ಬ್ರೇಕಿಂಗ್ ನ್ಯೂಸ್
02-08-21 12:12 pm Bengaluru Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 2: ನಗರದ ಕೈಕೊಂಡ್ರನಹಳ್ಳಿ ಕೆರೆಯ ಬಳಿ ಗೋದ್ರೆಜ್ ಪ್ರಾಪರ್ಟೀಸ್ ಮತ್ತು ವಂಡರ್ ಪ್ರಾಜೆಕ್ಟ್ಸ್ ಡೆವಲಪ್‌ಮೆಂಟ್ ಕಂಪೆನಿಗಳಿಗೆ ಸೇರಿದ ಎರಡು ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ 2018ರ ಜನವರಿ 10ರಂದು ಪರಿಸರ ಇಲಾಖೆ ನೀಡಿದ್ದ ಅನುಮತಿಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ಮಂಡಳಿ ರದ್ದುಪಡಿಸಿದ್ದು ಅಲ್ಲಿನ ಬಹುಮಹಡಿ ಕಟ್ಟಡಗಳನ್ನು ನೆಲಸಮಗೊಳಿಸಲು ಆದೇಶಿಸಿದೆ.
ಎಚ್.ಪಿ. ರಾಜಣ್ಣ ಎಂಬವರು ಗೋದ್ರೆಜ್ ಪ್ರಾಪರ್ಟಿ ಮತ್ತು ವಂಡರ್ ಪ್ರಾಜೆಕ್ಟ್ ಡೆವಲಪ್‌ಮೆಂಟ್ ವಿರುದ್ಧ ಎನ್ ಜಿಟಿಗೆ ಅರ್ಜಿ ಸಲ್ಲಿಸಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ವಿಚಾರಣೆ ನಡೆಸಿದ ಎನ್‌ಜಿಟಿ ಕೋರ್ಟ್ ಬಳಿಕ ಕಟ್ಟಡ ನೆಲಸಮ ಮಾಡಲು ಆದೇಶ ನೀಡಿದೆ.
ಎನ್‌ಜಿಟಿ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೊರೆ
ಎನ್‌ಜಿಟಿ ನ್ಯಾಯಾಲಯ ಆದೇಶ ನೀಡಿರುವುದು ಗಮನಕ್ಕೆ ಬಂದಿದೆ. ನಮ್ಮ ಸಮರ್ಥನೆ ಮತ್ತು ವಾದವನ್ನು ಎನ್‌ಜಿಟಿ ಪರಿಗಣನೆಗೆ ತೆಗೆದುಕೊಂಡಿಲ್ಲ. ಪ್ರಕರಣದಲ್ಲಿ ನಮ್ಮ ಅರ್ಹತೆ ಮತ್ತು ನಿಯಮ ಪಾಲನೆ ಬಗ್ಗೆ ನಮಗೆ ವಿಶ್ವಾಸವಿದೆ. ಜವಾಬ್ದಾರಿಯುತ ಕಾರ್ಪೊರೇಟ್ ವ್ಯವಹಾರಸ್ಥರಾಗಿ ಸಂಬಂಧಿತ ಎಲ್ಲ ನಿಯಮಗಳನ್ನು ಅನುಸರಿಸಿದ್ದೇವೆ. ಎನ್‌ಜಿಟಿ ಆದೇಶವನ್ನು ಸುಪ್ರೀಕೋರ್ಟ್‌ನಲ್ಲಿ ಪ್ರಶ್ನಿಸಲು ಉದ್ದೇಶಿಸಲಾಗಿದೆ ಎಂದು ಗೋದ್ರೆಜ್ ಪ್ರಾಪರ್ಟೀಸ್ ಕಂಪನಿಯ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.
ಯೋಜನಾ ವೆಚ್ಚದ ಶೇ.10 ರಷ್ಟು ದಂಡ
ಇದಲ್ಲದೆ, ಪರಿಸರ ಹಾನಿ ಪುನಶ್ಚೇತನಕ್ಕಾಗಿ ಗೋದ್ರೆಜ್ ಪ್ರಾಪರ್ಟಿಸ್‌ಗೆ ಯೋಜನಾ ವೆಚ್ಚದ ಶೇ.10 ರಷ್ಟು ದಂಡ ವಿಧಿಸುವುದಾಗಿ ಎನ್‌ಜಿಟಿ ತಿಳಿಸಿದೆ. ಪರಿಸರ ಇಲಾಖೆ ಈ ಮೊದಲು ಸಲ್ಲಿಸಿದ್ದ ಅರ್ಜಿಯಲ್ಲಿ ಯೋಜನಾ ವೆಚ್ಚವು 310 ಕೋಟಿ ರೂ. ಎಂದು ತಿಳಿಸಿತ್ತು. ಅದರಂತೆ, 31 ಕೋಟಿ ರೂ. ದಂಡ ಪಾವತಿಸಲು ನಿರ್ದೇಶನ ನೀಡಲಾಗಿದೆ.
The National Green Tribunal on July 30, quashed the environmental clearance (EC) granted to a high-rise luxury project by Godrej Properties Limited and Wonder Projects Development in Bengaluru and directed its immediate demolition. NGT also imposed a penalty of Rs 31 crore on the project proponent and said the amount shall be used for demolition of the constructions, restoration of the area to the original position, rejuvenation and reforestation of the Kaikondarahalli lake and its surrounding area.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
21-09-26 08:21 pm
HK News Staffer
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm