ಹೊಳೆಗೆ ಬಿದ್ದಿದ್ದಾರೆ ಎನ್ನಲಾಗಿದ್ದ ಗ್ರಾಪಂ ಸದಸ್ಯೆ ಮತ್ತು ಯುವಕ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

16-09-21 03:48 pm       Headline Karnataka News Network   ಕರ್ನಾಟಕ

ಚೆಂಬು ಎನ್ನುವ ಗ್ರಾಮದಲ್ಲಿ ಹೊಳೆಗೆ ಬಿದ್ದು ಕೊಚ್ಚಿ ಹೋಗಿದ್ದಾರೆಂದು ಸುದ್ದಿಯಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯೆ ಮತ್ತು ಆಕೆಯ ಪ್ರಿಯಕರ ಎನ್ನಲಾದ ಯುವಕನ ಶವ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಡಿಕೇರಿ, ಸೆ.16: ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿಭಾಗ ಚೆಂಬು ಎನ್ನುವ ಗ್ರಾಮದಲ್ಲಿ ಹೊಳೆಗೆ ಬಿದ್ದು ಕೊಚ್ಚಿ ಹೋಗಿದ್ದಾರೆಂದು ಸುದ್ದಿಯಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯೆ ಮತ್ತು ಆಕೆಯ ಪ್ರಿಯಕರ ಎನ್ನಲಾದ ಯುವಕನ ಶವ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಾಡಿನ ಮಧ್ಯೆ ಪತ್ತೆಯಾಗಿದೆ.

ಮಡಿಕೇರಿ ತಾಲೂಕು ವ್ಯಾಪ್ತಿಯ ಚೆಂಬು ಗ್ರಾಮ ಪಂಚಾಯಿತಿ ಸದಸ್ಯೆ ಕಮಲ ಎಂಬ ಯುವತಿ ತನ್ನ ಮನೆಯ ಬಳಿಯ ಹೊಳೆಗೆ ಬಿದ್ದು ಕೊಚ್ಚಿ ಹೋಗಿದ್ದಾರೆ ಎನ್ನಲಾಗಿತ್ತು. ಕೆಲವರು ಆಕೆಯನ್ನು ಮನೆಯ ಪಕ್ಕದ ನಿವಾಸಿ ಮುತ್ತು ಎಂಬಾತ ಹೊಳೆಗೆ ತಳ್ಳಿ ತಾನೂ ಹೊಳೆಗೆ ಹಾರಿದ್ದಾನೆ ಎನ್ನುತ್ತಿದ್ದರು. ಇದರ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲ್ಲ.

ಇಂದು ಅದೇ ಗ್ರಾಮದ ಕಾಡಿನಲ್ಲಿ ದೊಡ್ಡ ಮರಕ್ಕೆ ಹತ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಕಮಲ ಮತ್ತು ಮುತ್ತು ಒಂದೇ ಮರಕ್ಕೆ ನೇಣು ಬಿಗಿದುಕೊಂಡಿದು ಸಾವನ್ನಪ್ಪಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇವರ ನಡುವೆ ಅಕ್ರಮ ಸಂಬಂಧ ಇತ್ತೇ ಅಥವಾ ಪ್ರೀತಿಯ ಗೆಳೆತನ ಇತ್ತೇ ಅನ್ನುವುದು ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸಿದ ಬಳಿಕ ಸತ್ಯಾಂಶ ಹೊರಬರಬೇಕಿದೆ. 

The missing case of Chembu gram panchayat (GP) member Kamala ended in a tragic twist. The mortal remains of Kamala (35) and Mutthu (50), who also went missing along with her were found hanging from a tree.