ಬ್ರೇಕಿಂಗ್ ನ್ಯೂಸ್
04-08-21 11:58 am Headline Karnataka News Network ಕರ್ನಾಟಕ
ಬೆಂಗಳೂರು, ಆ.4 : ಪ್ರೀತಿಯನ್ನು ನಿರಾಕರಿಸಿದ ನೆಪದಲ್ಲಿ ಯುವತಿಯ ಕಪಾಳಕ್ಕೆ ಬಾರಿಸಿ ಹಲ್ಲೆಗೈದ ಘಟನೆ ಬಸವನಗುಡಿಯ ಡೊಮಿನೊಸ್ ಪಿಜ್ಜಾ ಸೆಂಟರ್ ನಲ್ಲಿ ನಡೆದಿದೆ. ಡೊಮಿನೊಸ್ ಪಿಜ್ಜಾ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದ ಪುರುಷೋತ್ತಮ್ ಎಂಬಾತ ಹಲ್ಲೆಗೈದು ಪರಾರಿಯಾಗಿದ್ದು ಯುವತಿ ಕುಸಿದು ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಸವನಗುಡಿಯ ರಾಮಕೃಷ್ಣ ಆಶ್ರಮದ ಸಮೀಪ ಇರುವ ಡೊಮಿನೋಸ್ ಪಿಜ್ಜಾ ಹಟ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸುವಂತೆ ಅಲ್ಲಿನ ಮ್ಯಾನೇಜರ್ ಪುರುಷೋತ್ತಮ್ ಬಲವಂತ ಪಡಿಸುತ್ತಿದ್ದ. ಯುವತಿ ಆತನ ಪ್ರೀತಿಯನ್ನು ನಿರಾಕರಿಸಿ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಇದರಿಂದ ದ್ವೇಷ ಕಾರುತ್ತಿದ್ದ ಮ್ಯಾನೇಜರ್ ಕೆಲಸ ಹೇಳುವ ನೆಪದಲ್ಲಿ ಕಪಾಳಕ್ಕೆ ಬಾರಿಸಿದ್ದಾನೆ. ಏಟಿನ ರಭಸಕ್ಕೆ ಯುವತಿ ಕುಸಿದು ಬಿದ್ದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಲಸ ಹೋಗುತ್ತದೆ ಎನ್ನುವ ಭಯದಿಂದ ಆಕೆ ಈವರೆಗೂ ದೂರು ನೀಡಿರಲಿಲ್ಲ.

ಹಲ್ಲೆಗೈದ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಸವನಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಪುರುಷೋತ್ತಮ್‌ಗಾಗಿ ಶೋಧ ನಡೆಸುತ್ತಿದ್ದಾರೆ. ಘಟನೆ ಬಳಿಕ ಎಚ್ಚೆತ್ತ ಡೊಮಿನೊಸ್ ಪಿಜ್ಜಾ ಕಂಪನಿಯು, ಮ್ಯಾನೇಜರ್ ಪುರುಷೋತ್ತಮ್ ನನ್ನು ಕೆಲಸದಿಂದ ವಜಾ ಮಾಡಿದೆ. ಬಸವನಗುಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನೊಬ್ಬ ಮ್ಯಾನೇಜರ್ ಮಹದೇವ್ ಎಂಬಾತನನ್ನು ವಶಕ್ಕೆ ಪಡೆದು ಮಾಹಿತಿ ಪಡೆದಿದ್ದಾರೆ. ಪುರುಷೋತ್ತಮ್ ತಲೆಮರೆಸಿಕೊಂಡಿದ್ದಾನೆ.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
21-09-26 08:21 pm
HK News Staffer
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm