ಬ್ರೇಕಿಂಗ್ ನ್ಯೂಸ್
27-07-21 04:37 pm Headline Karnataka News Network ಕರ್ನಾಟಕ
ಬೆಂಗಳೂರು, ಜುಲೈ 27: ಏಷ್ಯನ್ ಚೆಸ್ ಚಾಂಪಿಯನ್ ಶಿಪ್ ನ ಏಳು ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ಚಾರ್ವಿ ಅನಿಲ್ ಕುಮಾರ್ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಭಾರತದವರೇ ಆದ ತೆಲಂಗಾಣದ ಸಂಹಿತಾ ಪುಂಗವನಮ್ ಪ್ರಥಮ ಸ್ಥಾನ ಗಳಿಸಿದ್ದು, ಪಿಲಿಪ್ಪೈನ್ಸ್ ನ ವೆಂಟುರಾ ತಾಲಿಯಾ ತೃತೀಯ ಸ್ಥಾನ ಗಳಿಸಿದ್ದಾರೆ.
ಹತ್ತು ದಿನಗಳ ಹಿಂದಷ್ಟೇ ನಡೆದಿದ್ದ ಭಾರತದ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಚಾರ್ವಿ, ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಕೊನೆಯ ಸುತ್ತಿನ ವರೆಗೂ ಪ್ರಥಮ ಸ್ಥಾನದಲ್ಲಿದ್ದರು.

ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಭಾರತದವರೇ ಆದ ಸಂಹಿತಾರಿಂದ ಪ್ರಬಲ ಪೈಪೋಟಿ ಎದುರಿಸಿದ್ದ ಚಾರ್ವಿ ಚಿನ್ನದ ಪದಕದ ಸನಿಹದಲ್ಲಿದ್ದರು. ಕೊನೆಯಲ್ಲಿ ಇಬ್ಬರೂ ತಲಾ 8 ಅಂಕ ಗಳಿಸಿದಾಗ ಟೈ ಬ್ರೇಕರ್ ಆಧಾರದ ಮೇಲೆ ಚಾರ್ವಿ ಎರಡನೇ ಸ್ಥಾನ ಹಾಗೂ ರಜತ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಅದೇ ಪಂದ್ಯಾವಳಿಯ ತಂಡ ವಿಭಾಗದಲ್ಲಿ ಚಾರ್ವಿ ಪ್ರತಿನಿಧಿಸಿದ 4 ಜನರ ಭಾರತೀಯ ತಂಡ ಚಿನ್ನದ ಪದಕ ಗಳಿಸಿದೆ.
ಈ ಸಾಧನೆಯ ಮುಖಾಂತರ ಆಗಸ್ಟ್ ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಅಂಡರ್ -7 ವಿಭಾಗದಲ್ಲಿ ಚಾರ್ವಿ ಭಾರತವನ್ನು ಅಧಿಕೃತವಾಗಿ ಪ್ರತಿನಿಧಿಸಲಿದ್ದಾರೆ. ಇದೇ ಪಂದ್ಯಾವಳಿಯ ಹತ್ತು ವರ್ಷದ ಒಳಗಿನವರ ವಿಭಾಗದಲ್ಲಿ ಕೂಡ ಚಾರ್ವಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ.
ಮೂಲತಃ ಶ್ರವಣಬೆಳಗೊಳದ ಜಿನೇನಹಳ್ಳಿಯ ಅನಿಲ್ ಕುಮಾರ್ ಹಾಗೂ ಅಖಿಲಾ ಅವರ ಪುತ್ರಿಯಾಗಿರುವ ಚಾರ್ವಿ, ಕಳೆದ ಎರಡೂವರೆ ವರ್ಷಗಳಿಂದ ಮಲ್ಲೇಶ್ವರಂನ ಕರ್ನಾಟಕ ಚೆಸ್ ಅಕಾಡೆಮಿಯಲ್ಲಿ ಚದುರಂಗ ಅಭ್ಯಾಸ ಮಾಡುತ್ತಿದ್ದಾರೆ.
ಅಂತಾರಾಷ್ಟ್ರೀಯ ಚೆಸ್ ಆಟಗಾರ ಶಿವಾನಂದ ಬಿ.ಎಸ್ ಚಾರ್ವಿಯ ಮುಖ್ಯ ತರಬೇತುದಾರರಾಗಿದ್ದು, ಇನ್ನೋರ್ವ ಖ್ಯಾತ ಆಟಗಾರ ಗಹನ್ ಎಂ.ಜಿ ಸಹಾಯಕ ತರಬೇತುದಾರರಾಗಿ ಚಾರ್ವಿಗೆ ಮಾರ್ಗದರ್ಶನ
ನೀಡುತ್ತಿದ್ದಾರೆ.
Asian Chess Championship 2021 seven-year-old Charvi runner up in the finals. Charvi is from Hassan. 10 days back Chravi had won first place at Indian State Championship.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
21-09-26 08:21 pm
HK News Staffer
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm