ಬ್ರೇಕಿಂಗ್ ನ್ಯೂಸ್
26-08-21 03:57 pm Headline Karnataka News Network ಕರ್ನಾಟಕ
ಬೆಂಗಳೂರು, ಆಗಸ್ಟ್ 26: ರಾಜ್ಯ ಸರಕಾರ ಕ್ಯಾನ್ಸರ್ ಪೀಡಿತ ಮುಸ್ಲಿಮ್ ಮಹಿಳೆಯರಿಗೆ ಒಂದು ಲಕ್ಷ ರೂಪಾಯಿ ಸಹಾಯಧನ ನೀಡುತ್ತಿರುವುದನ್ನು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪತ್ತೆ ಮಾಡಿದ್ದು, ಈ ಬಗ್ಗೆ ಆಕ್ಷೇಪ ತೆಗೆದಿದ್ದಾರೆ. ಕ್ಯಾನ್ಸರ್ ರೋಗ ಯಾವುದೇ ಜಾತಿ ನೋಡಿ ಬರುವುದಿಲ್ಲ. ಎಲ್ಲ ಜಾತಿ, ಜನಾಂಗದವರಿಗೂ ಈ ರೀತಿಯ ರೋಗ ಬರುತ್ತದೆ. ಹಾಗಾಗಿ ಈ ಸಹಾಯಧನವನ್ನು ಕೂಡಲೇ ಎಲ್ಲ ಜಾತಿ, ವರ್ಗದವರಿಗೂ ಸಿಗುವಂತೆ ಮರು ಆದೇಶ ನೀಡುವಂತೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವರಿಗೆ ಯತ್ನಾಳ್ ಬರೆದಿದ್ದು, ಯಾವುದೇ ಸರಕಾರ ಈ ರೀತಿಯ ತಾರತಮ್ಯ ಮತ್ತು ಮುಸ್ಲಿಂ ತುಷ್ಟೀಕರಣ ಮಾಡಬಾರದು. ಬಿಜೆಪಿ ಆಡಳಿತದಲ್ಲಿದ್ದೂ ಈ ರೀತಿಯ ತಾರತಮ್ಯ ಮಾಡುವುದನ್ನು ಸಹಿಸುವುದಿಲ್ಲ. ಈ ಕುರಿತ ಆದೇಶವನ್ನು ಕೂಡಲೇ ಹಿಂಪಡೆದು, ಬಿಪಿಎಲ್ ವರ್ಗದ ಎಲ್ಲರಿಗೂ ಸೌಲಭ್ಯ ದೊರಕಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಸರಕಾರ ತನ್ನ ನಿರ್ಧಾರವನ್ನು ಬದಲಿಸಿ, ಹೊಸ ಆದೇಶ ನೀಡದಿದ್ದಲ್ಲಿ ಬಿಜೆಪಿ ಸರಕಾರಕ್ಕೂ ಇತರೇ ಸರಕಾರಕ್ಕೂ ವ್ಯತ್ಯಾಸವಿಲ್ಲ ಎಂದು ಭಾವಿಸಬೇಕಾಗುತ್ತದೆ. ಸರಕಾರ ಎಲ್ಲ ಬಡ ಜನರಿಗಾಗಿ ಇರಬೇಕು. ಯಾವುದೋ ಜಾತಿ, ಜನಾಂಗದವರ ಪರ ಇರಬಾರದು. ಎಲ್ಲ ವರ್ಗದ ಕ್ಯಾನ್ಸರ್ ಪೀಡಿತರಿಗೆ ಸರಕಾರದ ಸಹಾಯಧನ ಲಭಿಸಬೇಕು ಎಂದು ಶಾಸಕ ಯತ್ನಾಳ್, ಸಿಎಂ ಬಸವರಾಜ ಬೊಮ್ಮಾಯಿ ಸರಕಾರವನ್ನು ಒತ್ತಾಯಿಸಿದ್ದಾರೆ.
BJP legislator representing the city constituency here, Basanagouda Patil Yatnal, urged the government to withdraw the scheme meant for extending financial assistance of up to one lac rupees to Muslim women suffering from major health complications, and introduce a fresh scheme by covering people from all the castes, communities and religions.
10-02-25 07:01 pm
HK News Desk
13th edition Kumbh Mela, Triveni Sangama, T N...
10-02-25 05:18 pm
Magadi MLA Balakrishna, Bdcc bank, fake gold:...
10-02-25 01:40 pm
Bengaluru-Mysuru Expressway: ಟೈರ್ ಸ್ಫೋಟಗೊಂಡು...
09-02-25 07:58 pm
Renukacharya, Yatnal: ನೀನು ಜೆಡಿಎಸ್ ಸೇರಿ ಬಿರಿಯ...
09-02-25 06:58 pm
10-02-25 05:48 pm
HK News Desk
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
BJP Delhi, AAP, Live result, Election: 27 ವರ್...
08-02-25 12:14 pm
09-02-25 11:03 pm
Mangalore Correspondent
ಸುಳ್ಯದಲ್ಲಿ ಬೈಕ್ ಅಪಘಾತ ; ತೀವ್ರ ಗಾಯಗೊಂಡಿದ್ದ ಕಂಕ...
09-02-25 10:31 pm
Mangalore, Derlakatte, Drowning: ಕಪ್ಪೆ ಚಿಪ್ಪು...
09-02-25 07:40 pm
Job News, Yaticorp, Mangalore, AI; ಎಐ ಕ್ಷೇತ್...
08-02-25 10:46 pm
Mines, Krishnaveni Mangalore, Dinesh gundrao;...
08-02-25 01:08 pm
09-02-25 07:35 pm
Mangalore Correspondent
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm
Bidar murder crime: ಬೀದರ್ ; ಮನೆಮಂದಿ ನೋಡಿದ ಹುಡ...
08-02-25 01:00 pm