ಬ್ರೇಕಿಂಗ್ ನ್ಯೂಸ್
23-09-21 12:49 pm Headline Karnataka News Network ಕರ್ನಾಟಕ
ಬೆಂಗಳೂರು, ಸೆ.23: ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಯುವತಿಯನ್ನು ಪುಸಲಾಯಿಸಿ ನಗ್ನಚಿತ್ರ ತೆಗೆದು ಬ್ಲಾಕ್ ಮೇಲ್ ಮಾಡಿ, 28 ಲಕ್ಷ ರೂಪಾಯಿ ಹಣ ಪೀಕಿಸಿ ವಂಚಿಸಿದ ಮಂಗಳೂರಿನ ಯುವಕನ ಪ್ರಕರಣ ಅಸೆಂಬ್ಲಿಯಲ್ಲಿ ಪ್ರತಿಧ್ವನಿಸಿದೆ. ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ವಿಧಾನ ಪರಿಷತ್ತಿನಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮಂಗಳೂರಿನ ಮುಡಿಪು ನಿವಾಸಿ ಯುವಕನೊಬ್ಬ ಮದುವೆಯಾಗುವುದಾಗಿ ಹೇಳಿ, ನಂಜನಗೂಡಿನ ಯುವತಿಯನ್ನು ಬ್ಲಾಕ್ ಮೇಲ್ ಮಾಡಿ, 28 ಲಕ್ಷ ರೂಪಾಯಿ ಹಣ ಪೀಕಿಸಿಕೊಂಡಿದ್ದಾನೆ. ಆತನಿಗೆ ಈಗಾಗ್ಲೇ ಬೇರೆ ಮದುವೆಯಾಗಿತ್ತು. ಆದರೆ, ಯುವತಿ ತನ್ನ ತಾಯಿಗೆ ಹುಷಾರಿಲ್ಲ. ತಂದೆ ಇಲ್ಲ. ಅಣ್ಣನಿಗೂ ಹುಷಾರಿಲ್ಲ. ಹಣ ಕೊಡುವಂತೆ ಹೇಳಿ ಯುವತಿ ಅಂಗಲಾಚಿದ್ದಾಳೆ.

ಸೆ.21ರಂದು ಯುವಕ ಮುಡಿಪಿನ ತನ್ನ ಮನೆಗೆ ಬರುವಂತೆ ಹೇಳಿದ್ದರಿಂದ ಆಕೆ ಅಲ್ಲಿಗೆ ತೆರಳಿದ್ದಳು. ಆದರೆ, ಅಲ್ಲಿ ಹೋದ ಯುವತಿಗೆ ಮನೆಯವರು ಸೇರಿ ಹಲ್ಲೆ ನಡೆಸಿದ್ದಾರೆ. ಹಣವನ್ನು ಕೊಡದೆ ಪೀಡಿಸಿದ್ದಾರೆ. ಈ ಬಗ್ಗೆ ಅಲ್ಲಿನ ಕೋಣಾಜೆ ಠಾಣೆಗೆ ಹೋದರೆ ಪೊಲೀಸರು ರಾಕ್ಷಸರ ರೀತಿ ವರ್ತಿಸಿದ್ದಾರೆ. ಠಾಣೆಯ ಪೊಲೀಸರು ತೀರಾ ದುರ್ವರ್ತನೆ ತೋರಿದ್ದಾರೆ. ಈ ಬಗ್ಗೆ ಕೇಸು ದಾಖಲಿಸುವುದು ಬಿಟ್ಟು ಯುವತಿಗೆ ಬುದ್ಧಿವಾದ ಹೇಳಿ, ಆಕೆಯನ್ನು ಮರಳಿ ನಂಜನಗೂಡಿಗೆ ಮರಳಿ ಬಿಡಲು ಮಂಗಳೂರಿನ ಬಸ್ ನಿಲ್ದಾಣಕ್ಕೆ ತಂದು ಬಿಟ್ಟಿದ್ದಾರೆ. ಪೊಲೀಸ್ ವಾಹನದಲ್ಲಿ ಬಿಜೈ ಬಸ್ ನಿಲ್ದಾಣಕ್ಕೆ ತಂದು ಬಿಡಲು ಯತ್ನಿಸಿದ್ದಾರೆ.
ಆನಂತರ ಮಾಧ್ಯಮದವರು ಮತ್ತು ಹಿಂದು ಸಂಘಟನೆಯವರು ಪೊಲೀಸರನ್ನು ಪ್ರಶ್ನೆ ಮಾಡಿದ್ದಾರೆ. ಪೊಲೀಸರು ಆಬಳಿಕ ಮಹಿಳಾ ಠಾಣೆಗೆ ಒಯ್ಯುವುದಾಗಿ ಹೇಳಿದ್ದಾರೆ. ಈ ಬಗ್ಗೆ ಉನ್ನತ ಅಧಿಕಾರಿಗಳ ಬಳಿ ಕೇಳಿದರೆ, ಭಾಸ್ಕರ ಅನ್ನುವ ಒಬ್ಬ ಪೊಲೀಸನ ಹೆಸರು ಹೇಳಿದ್ದಾರೆ. ಭಾಸ್ಕರ ಈ ರೀತಿ ಮಾಡಿದ್ದಾಗಿ ಉನ್ನತ ಅಧಿಕಾರಿಯೊಬ್ಬರು ಹೇಳುತ್ತಾರೆ. ಗೃಹ ಸಚಿವರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಒಳಪಡಿಸಬೇಕು. ಭಾಸ್ಕರ ಎನ್ನುವ ವ್ಯಕ್ತಿಯ ಚರಿತ್ರೆಯ ಬಗ್ಗೆ ತನಿಖೆ ನಡೆಸಬೇಕು. ಈ ವಿಚಾರದ ಬಗ್ಗೆ ಇಡೀ ಸದನ ಬೆಂಬಲವನ್ನು ನಾನು ಕೇಳುತ್ತೇನೆ. ಪೊಲೀಸ್ ಇಲಾಖೆಯಲ್ಲಿ ಈ ರೀತಿಯ ಸಂವೇದನಾಶೀಲ ರಹಿತ ವರ್ತನೆ ಮುಂದೆಂದೂ ಆಗಬಾರದು. ಇದೇ ಮಾದರಿಯ ಕೃತ್ಯ, ಯುವತಿಯರನ್ನು ಶೋಷಣೆ ಮಾಡುವ ಘಟನೆಗಳು ಬಹಳಷ್ಟು ನಡೆದಿದ್ದು, ಈ ಬಗ್ಗೆ ಪ್ರಬಲ ಕಾನೂನು ತರಬೇಕಾಗಿದೆ ಎಂದು ತೇಜಸ್ವಿನಿ ಗೌಡ ಒತ್ತಾಯ ಮಾಡಿದ್ದಾರೆ.
Mangalore Muslim youth cheats Mysuru girl of marriage blackmails her of nude images konaje police slammed by MLC Tejashwani Gowda in Counil session in Bangalore. Also the guy has taken almost 25 lakhs from girl yet no police action has been taken by police says MLC.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
22-09-26 02:57 pm
HK News Staffer
ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತಕ್ಕೆ ಟ್ರಾಪ್ ಆದ ಬಜ್ಪ...
21-09-26 08:21 pm
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm