಗುತ್ತಿದ್ದರು. ಇದಕ್ಕೆ ಪೂರಕ ಎನ್ನುವಂತೆ, ಆರೋಗ್ಯ ಕಾರಣದಿಂದ ಯಡಿಯೂರಪ್ಪ ಸಿಎಂ ಸ್ಥಾನ ತ್ಯಜಿಸಲಿದ್ದಾರೆ ಎಂದು ರಾಷ್ಟ್ರ ಮಟ್ಟದ ಸುದ್ದಿ ವಾಹಿನಿಗಳು ಬಿಎಸ್ವೈ ದೆಹಲಿಯಲ್ಲಿರುವಾಗಲೇ ಸುದ್ದಿ ಮಾಡಿದ್ದವು.
ಆದರೆ, ಈ ನಡುವೆ ಆಡಿಯೋ ಬಾಂಬ್ ಬಂದಿದ್ದು, ಸ್ವತಃ ಯಡಿಯೂರಪ್ಪ ಸೇರಿದಂತೆ ಅವರ ಬಣದ ನಾಯಕರನ್ನು ಕೆರಳಿಸಿತ್ತು. ಈ ರೀತಿ ಆಡಿಯೋ ಹರಿಯಬಿಟ್ಟಿದ್ದು ಮತ್ತು ಅದರ ಸಂಬಂಧಿತ ಸುದ್ದಿಗಳೇ ಲಿಂಗಾಯತ ಮಠಾಧೀಶರನ್ನು ಬೀದಿಗೆ ಬರುವಂತಾಗಲು ನೆಪವಾಗಿತ್ತು ಎನ್ನುವ ಮಾತುಗಳು ಆರೆಸ್ಸೆಸ್ ವಲಯದಲ್ಲಿದೆ. ಹೀಗಾಗಿ ಸಿಎಂ ಸ್ಥಾನ ಬದಲಾವಣೆಯ ಜೊತೆಗೇ ರಾಜ್ಯಾಧ್ಯಕ್ಷರನ್ನೂ ಬದಲಾವಣೆ ಮಾಡುವ ನಿರ್ಣಯಕ್ಕೆ ಬಂದರೂ ಅಚ್ಚರಿಯಿಲ್ಲ. ಆಡಿಯೋ ಹರಿಬಿಟ್ಟ ಸುದ್ದಿ ರಾಷ್ಟ್ರ ಮಟ್ಟದಲ್ಲಿಯೂ ಭಾರೀ ಚರ್ಚೆಗೆ ಕಾರಣವಾಗಿತ್ತು. ಶೆಟ್ಟರ್, ಈಶ್ವರಪ್ಪ ಅವರನ್ನು ತೆಗೆದು ಹಾಕ್ತೀವಿ ಅಂದಿದ್ದು ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಆದರೆ, ಬಿಜೆಪಿ ರಾಜ್ಯ ಘಟಕ ಮಾತ್ರ ಎಲ್ಲವನ್ನೂ ಮ್ಯಾನೇಜ್ ಮಾಡಿಕೊಂಡು ತೇಪೆ ಹಚ್ಚುವ ಕೆಲಸ ಮಾಡಿತ್ತು.
ಕುತೂಹಲ ಮೂಡಿಸಿದ ಅರುಣ್ ಸಿಂಗ್ ನಡೆ
ಕರ್ನಾಟಕದ ರಾಜಕೀಯ ಬೆಳವಣಿಗೆ ಬಗ್ಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಳಿ ದೆಹಲಿಯಲ್ಲಿ ಮಾಧ್ಯಮದವರು ಪ್ರಶ್ನೆ ಮಾಡಿದಾಗ, ಒಂದು ವಾರ ಕಾದು ನೋಡಿ ಎಂದಷ್ಟೇ ಹೇಳುತ್ತಾ ತೆರಳಿದ್ದಾರೆ. ಯಾವುದೇ ಬೆಳವಣಿಗೆಯ ಬಗ್ಗೆಯೂ ಪ್ರತಿಕ್ರಿಯೆ ನೀಡಿರಲಿಲ್ಲ. ಅರುಣ್ ಸಿಂಗ್ ವರ್ತನೆಯೂ ಕುತೂಹಲ ಕೆರಳಿಸಿದ್ದು, ವಾರದ ಬಳಿಕ ಬೇರೆಯದ್ದೇ ಸಂದೇಶ ಬರುತ್ತಾ ಅನ್ನುವ ಶಂಕೆ ಮೂಡಿದೆ. ರಾಜ್ಯದಲ್ಲಾಗುತ್ತಿರುವ ಬೆಳವಣಿಗೆ ಬಗ್ಗೆ ಸೂಕ್ಷ್ಮ ದೃಷ್ಟಿ ನೆಟ್ಟಿರುವ ಕೇಂದ್ರ ನಾಯಕತ್ವ, ಮುಂದಿನ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಮೇಲೆ ಕಣ್ಣು ನೆಟ್ಟಿರುವುದರಿಂದ ಅಳೆದು ತೂಗಿ ನಿರ್ಧಾರಕ್ಕೆ ಬರಲಿದೆ. ಈ ಮೊದಲೇ ಯಡಿಯೂರಪ್ಪ ಅವರನ್ನು ಇಳಿಸಲು ನಿರ್ಧರಿಸಿದ್ದರೂ ಎರಡು ದಿನಗಳಲ್ಲಿ ನಡೆದಿರುವ ವೈಪರೀತ್ಯಗಳು ಹೈಕಮಾಂಡ್ ನಿರ್ಧಾರಕ್ಕೆ ಎಡರುಗಾಲಾಗಿ ಪರಿಣಮಿಸುವ ಸಾಧ್ಯತೆ ಬಗ್ಗೆ ಮಾತುಗಳು ಕೇಳಿಬರುತ್ತಿವೆ.
BJP Naleen Kumar Kateel Audio leak creates Havoc amid party leaders high command to intervene. A 47-second audio clip, allegedly of Karnataka BJP president Nalin Kumar Kateel, created ripples in the political circles on Monday as it hinted at leadership change. Though Mr. Kateel denied it was his voice and sought a probe into the ‘fake’ clip, many party legislators, cutting across camps, took the contents at face value, triggering further speculation, disappointment and intense lobbying.
16-08-25 08:05 pm
Bangalore Correspondent
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
16-08-25 03:34 pm
HK News Desk
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
16-08-25 08:26 pm
Mangalore Correspondent
Dharmasthala Panchayat, RTI: 38 ವರ್ಷಗಳಲ್ಲಿ 27...
16-08-25 04:45 pm
Expert PU College Announces ‘Xcelerate 2025’...
15-08-25 09:04 pm
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
16-08-25 07:06 pm
Bangalore Correspondent
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm