ಬ್ರೇಕಿಂಗ್ ನ್ಯೂಸ್
07-08-21 03:14 pm Headline Karnataka News Network ಕರ್ನಾಟಕ
ಮೈಸೂರು, ಆಗಸ್ಟ್ 7: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಮೈಸೂರು ಶಾಸಕ ರಾಮದಾಸ್ ಕೊನೆಗೂ ಆಕ್ರೋಶ ಹೊರಹಾಕಿದ್ದು ಆ ಒಬ್ಬ ವ್ಯಕ್ತಿಯ ಫೋನ್ ಕರೆಗೆ ಹೆದರಿ ನನ್ನನ್ನು ಕೈಬಿಟ್ಟರು ಎಂದು ಬಿಜೆಪಿ ಹೈಕಮಾಂಡ್ ವಿರುದ್ಧ ಕಿಡಿಕಾರಿದ್ದಾರೆ.
ರಾಮದಾಸ್ ಹೆಸರು ತೆಗೆಸಿದ ಆ ವ್ಯಕ್ತಿ ಯಾರು ? ಆ ವ್ಯಕ್ತಿಯ ಫೋನ್ ಕಾಲ್ ಗೆ ಹೆದರಿ ರಾಮದಾಸ್ ಹೆಸರನ್ನು ಕೈಬಿಟ್ಟವರು ಯಾರು ಎನ್ನುವ ಬಗ್ಗೆ ಕುತೂಹಲ ಎದ್ದಿದೆ.
ಯಡಿಯೂರಪ್ಪ, ಕಟೀಲ್ ಮಂತ್ರಿ ಸ್ಥಾನದ ಭರವಸೆ ನೀಡಿದ್ದರು. ಆದರೆ ಹೈಕಮಾಂಡ್ ಮಟ್ಟದ ವ್ಯಕ್ತಿಯೊಬ್ಬರು ನಾನು ಸಚಿವನಾಗುವುದನ್ನು ತಡೆದಿದ್ದಾರೆ ಎಂದು ರಾಮದಾಸ್ ತಮ್ಮ ಆಪ್ತರಲ್ಲಿ , ಕ್ಷೇತ್ರದ ಕಾರ್ಯಕರ್ತರಲ್ಲಿ ಹೇಳಿಕೊಂಡಿದ್ದಾರೆ.

ರಾಮದಾಸ್ ಹೇಳುವ ಆ ವ್ಯಕ್ತಿ ಬಿ.ಎಲ್.ಸಂತೋಷ್ ಎನ್ನುವ ಮಾತು ಕ್ಷೇತ್ರದ ಜನರ ಬಾಯಲ್ಲಿ ಕೇಳಿಬರುತ್ತಿದೆ. ರಾಮದಾಸ್ ಸ್ಥಾನವನ್ನು ತಪ್ಪಿಸಿ ಬಿ.ಸಿ.ನಾಗೇಶ್ ಗೆ ಆ ಸ್ಥಾನವನ್ನು ಬಿ.ಎಲ್.ಸಂತೋಷ್ ಕೊಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಿ.ಎಲ್.ಸಂತೋಷ್ ಹೆಸರೆತ್ತದೆ ವ್ಯಕ್ತಿಯ ವಿರುದ್ಧ ಕ್ಷೇತ್ರದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಚಿವ ಸ್ಥಾನ ಕೈ ತಪ್ಪಿದ ನಂತರ ಕ್ಷೇತ್ರದಲ್ಲೇ ಉಳಿದಿರುವ ಎಸ್.ಎ.ರಾಮದಾಸ್, ಕ್ಷೇತ್ರದ ಜನರೇ ನನಗೆ ಹೈಕಮಾಂಡ್, ಮೇಲಿನವರಲ್ಲ ಎಂದು ಹೇಳಿಕೊಂಡು ಸಮಾಧಾನವನ್ನು ಪಡುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
S A Ramdas disappointed on new cabinet expansion says one call has lead for my defeat
19-12-25 10:03 pm
HK News Desk
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 09:46 pm
Mangalore Correspondent
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm